ಸಿಕ್ಕಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನಿಂದ ಈಡಿಗ ಸಮುದಾಯದ ಕೋಟಾದಡಿ ವಿಧಾನಪರಿಷತ್ ಸದಸ್ಯರಾದ ನಟಿ ಜಯಮಾಲಾ ಅವರಿಗೆ ಸಚಿವ ಸ್ಥಾನ ದೊರೆತಿದೆ.
Advertisement
ಪರಿಷತ್‌ನಿಂದ ಕಾಂಗ್ರೆಸ್‌ನಿಂದ ಎಚ್.ಎಂ. ರೇವಣ್ಣ, ಎಸ್.ಆರ್.ಪಾಟೀಲ್, ಆರ್.ಬಿ.ತಿಮ್ಮಾಪುರ, ಜೆಡಿಎಸ್‌ನಿಂದ ಬಸವರಾಜ ಹೊರಟ್ಟಿ, ಮನೋಹರ್, ಶರವಣ, ಫಾರೂಕ್ ಅವರು ಆಕಾಂಕ್ಷಿಗಳಾಗಿದ್ದರೂ ಯಾರಿಗೂ ಅವಕಾಶ ಸಿಕ್ಕಿಲ್ಲ. ವಿಧಾನಪರಿಷತ್‌ನಲ್ಲಿ ಆಡಳಿತ ಪಕ್ಷದ ನಾಯಕ ಸ್ಥಾನವೂ ಖಾಲಿ ಇದ್ದು, ಜಯಮಾಲ ಅವರು ಒಬ್ಬರೇ ಸಚಿವರಾಗಿರುವುದಿಂದ ಸದ್ಯಕ್ಕೆ ಅವರೇ ಸಭಾನಾಯಕಿ ಎಂದು ಹೇಳಲಾಗುತ್ತಿದೆ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಪರಿಷತ್‌ನಿಂದ ಎಸ್.ಆರ್.ಪಾಟೀಲ್, ಎಚ್.ಎಂ.ರೇವಣ್ಣ, ಡಾ.ಜಿ.ಪರಮೇಶ್ವರ್, ಎಂ.ಆರ್. ಸೀತಾರಾಂ, ಆರ್.ಬಿ.ತಿಮ್ಮಾಪುರ ಸಚಿವರಾಗಿದ್ದರು.