Advertisement

ಜಯಪುರ ಸಹಕಾರಿ ಸಂಘ ಲಾಭದತ್ತ

12:55 PM Sep 29, 2018 | |

ಕೊಪ್ಪ: ತಾಲೂಕಿನ ಜಯಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಸಂಘದ ಉಪಾಧ್ಯಕ್ಷ ಕೆ.ಎಂ.ಕಾಸಿಂ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ನಮ್ಮ ಸಂಸ್ಥೆಯು ಈಗ 42ನೇ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಕಳೆದ 7 ವರ್ಷದ ಹಿಂದಿನ ಸಂಚಿತ ನಷ್ಟವನ್ನೆಲ್ಲಾ ತುಂಬಿ ಲಾಭದ ಹಾದಿಯಲ್ಲಿದೆ. ನಿರ್ದೇಶಕ ಮಂಡಳಿಯ ಸಹಕಾರದಿಂದ ಈ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರು ಮತ್ತು ಸದಸ್ಯರು ಹೆಚ್ಚಿನ ವ್ಯವಹಾರವನ್ನು ನಡೆಸಿದಲ್ಲಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದರು.

Advertisement

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಂಕರ್‌ ಗೌಡ ವಾರ್ಷಿಕ ವರದಿ ಮಂಡಿಸಿ, ವರ್ಷದ ಪ್ರಾರಂಭದಲ್ಲಿ 2,67,08,685 ರೂ. ಷೇರು ಧನವನ್ನು ಹೊಂದಿದ್ದು, ಹಾಲಿ ವರ್ಷದಲ್ಲಿ 4,45,103 ರೂ. ಷೇರು ಸಂಗ್ರಹಿಸಲಾಗಿದೆ. ವರ್ಷದ ಕೊನೆಯಲ್ಲಿ 3,12,03,788 ರೂ. ಷೇರು ಧನ ಹೊಂದಿದ್ದು, ಈ ಸಾಲಿನಲ್ಲಿ 5,85,977 ರೂ. ಲಾಭ ಹೊಂದಿರುತ್ತದೆ. ಸಂಘದಲ್ಲಿ ಮಹಿಳೆಯರು ಹಾಗೂ ಪುರುಷರು ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡು ವ್ಯವಹಾರ ನಡೆಸುತ್ತಿದ್ದು, ಸ್ವ-ಸಹಾಯ ಸಂಘದ ಮೂಲಕ ತಮ್ಮ ತಮ್ಮ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು.

ಈ ಸಭೆಯಲ್ಲಿ ನಿರ್ದೇಶಕರುಗಳಾದ ಎಚ್‌. ಕೆ.ಯಜ್ಞಮೂರ್ತಿ, ಎ.ಎನ್‌ ಅನಿಲ್‌ಕುಮಾರ್‌, ಡಿ.ಪಿ ವೆಂಕಟೇಶ, ಅನಂತ್‌ ಎಸ್‌, ಜಯಲಕ್ಷ್ಮಿ ಸುಬ್ಬರಾಜು, ಕಮಲಾಕ್ಷಿ, ಡಿ.ಪಿ ಚಿನ್ನಯ್ಯ ಹಾಗೂ ಶೃಂಗೇರಿ ವೃತ್ತದ ಸಿ.ಡಿ.ಸಿ.ಸಿ ಬ್ಯಾಂಕ್‌ ಮೇಲ್ವಿಚಾರಕ ರಮೇಶ್‌ ಇದ್ದರು. ಈ ಸಭೆಯಲ್ಲಿ ಸಂಘದಲ್ಲಿ 16 ವರ್ಷ ಸೇವೆ ಸಲ್ಲಿಸಿದ ವ್ಯಾಪಾರ ಗುಮಾಸ್ತ ನಾಗೇಂದ್ರರವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next