ಇಡೀ ಜಗತ್ತು ಓಡುತ್ತಿದೆ. ಎಲ್ಲರೂ ಅವರವರ ಹಾದಿಯಲ್ಲಿ ಓಡುತ್ತಿದ್ದಾರೆ. ಆದರೆ, ಎಲ್ಲರೂ ಒಟ್ಟಿಗೇ ಓಡುವ ಅವಕಾಶವೊಂದಿದೆ. ಅದುವೇ “ಬೆಂಗಳೂರು ರನ್ನರ್ಸ್ ಯುನಿಟಿ ರನ್’. ಇದೊಂದು ಮುಕ್ತ ಓಟವಾಗಿದ್ದು, ಭಾಗವಹಿಸುವವರು ತಮಗಿಷ್ಟ ಬಂದಷ್ಟು ದೂರ ಓಡಬಹುದು ಅಥವಾ ನಡೆಯಬಹುದು. ಓಟದ ಬಳಿಕ ನೃತ್ಯ ಕಾರ್ಯಕ್ರಮ ಇದ್ದು, ಓಟಗಾರರು ನೃತ್ಯಗಾರರಾಗಲಿದ್ದಾರೆ. ಇದರೊಂದಿಗೆ “ಕಿಡ್ಸ್ ಆ್ಯಕ್ಟಿವಿಟಿ ಝೊàನ್’, ಯೋಗ, ಪಕ್ಷಿ ವೀಕ್ಷಣೆ ಮುಂತಾದ ಕಾರ್ಯಕ್ರಮಗಳು ಕೂಡ ಇವೆ. ಜಯನಗರ ಜಾಗ್ವಾರ್, ಇತರ 25 ಓಟಗಾರರ ಗುಂಪಿನೊಂದಿಗೆ ಸೇರಿಕೊಂಡು ಈ ಕಾರ್ಯಕ್ರಮ ನಡೆಸುತ್ತಿದ್ದು, ಈ ಬಾರಿ 3000ಕ್ಕಿಂತ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ.ನೋಂದಣಿಗೆ: : //jayanagarjaguars.com/brur/ ಸಂಪರ್ಕಿಸಿ. ಹೆಚ್ಚಿನ ಮಾಹಿತಿಗೆ: 83173 31920.
ಎಲ್ಲಿ? ಪ್ರçಡ್ ವಾಟಿಕಾ, ಬನ್ನೇರುಘಟ್ಟ ರಸ್ತೆ
ಯಾವಾಗ? ಫೆ. 25, ಭಾನುವಾರ ಬೆಳಗ್ಗೆ 6-1
ಪ್ರವೇಶ ಶುಲ್ಕ: 500 ರೂ.