Advertisement
ಸೆ. 15ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸರಕಾರೇತರ ಏಕೈಕ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ 16ನೇ ವಾರ್ಷಿಕ ಮಹಾಸಭೆಯ ಅನಂತರ ನಡೆದ ಬಹಿರಂಗ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಅದಾನಿ ಕಂಪೆನಿಯ ಉತ್ತಮ ಸೇವೆಯಿಂದಾಗಿ ಸ್ಥಳೀಯರು ಹಾರುಬೂದಿ ಮತ್ತು ಇನ್ನಿತರ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಪ್ರಸ್ತುತ ದೃಷ್ಟಿಯಲ್ಲಿ ಅದಾನಿ ಕಂಪೆನಿಯು ಉತ್ತಮ ಸೇವೆಯೊಂದಿಗೆ ಅವಿಭಜಿತ ಜಿಲ್ಲೆಗಳಿಗೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡುವಂತಾಗಬೇಕು. ಎಲ್ಲರ ಸಹಕಾರದೊಂದಿಗೆ ಸಮಿತಿಯು ಒಟ್ಟಾಗಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದರೊಂದಿಗೆ ಬ್ರಹ್ಮಾವರದಲ್ಲಿ ದ್ವಿತೀಯ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯವಿದ್ದು, ಅದಕ್ಕಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಬೇಕಾದ ಅನಿವಾರ್ಯತೆ ಇದೆ. ಮತ್ಸéಗಂಧಾ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಸಮಿತಿಯು ಶೀಘ್ರದಲ್ಲೇ ರೈಲ್ವೇ ಸಚಿವರೊಂದಿಗೆ ಚರ್ಚಿಸುವುದು ಎಂದು ಹೇಳಿದರು.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಮಾತನಾಡಿ, ಪರಿಸರ ಪ್ರೇಮಿಯ ಪ್ರಾಥಮಿಕ ಸಭೆಯಲ್ಲಿ ಪಾಲ್ಗೊಂಡು ಸಮಿತಿಯ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಉದ್ದೇಶ ನಿಸ್ವಾರ್ಥ ಸೇವೆಯಾಗಿದ್ದು, ಜಿಲ್ಲೆಯ ಅಭಿವೃದ್ದಿ
ಯಾಗಬೇಕು. ನಮ್ಮವರಿಗೆ ಉದ್ಯೋಗವೂ ಸಿಗಬೇಕು. ಅದರೊಂದಿಗೆ ನಮಗೆ ವಿದ್ಯುತ್ ಕೂಡಾ ಬೇಕು. ಈ ಬಗ್ಗೆ ಸಮಿತಿಯು ಹೋರಾಟ ನಡೆಸಿದೆ ಎಂದು ನುಡಿದು ಸಮಿತಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಸಮಿತಿಯ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಮಾತನಾಡಿ, ಸದಸ್ಯತ್ವ ನೋಂದಾವಣೆ ಹೆಚ್ಚಿಸುವತ್ತ ಸಂಸ್ಥೆಯು ಮುಂದಿನ ದಿನಗಳಲ್ಲಿ ಗಮನ ಹರಿಸಲಿದೆ. ಜಿಲ್ಲೆಯ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತುಳುವರಿಗಾಗಿ ಪ್ರಾಧಾನ್ಯ ನೀಡುವುದರ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಮತ್ಸÂಗಂಧಾ ರೈಲಿನಲ್ಲಿ ಹೆಚ್ಚುತ್ತಿರುವ ಕಳ್ಳತನ, ಪ್ರಯಾಣಿಕರ ಸುರಕ್ಷತೆ
ಬಗ್ಗೆ ರೈಲ್ವೇ ಸಚಿವ ರೊಂದಿಗೆ ಚರ್ಚಿಸ ಲಿದ್ದೇವೆ. ಜಯಕೃಷ್ಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಸಂಸ್ಥೆಯಿಂದ ಪರಿಸರ ಹಾಗೂ ಜನರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಮುಂದಾ ಗಬೇಕು ಎಂದರು.
ಸಮಿತಿಯ ಉಪಾ ಧ್ಯಕ್ಷರಾದ ನ್ಯಾಯ ವಾದಿ ಸುಭಾಷ್ ಶೆಟ್ಟಿ, ವಿಶ್ವನಾಥ ಮ್ಹಾಡ, ರಂಗಕರ್ಮಿ ಸುರೇಂದ್ರ ಕುಮಾರ್ ಹೆಗ್ಡೆ, ಗಣೇಶ್ ಶೇರಿಗಾರ್ ಮೊದಲಾದವರುಸಲಹೆ ಸೂಚನೆಗಳನ್ನು ನೀಡಿ ದರು. ಈ ಸಂದರ್ಭದಲ್ಲಿ ಪತ್ತನಾಜೆ ಚಲನಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ತೋನ್ಸೆ ಜಯಕೃಷ್ಣ ಶೆಟ್ಟಿ ಅವರನ್ನು ಸಂಸ್ಥೆಯ ಸದಸ್ಯರು ಅಭಿನಂದಿಸಿದರು.
Related Articles
Advertisement
ಸಮಿತಿಯ ಪದಾಧಿಕಾರಿಗಳಾದ ಸಿಎ ಐ. ಆರ್. ಶೆಟ್ಟಿ, ಜಿ. ಟಿ. ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ತೋನ್ಸೆ ಸಂಜೀವ ಪೂಜಾರಿ, ಹಿರಿಯಡ್ಕ ಮೋಹನ್‌ದಾಸ್, ಕೆ. ಎಂ. ಕೋಟ್ಯಾನ್, ರವಿ ಮೆಂಡನ್ ಕುರ್ಕಾಲ್, ರಂಜನಿ ಆರ್. ಮೊಲಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪರಿಸರದ ಕಾಳಜಿಯೊಂದಿಗೆ ಅಭಿವೃದ್ಧಿ ಕೆಲಸವಾಗಬೇಕು. ಹುಟ್ಟೂರಿನ ಮೇಲೆ ಪ್ರೀತಿ, ಗೌರವ ನಮಗಿರಬೇಕು. ಸಮಿತಿಯ ಪರಿಸರದ ಕಾಳಜಿಯೊಂದಿಗೆ ಸಾಮಾನ್ಯ ಜನತೆಗೆ ಉದ್ಯೋಗ ಲಭಿಸುವಂತಾಗಲು ಸಮಿತಿಯು ಕಾರ್ಯಪ್ರವೃತ್ತವಾಗಬೇಕು – ಪ್ರಭಾಕರ ಎಲ್. ಶೆಟ್ಟಿ (ಅಧ್ಯಕ್ಷರು: ಬಂಟರ ಸಂಘ ಮುಂಬಯಿ). ಮಾಲಿನ್ಯ ರಹಿತ ಕೈಗಾರಿಕೆಗಳನ್ನು ನಾವು ಪ್ರೋತ್ಸಾಹಿಸಬೇಕು. ಹೊಸ ಉದ್ದಿಮೆಗಳಿಂದ ಪರಿಸರದ ಅಭಿವೃದ್ಧಿಯೊಂದಿಗೆ ಯುವಕರಿಗೆ ಉದ್ಯೋಗವು ಲಭಿಸುತ್ತದೆ. ಆದರೆ ಉದಿÂಮೆಗಳು ಪರಿಸರ ಕಾಳಜಿಗೆ ಮಹತ್ವ ನೀಡಬೇಕು
– ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ
(ಅಧ್ಯಕ್ಷರು: ಬೋಂಬೆ ಬಂಟ್ಸ್ ಅಸೋಸಿಯೇಶನ್). ಊರಿನ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತುಳುವರಿಗಾಗಿ ಕೋಟಾವಿದ್ದು, ಇದು ಅವಳಿ ಜಿಲ್ಲೆಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಅಳವಡಿಕೆಯಾಗಬೇಕು. ಇದರ ಬಗ್ಗೆ ಸಮಿತಿಯು ಗಮನ ಹರಿಸಬೇಕು
– ಉಳೂ¤ರು ಮೋಹನ್‌ದಾಸ್ ಶೆಟ್ಟಿ
(ಗೌರವ ಕಾರ್ಯದರ್ಶಿ: ಬಂಟರ ಸಂಘ ಮುಂಬಯಿ). ಮಾಲಿನ್ಯ ರಹಿತ ಉದ್ದಿಮೆಗಳು ಇಂದು ಅಗತ್ಯವಾಗಿದ್ದು, ಅದರೊಂದಿಗೆ ಸ್ವತ್ಛತೆಯೆಡೆಗೂ ನಾವು ಗಮನ ಹರಿಸಬೇಕು. ಪ್ಲಾಸ್ಟಿಕ್ ಸಮಸ್ಯೆಯ ನಿವಾರಣೆಯಲ್ಲೂ ನಾವು ಹೆಚ್ಚಿನ ಕಾಳಜಿ ವಹಿಸಬೇಕು
– ಬಿ. ವಿವೇಕ್ ಶೆಟ್ಟಿ (ಮಾಜಿ ಅಧ್ಯಕ್ಷರು: ಬಂಟರ ಸಂಘ). ಪರಿಸರ ಪ್ರೇಮಿ ಸಮಿತಿಯು ಪರಿಸರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಊರಿನಲ್ಲಿ ಸದಸ್ಯತ್ವವನ್ನು ಹೆಚ್ಚಿಸಿದಾಗ ಸಂಘಟನೆಯು ಬಲಗೊಳ್ಳುತ್ತದೆ. ಆದರ ಬಗ್ಗೆ ಸಮಿತಿಯು ಗಮನ ಹರಿಸಬೇಕು
– ಫೆಲಿಕ್ಸ್ ಡಿಸೋಜಾ
(ಅಧ್ಯಕ್ಷರು: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅವಿಭಜಿತ ದಕ್ಷಿಣ ಕನ್ನಡ). ಸಮಿತಿಯಲ್ಲಿ ಮಹಿಳಾ ಸದಸ್ಯೆಯರ ಸಂಖ್ಯೆಯಲ್ಲಿ ಹೆಚ್ಚಿಸಬೇಕು. ಮಹಿಳೆಯರು ಪರಿಸರದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗುವಂತೆ ನಾವು ನೋಡಿಕೊಳ್ಳಬೇಕು
– ಚಿತ್ರಾ ಶೆಟ್ಟಿ (ಉಪಾಧ್ಯಕ್ಷೆ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ). ಉನ್ನತ ಉದ್ದಿಮೆಗಳು ಊರಿನಲ್ಲಿ ಅವರಿಗೆ ಬೇಕಾಗುವಷ್ಟು ಜಾಗವನ್ನು ಖರೀದಿ ಮಾಡಬೇಕು. ಹೆಚ್ಚಿನವರು ತಮಗೆ ಅವಶ್ಯಕತೆಯಿರುವುದಕ್ಕಿಂತ ಹೆಚ್ಚಿನ ಕೃಷಿ ಸ್ಥಳಗಳನ್ನು ಪಡೆದು ಅನಂತರ ಇತರರಿಗೆ ಮಾರಾಟ ಮಾಡಿರುವುದು ಕಂಡು ಬರುತ್ತಿದ್ದು, ಇದು ವಿಷಾದನೀಯವಾಗಿದೆ
– ಪಡುಬಿದ್ರೆ ಹರೀಶ್ ಶೆಟ್ಟಿ (ಅಧ್ಯಕ್ಷರು: ತುಳುಕೂಟ ಐರೋಲಿ).