Advertisement

ಜಯದೇವನ್‌ ಅಧಿಕಾರ ಸ್ವೀಕಾರ

11:31 PM Jun 04, 2019 | Team Udayavani |

ಚೆನ್ನೈ: ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ (ಐಒಸಿ)ನ ತಮಿಳುನಾಡು ಮತ್ತು ಪುದುಚೇರಿ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಪಿ.ಜಯದೇವನ್‌ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. ಆರ್‌.ಸೀತಾರತ್ನನ್‌ ಅವರಿಂದ ಅಧಿಕಾರ ಸ್ವೀಕರಿಸಿದ ಜಯದೇವನ್‌, ಕಾರ್ಯ ನಿರ್ವಾಹಕ ನಿರ್ದೇಶಕ ಹುದ್ದೆ ಜತೆಯಲ್ಲಿ ತಮಿಳುನಾಡು ಮತ್ತು ಪುದುಚೇರಿ ತೈಲ ಉದ್ಯಮಗಳ ರಾಜ್ಯಮಟ್ಟದ ಸಂಯೋಜಕರಾಗಿಯೂ (ಎಸ್‌ಎಲ್‌ಸಿ) ಕಾರ್ಯ ನಿರ್ವಹಿಸಲಿದ್ದಾರೆ.

Advertisement

ಮೂರು ದಶಕಗಳಿಗೂ ಹೆಚ್ಚು ಕಾಲ ಇಂಡಿಯನ್‌ ಆಯಿಲ್‌ ಸಂಸ್ಥೆಯ ಎಲ್‌ಪಿಜಿ ಮತ್ತು ಸಮಾನಾಂತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಲ್ಲದೆ, ಎಂಜಿನಿಯರಿಂಗ್‌ ಮತ್ತು ಮಾರಾಟ ವಿಭಾಗಗಳಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ. ಸಿವಿಲ್‌ ಎಂಜಿನಿಯರ್‌ ತರಬೇತಿ ಹೊಂದಿದ ಜಯದೇವನ್‌, ಪೆಟ್ರೋಲಿಯಂ ಮ್ಯಾನೇಜ್‌ಮೆಂಟ್‌ನಲ್ಲಿ ಸ್ಲೋವಿನಿಯಾ ವಿಶ್ವವಿದ್ಯಾಲಯದ ಪದವಿ ಪಡೆದಿದ್ದಾರೆ.

ಈ ಹಿಂದೆ ನವದೆಹಲಿಯಲ್ಲಿ ಇಂಡಿಯನ್‌ ಆಯಿಲ್ಸ್‌ ಕಾರ್ಪೋರೇಟ್‌ ಕಚೇರಿಯ ಚೇರ್ಮನ್‌ ಸೆಕ್ರೆಟರಿಯೇಟ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ಅವರು ವ್ಯಾಪಕವಾಗಿ ಪ್ರಯಾಣ ಮಾಡಿದ್ದಲ್ಲದೆ, ತೈಲ ಮತ್ತು ಅನಿಲದ ಪ್ರಮುಖ ಜಾಗತಿಕ ಪಾಲುದಾರರೊಂದಿಗೆ ಸಂವಹನ ನಡೆಸಿರುವ ಅಪಾರ ಅನುಭವ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next