Advertisement

ಜಯಶ್ರೀಕೃಷ್ಣ  ಪರಿಸರ ಪ್ರೇಮಿ ಸಮಿತಿ 16ನೇ ವಾರ್ಷಿಕ ಮಹಾಸಭೆ

02:26 PM Sep 23, 2017 | Team Udayavani |

ಮುಂಬಯಿ: ಅವಿಭಜಿತ ಜಿಲ್ಲೆಯ ಅಭಿವೃದ್ಧಿಗಾಗಿ ಸ್ಥಾಪನೆಗೊಂಡು ಕಾರ್ಯ ನಿರತಗೊಂಡಿರುವ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ 16 ನೇ ವಾರ್ಷಿಕ ಮಹಾಸಭೆಯು ಸೆ. 15 ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್‌ ಸಂಕೀರ್ಣದ ಸಭಾಗೃಹದಲ್ಲಿ ಜರಗಿತು.

Advertisement

ಪ್ರಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಯಶ್ರೀಕೃಷ್ಣ  ಪರಿಸರ ಪ್ರೇಮಿ ಸಮಿತಿ ಮುಂಬಯಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿ ಸಭೆಯಲ್ಲಿ ಮಂಜೂರು ಗೊಳಿಸಿದರು.

ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ವಿಸ್ತಾರವಾಗಿ ತಿಳಿಸಿದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮಪಾಲ ಯು. ಹೆಗ್ಡೆ ಅವರು ಅಧ್ಯಕ್ಷೀಯ ಭಾಷಣದಲ್ಲಿ, ಸಮಿತಿಯು 16 ವರ್ಷಗಳಿಂದ ಅವಿಭಜಿತ ಜಿಲ್ಲೆಗಳ ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸಿದೆ. ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ನಿಲುಗಡೆಯ ಬಗ್ಗೆ ಇದ್ದ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ ಕಾರ್ಯವೆಸಗಲಿದೆ. ಪಡುಬಿದ್ರೆಯ ಅದಾನಿ ಸಂಚಾಲಿತ ವಿದ್ಯುತ್‌ ಸ್ಥಾವರಕ್ಕೆ ಮತ್ತು ಕಾವ್ಯಾ ಪೂಜಾರಿ ಕುಟುಂಬಕ್ಕೆ ಸಾಂತ್ವನ ನೀಡಿ, ಆರ್ಥಿಕ ನೆರವು ನೀಡಿದ್ದಲ್ಲದೆ, ಆಳ್ವಾಸ್‌ ಎಜುಕೇಶನ್‌ ಆಡಳಿತ ನಿರ್ದೇಶಕ ಮೋಹನ್‌ ಆಳ್ವ ಅವರನ್ನು ಭೇಟಿಯಾಗಿದ್ದೇವೆ. ಕಾವ್ಯಾಳ ಸಾವಿಗೂ ನ್ಯಾಯ ಸಿಗಬೇಕು. ಶಿಕ್ಷಣ ಸಂಸ್ಥೆಗೂ ಹಾನಿಯಾಗಬಾರದು ಎಂಬ ನಿಲುವು ನಮ್ಮದು.  ಸಮಿತಿಯ ಪ್ರಗತಿಗೆ ಜಯಕೃಷ್ಣ ಶೆಟ್ಟಿ ಅವರು ಮಹತ್ತರವಾದ ಮಾರ್ಗದರ್ಶನ ನೀಡುತ್ತಿದ್ದಾರೆ. ಸಮಿತಿಯು ಯಾವುದೇ ಸಮಸ್ಯೆಯ ಬಗ್ಗೆ ಹೋರಾಟ ನಡೆಸಲು ಸಮಿತಿಯಲ್ಲಿ ಸದಸ್ಯತನ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸದಸ್ಯತ್ವ ವೃದ್ಧಿಸುವ ಪ್ರಕ್ರಿಯೆ ಅಗತ್ಯವಾಗಿ ನಡೆಯಬೇಕಿದೆ ಎಂದರು.

ವೇದಿಕೆಯಲ್ಲಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಉಪಾಧ್ಯಕ್ಷರುಗಳಾದ ಸಿಎ ಐ. ಆರ್‌. ಶೆಟ್ಟಿ, ಜಗನ್ನಾಥ ಗಾಣಿಗ, ನಿತ್ಯಾನಂದ ಡಿ. ಕೋಟ್ಯಾನ್‌, ಚಿತ್ರಾ ಆರ್‌. ಶೆಟ್ಟಿ ಕಲ್ಯಾಣ್‌, ಜತೆ ಕೋಶಾಧಿಕಾರಿ ತುಳಸಿದಾಸ್‌ ಹಾಗೂ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಫೆಲಿಕ್ಸ್‌ ಡಿ’ಸೋಜಾ ಉಪಸ್ಥಿತರಿದ್ದರು. 

Advertisement

ಪ್ರಾರಂಭದಲ್ಲಿ ರಜನಿ ಮೊಲಿ ಪ್ರಾರ್ಥನೆಗೈದರು. ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ವಂದಿಸಿದರು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಂಸ್ಥೆಯ ಹಿತಚಿಂತಕರು, ಸಲಹೆಗಾರರು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next