Advertisement

ಅತ್ತೆ ಮನೆಗಿಲ್ಲ ಸೊಸೆಗೆ ಎಂಟ್ರಿ; ವಾಪಸಾದ ದೀಪಾ

01:58 PM Jun 12, 2017 | Team Udayavani |

ಚೆನ್ನೈ: ಅತ್ತೆ ಮನೆಗೆ ಸೊಸೆಗೆ ಪ್ರವೇಶವಿಲ್ಲ! ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸೊಸೆ, ದೀಪಾ ಜಯಕುಮಾರ್‌ ಅವರು ಪೋಯೆಸ್‌ ಗಾರ್ಡನ್‌ ಪ್ರವೇಶಿಸದಂತೆ ಜಯಾ ಬೆಂಬಲಿಗರೇ ತಡೆದು ವಾಪಸ್‌ ಕಳುಹಿಸಿದ ನಾಟಕೀಯ ಪ್ರಸಂಗ ರವಿವಾರ ನಡೆದಿದೆ. ಪೋಯೆಸ್‌ ಗಾರ್ಡನ್‌ನಲ್ಲಿ ಜಯಾ ಪ್ರತಿಮೆಗೆ ಮಾಲಾರ್ಪಣೆ ಮಾಡಲೆಂದು ದೀಪಾ ಆಗಮಿಸಿದ್ದರು. ಮಾಲಾರ್ಪಣೆಗೆ ಅವಕಾಶ ಕಲ್ಪಿಸಿದ ಬಳಿಕ, ಒಳಹೋಗಲು ಯತ್ನಿಸಿದರು. ಅಷ್ಟರಲ್ಲಿ ಜಯಾ ಬೆಂಬಲಿಗರು ದೀಪಾರನ್ನು ಅಡ್ಡಗಟ್ಟಿ, ಮನೆಗೆ ಬೀಗ ಹಾಕಿ ಅವರನ್ನು ವಾಪಸ್‌ ಕಳುಹಿಸಿದರು ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next