ನವ ದೆಹಲಿ : ಹರಿದ ಜೀನ್ಸ್ ಧರಿಸಬೇಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರಿಗೆ ರಾಜ್ಯಸಭಾ ಸದಸ್ಯೆ ಜಯ ಬಚ್ಚನ್ ತಿರುಗೇಟು ನೀಡಿದ್ದಾರೆ.
ಇಂತಹ ಹೇಳಿಕೆಗಳು ಮುಖ್ಯಮಂತ್ರಿ ಸ್ಥಾನಕ್ಕೆ ಸರಿ ಹೊಂದುವುದಿಲ್ಲ. ಇದು ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಮನಸ್ಥಿತಿ ಎಂದು ಜಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಓದಿ : ಪಶ್ಚಿಮಬಂಗಾಳದಲ್ಲಿ ಟಿಎಂಸಿ ಹೊಸ ತಳಿಯ ಮಾವೋವಾದಿಗಳನ್ನು ಸೃಷ್ಟಿಸಿದೆ: ಪ್ರಧಾನಿ ಮೋದಿ
ಉನ್ನತ ಹುದ್ದೆಯಲ್ಲಿರುವವರು ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೊದಲು ಯೋಚನೆ ಮಾಡಬೇಕು. ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಉತ್ತೇಜಿಸುವ ಕೆಟ್ಟ ಮನಸ್ಥಿತಿ ಇದು ಎಂದು ರಾವತ್ ವಿರುದ್ಧ ಜಯ ಬಚ್ಚನ್ ಕಿಡಿ ಕಾರಿದ್ದಾರೆ.
ಡೆಹ್ರಾಡೂನ್ ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಉತ್ತರಖಂಡ್ ರಾಜ್ಯ ಆಯೋಗ ಆಯೊಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡುತ್ತಾ ರಾವತ್, ಯುವತಿಯರು ಶ್ರಿಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್ ಪ್ಯಾಂಟ್ ನ್ನು ಧರಿಸಿ ಮೊಣಕಾಲು ತೋರಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ದವಾದದ್ದು, ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸಿ ಅದನ್ನು ಶ್ರದ್ಧೆಯಿಂದ ಅನುಸರಿಸುತ್ತಿರುವಾಗ ನಾವು ಪಾಶ್ಚಾತ್ಯರನ್ನು ಅನುಸರಿಸುತ್ತಿದ್ದೇವೆ. ಈ ಮೂಲಕ ನಾವು ನಮ್ಮ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದೇವೆ..? ನಾವು ನಮ್ಮ ಮಕ್ಕಳಿಗೆ ಯಾವ ಪಾಠ ನೀಡುತ್ತಿದ್ದೇವೆ..? ನಾವು ಏನು ಮಾಡುತ್ತೇವೋ ಅದನ್ನೇ ನಮ್ಮ ಮಕ್ಕಳು ಅನುಸರಿಸುತ್ತಾರೆ. ಮನೆಯಲ್ಲಿ ಸಂಸ್ಕೃತಿಯನ್ನು ಕಲಿತುಕೊಳ್ಳುವ ಮಗು, ಸಮಾಜದಲ್ಲಿ ಎಂದಿಗೂ ವಿಫಲನಾಗುವುದಿಲ್ಲ ಎಂದು ರಾವತ್ ಹೇಳಿದ್ದರು.
ಇದೀಗ ರಾವತ್ ವಿವಾದಾತ್ಮಕ ಹೇಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತ ವಾಗುತ್ತಿದೆ. ಇಂದು ಟ್ವೀಟರ್ ನಲ್ಲಿ #RippedJeansTwitter ಹ್ಯಾಷ್ ಟ್ಯಾಗ್ ಇಂದು ಪ್ರಮುಖ ಟ್ರೆಂಡ್ ಗಳಲ್ಲಿ ಒಂದಾಗಿದೆ.
ಓದಿ : ಮತ್ತೆ ಅಸಮಾಧಾನ: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು 20ಕ್ಕೂ ಹೆಚ್ಚು ಶಾಸಕರಿಂದ ಆಗ್ರಹ!