Advertisement
ಜು. 22 ರಂದು ಪೂರ್ವಾಹ್ನ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನದಲ್ಲಿ ಜರುಗಿದ ಜಯಲಕ್ಷ್ಮೀ ಪಥಸಂಸ್ಥೆಯ 18 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಲು ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.
Related Articles
Advertisement
ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಜೆ. ಗೌಡ, ಉದ್ಯಮಿಗಳಾದ ಸದಾನಂದ ಗಾಯಕ್ವಾಡ್, ಪುರುಷೋತ್ತಮ ಗೌಡ, ನಾಗರಾಜ ಗೌಡ, ರಮೇಶ್ ಗೌಡ, ಕರಿಯಪ್ಪ ಗೌಡ, ಪುಟ್ಟಪ್ಪ ಗೌಡ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎ. ಕೆಂಪೇಗೌಡ, ಕಾರ್ಯದರ್ಶಿ ಕೆ. ರಾಜೇ ಗೌಡ, ನಿರ್ದೇಶಕರಾದ ಮುತ್ತೇ ಎಸ್. ಗೌಡ, ಅನುಸೂಯಾ ಆರ್. ಗೌಡ, ದೇವಕಿ ನಾರಾಯಣ ಗೌಡ, ಸುನಂದಾ ಆರ್. ಗೌಡ, ರಾಹುಲ್ ಯು. ಲಗಡೆ, ಭಾರತಿ ಎಸ್. ಗಾಯಕ್ವಾಡ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸೊಸೈಟಿಯ ಪ್ರಬಂಧಕ ಪಶುìರಾಮ್ ಕೆ. ದೌಂಡ್ ಸ್ವಾಗತಿಸಿ ಸಭಾ ಕಲಾಪ ನಡೆಸಿ ಮಾತನಾಡಿ, ಸೊಸೈಟಿಯ ಗತ ಕ್ಯಾಲೆಂಡರ್ ವರ್ಷದಲ್ಲಿ 4,726 ಸದಸ್ಯರನ್ನೊಳಗೊಂಡಿದೆ. 2.77 ಕೋ. ರೂ. ಶೇರ್ ಕ್ಯಾಪಿಟಲ್, 2.82 ಕೋ. ರೂ. ರಿಝರ್ವ್ ಫಂಡ್, 33.56 ಕೋ. ರೂ. ಠೇವಣಾತಿ ಹೊಂದಿದ್ದು 41.64 ಕೋ. ರೂ. ಕಾರ್ಯಮಾನ ಬಂಡವಾಳ ವ್ಯವಹರಿಸಿದೆ ಎಂದರು.
ಹಾಗೂ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸೊಸೈಟಿಯ ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ “ಎ’ ದರ್ಜೆ ಸ್ಥಾನದೊಂದಿಗೆ ದೃಢೀಕೃತಗೊಂಡಿದೆ ಎಂದರು. ಕಾರ್ಯಾಧ್ಯಕ್ಷರು ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ವಿತರಿಸಿದರು. ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು. ಸೊಸೈಟಿಯ ಗ್ರಾಹಕರು, ಶೇರುದಾರರು, ಹಿತೈಷಿಗಳು, ಸೊಸೈಟಿಯ ಕರ್ಮಚಾರಿಗಳು, ಪಿಗ್ಮಿà ಸಂಗ್ರಹದಾರರು, ಸಭೆಯಲ್ಲಿ ಹಾಜರಿದ್ದರು. ಮಾ| ನಿಖೀಲ್ ರವಿ ಕುಮಾರ್ ಗೌಡ, ಕು| ಭೂಮಿಕಾ ಜೆ. ಗೌಡ, ಮಾ| ಪ್ರಜ್ವಲ್ ಜಿ. ಗೌಡ ಹಾಗೂ ಕು| ಸುರûಾ ಆರ್. ಗೌಡ ಅವರ ಗಣೇಶ ವಂದನೆಯೊಂದಿಗೆ ಸಭೆ ಪ್ರಾರಂಭಗೊಂಡಿತು.
ಕಚೇರಿ ಅಧಿಕಾರಿಗಳಾದ ಆಶಾರಾಣಿ ಬಿ. ಗೌಡ ಗತವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪ್ರಕಾಶ್ ಎನ್. ವಾಡ್ಕರ್ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ರವಿ ಸುಭಾಷ್ ಗೌಡ ವಾರ್ಷಿಕ ವ್ಯವಹಾರದ ಮಾಹಿತಿ ನೀಡಿದರು. ಪ್ರದೀಪ್‌ಕುಮಾರ್ ಆರ್. ಗೌಡ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಬಿತ್ತರಿಸಿದರು. ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್ ಮಾಂಡವಾRರ್ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಶಿವಕುಮಾರ್ ಎಚ್. ಗೌಡ ವಾರ್ಷಿಕ ಬಜೆಟ್ ಮಂಡಿಸಿದರು. ಕೆ. ರಾಜೇ ಗೌಡ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.
ನಮ್ಮ ಪಥಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಶ್ರೀಸಾಮಾನ್ಯರ ಬಾಳಿಗೆ ಆಶಾಕಿರಣವಾಗಿ ಅನೇಕರಿಗೆ ಆರ್ಥಿಕ ಸೇವೆ ಒದಗಿಸಿದ ವಿಶ್ವಾಸ ನಮಗಿದೆೆ. ಗ್ರಾಹಕರ ಮತ್ತು ಶೇರುದಾರದ ವಿಶ್ವಾಸ ಗಳಿಸಿ ಸೊಸೈಟಿಯನ್ನು ಮುನ್ನಡೆಸಿದ್ದು, ಸೊಸೈಟಿಯ ನಿವ್ವಳ ಲಾಭಕ್ಕಿಂತ ಗ್ರಾಹಕರ, ಜನಪರ ಲಾಭ ಎಷ್ಟು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಪಥಸಂಸ್ಥೆಯು ವ್ಯವಹಾರ ದಕ್ಷತೆಗೆ ಮಹತ್ವವನ್ನು ನೀಡುತ್ತಿದೆ. ಹಣಕಾಸು ಸಂಸ್ಥೆಗಳು ತಮ್ಮ ಸಹಭಾಗಿತ್ವದಿಂದ ಯುವ ಜನಾಂಗದೊಡನೆ ಉದಾರತೆ ತೋರಬೇಕು. ಇಂತಹ ಉಚ್ಚ ಸೇವಾಧರ್ಮ, ಸಕಾರಾತ್ಮಕ ಸ್ಪಂದನೆ ಅಗತ್ಯ ಎನ್ನುವುದು ನಮ್ಮ ಅಭಿಮತವಾಗಿದೆ. ಪ್ರಸಕ್ತ ವರ್ಷದಲ್ಲಿ ನಿರ್ದೇಶಕ ಮಂಡಳಿಯ ದಕ್ಷ ನೇತೃತ್ವದಲ್ಲಿ ಮತ್ತು ನೌಕರವೃಂದದ ಸಹಯೋಗದೊಂದಿಗೆ ಸೊಸೈಟಿಯು ಪ್ರಗತಿಯತ್ತ ಸಾಗುತ್ತಿದೆ.– ರಂಗಪ್ಪ ಸಿ. ಗೌಡ
ಕಾರ್ಯಾಧ್ಯಕ್ಷರು: ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಚಿತ್ರ-ವರದಿ : ರೋನ್ಸ್ ಬಂಟ್ವಾಳ್