Advertisement

ಜಯಂತಿಗಳು ಸರ್ವರಿಂದಾಗಲಿ

11:25 AM Nov 06, 2017 | Team Udayavani |

ಸೇಡಂ: ಮಹಾತ್ಮರ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದವರ ಜಯಂತಿಗಳಲ್ಲಿ ಸರ್ವ ಜನಾಂಗದವರು ಪಾಲ್ಗೊಂಡು
ಸಮಾನತೆ ಸಾರಬೇಕು ಎಂದು ಎಸ್ಪಿ ಎನ್‌. ಶಶಿಕುಮಾರ ಹೇಳಿದರು. ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಟಿಪ್ಪು ಸುಲ್ತಾನ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ ಅನೇಕ ಮಹನಿಯರ ಜಯಂತಿಗಳನ್ನು ಘೋಷಿಸಿದೆ. ಆದರೆ ಮಹನಿಯರನ್ನು ಒಂದು ಜಾತಿ, ಕೋಮಿಗೆ ಸೀಮಿತಗೊಳಿಸುತ್ತಿರುವುದು ದುರ್ದೈವದ ಸಂಗತಿ.

Advertisement

ಪ್ರತಿಯೊಬ್ಬರೂ ಜಾತಿ, ಬೇಧ ಮರೆತು ಜಯಂತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೋಮು ಸೌಹಾರ್ದತೆ ಮೂಡಿಸಬೇಕು. ಅಲ್ಲದೆ ನ.10 ರಂದು ಜರುಗುವ ಟಿಪ್ಪು ಸುಲ್ತಾನ ಜಯಂತಿ ಹಿನ್ನೆಲೆಯಲ್ಲಿ ಕಳೆದ ವರ್ಷದ ರಾಜ್ಯದಲ್ಲಿ ಸಂಭವಿಸಿದ ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆ ಹೆಚ್ಚಿನ ನಿಗಾವಹಿಸಲಿದೆ. ಅದರನ್ವಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಡಾ| ಸುಶೀಲಾ ಮಾತನಾಡಿ, ಶಾಂತಿಯುತವಾಗಿ ಜಯಂತಿಗಳನ್ನು ಆಚರಿಸುವ ಮೂಲಕ
ದೇಶದ ಗೌರವ ಎತ್ತಿ ಹಿಡಿಬೇಕು ಎಂದು ಸಲಹೆ ನೀಡಿದರು. ಮಜ್ಲೀಸೆ ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಬಶೀರ ಖಾನ್‌, ಟಿಪ್ಪು ಸುಲ್ತಾನ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸೈಯ್ಯದ್‌ ಆದಮ್‌, ತುರಾಬ ಉಲ್‌ ಹಕ್‌ ಮಾತನಾಡಿದರು.

ಡಿವೈಎಸ್ಪಿ ಯು. ಶರಣಪ್ಪ ಸ್ವಾಗತಿಸಿದರು. ಸಿಪಿಐ ಪಂಚಾಕ್ಷರಿ ಸಾಲಿಮಠ ನಿರೂಪಿಸಿದರು. ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next