Advertisement

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ಸಾಧಕರಿಗೆ ಸಮ್ಮಾನ

12:59 PM Nov 15, 2018 | Team Udayavani |

ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಮತ್ತು ಔದ್ಯೋಗಿಕ ಸರ್ವಾಂಗೀಣ ಅಭಿವೃದ್ಧಿಗಾಗಿ 18 ವರ್ಷಗಳಿಂದ ಸೇವೆಯಲ್ಲಿರುವ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಲ್ಲಿ ಮಹಾನಗರದಲ್ಲಿರುವ ಜಿಲ್ಲೆಯ ಜಾತೀಯ ಸಂಘಟನೆಗಳನ್ನೊಳಗೊಂಡ ಏಕೈಕ ಸರಕಾರೇತರ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 17ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್‌ ಕಟ್ಟಡದ ಸಂಕೀರ್ಣದಲ್ಲಿರುವ ಸಭಾಗೃಹದಲ್ಲಿ ನಡೆಯಿತು.

Advertisement

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಾಜಿ ಅಧ್ಯಕ್ಷ ಎಲ್‌.ವಿ. ಅಮೀನ್‌, ಗಾಣಿಗ ಸಮಾಜ ಮುಂಬಯಿ ಇದರ ರಾಮಚಂದ್ರ ಗಾಣಿಗ, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಸಮಾಜ ಸೇವಕ ಡಿ.ಎಂ. ಶೇರಿಗಾರ್‌, ಕನ್ನಡಿಗ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ನ್ಯಾಯವಾದಿ ಮಹೇಶ್‌ ಕೋಟ್ಯಾನ್‌, ಸಮಿತಿಯ ನಿರ್ಗಮನ ಅಧ್ಯಕ್ಷ ಧರ್ಮಪಾಲ್‌ ಯು. ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.

ಹಿರಿಯ ಕನ್ನಡಿಗ ಎಂ.ಡಿ. ಶೆಟ್ಟಿ, ಜಗದೀಶ್‌ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್‌ ಡಿ’ಸೋಜಾ, ಸುರೇಂದ್ರ ಮೆಂಡನ್‌, ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ,  ಬಿಎಸ್‌ಕೆಬಿ ಅಸೋಸಿಯೇಶನ್‌ನ ಉಪಾಧ್ಯಕ್ಷ ವಾಮನ್‌ ಹೊಳ್ಳ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ದೇವಾಡಿಗ, ಗಾಣಿಗ ಸಮಾಜ ಮುಂಬಯಿ ಇದರ  ರಾಮಚಂದ್ರ ಗಾಣಿಗ, ಕುಲಾಲ ಸಂಘ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಶಾಫಿ ವೆಲ್ಫೆàರ್‌ ಅಸೋಸಿಯೇಶನ್‌ನ ಮೊಹಿದ್ದೀನ್‌ ಮುಂಡ್ಕೂರು, ಒಕ್ಕಲಿಗ ಸಂಘ ಮುಂಬಯಿ ಜೀತೇಂದ್ರ ಗೌಡ, ಭಂಡಾರಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ರಾಮಣ್ಣ ಭಂಡಾರಿ, ಕ್ರಿಶ್ಚಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ನ ಅಂಥೊನಿ ಸಿಕ್ವೇರಾ, ಅಖೀಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಮುನಿರಾಜ ಜೈನ್‌, ಸಾಫಲ್ಯ ಸೇವಾ ಸಂಘದ ಶ್ರೀನಿವಾಸ ಸಾಫಲ್ಯ, ವಿಶ್ವಕರ್ಮ ಅಸೋಸಿಯೇಶನ್‌ನ ಸದಾನಂದ ಆಚಾರ್ಯ, ಜಿಎಸ್‌ಬಿ ಸಭಾದ ಕಮಲಾಕ್ಷ ಸರಾಫ್‌ ಇವರನ್ನು ಜಯಕೃಷ್ಣ ಶೆಟ್ಟಿ ಅವರು ಗೌರವಿಸಿದರು.

ನೂತನ ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಎಲ್‌. ಭಂಡಾರಿ, ಪಿ. ಡಿ. ಶೆಟ್ಟಿ, ರಾಮಚಂದ್ರ ಗಾಣಿಗ, ಸಿಎ ಐ.ಆರ್‌. ಶೆಟ್ಟಿ, ಎಲ್‌.ವಿ. ಅಮೀನ್‌, ಚಂದ್ರಶೇಖರ್‌ ಬೆಳ್ಚಡ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ದಾಸ್‌, ಗೌರವ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್‌, ಜತೆ ಕಾರ್ಯದರ್ಶಿಗಳಾದ ರವಿ ದೇವಾಡಿಗ, ಹ್ಯಾರಿ ಸಿಕ್ವೇರಾ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next