ಕಾಪು: ಜೇಸಿಐ ಉಡುಪಿ ಸಿಲ್ವರ್ ಸ್ಟಾರ್‌ನ ಆತಿಥ್ಯದಲ್ಲಿ ಜೇಸಿಐ ವಲಯ ಹದಿನೈದರ ಎ, ಬಿ ಮತ್ತು ಸಿ ಪ್ರಾಂತ್ಯಗಳ ಜೇಸಿ ಸದಸ್ಯರುಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಕಚೇರಿಯಲ್ಲಿ ಫೆ. 26ರಂದು ಆಯೋಜಿಸಲಾಗಿದ್ದ ಬಹು ಘಟಕ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ಪೂರ್ವ ವಲಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಇನ್ನಾ ಅವರು ಉದ್ಘಾಟಿಸಿದರು.
ಜೇಸಿಐನ ಪ್ರಾಂತ್ಯ ಎ ವಿಭಾಗದ ವಲಯ ಉಪಾಧ್ಯಕ್ಷೆ ಸೌಮ್ಯಾ ರಾಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಐ.ಟಿ.ಸಿ.ಯ ಹಿರಿಯ ಇಂಜಿನಿಯರ್ ಬಿ. ರಮಾನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ಪ್ರದೀಪ್ ಡಿ. ಜೆ. ಬಳ್ಳಾರಿ ಮತ್ತು ರಾಜೇಶ್ ಶೆಣೈ ಪರ್ಕಳ ತರಬೇತುದಾರರಾಗಿ ಭಾಗವಹಿಸಿದ್ದರು. ತರಬೇತಿ ವಿಭಾಗದ ವಲಯ ನಿರ್ದೇಶಕ ಮಂದಾರ ವಿ. ಕಾಳೆ, ಬಿ. ಪ್ರಾಂತ್ಯದ ವಲಯ ಉಪಾಧ್ಯಕ್ಷ ಸರ್ವಜ್ಞ ತಂತ್ರಿ ಬೆಳ್ಮಣ್, ಸಿ. ಪ್ರಾಂತ್ಯದ ವಲಯ ಉಪಾಧ್ಯಕ್ಷ ಮರಿಯಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು.
ಜೇಸಿಐ ಉಡುಪಿ ಸಿಲ್ವರ್ ಸ್ಟಾರ್‌ನ ಕಾರ್ಯದರ್ಶಿ ಮಲ್ಲಿಕಾ ಕೆ.ಆರ್. ಯುವ ಜೇಸಿ ಅಧ್ಯಕ್ಷ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ 100ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಜೇಸಿಐ ಉಡುಪಿ ಸಿಲ್ವರ್ ಸ್ಟಾರ್‌ನ ಅಧ್ಯಕ್ಷೆ ಜ್ಯೋತಿ ರಮಾನಾಥ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ ಪ್ರಶಾಂತ್ ವಂದಿಸಿದರು.