Advertisement

ಜವಾರಿ ಟೊಮ್ಯಾಟೋ ತಳಿ ಸಂಸ್ಕರಣೆ

02:17 PM Dec 25, 2019 | Suhan S |

ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ಸರ್ಕಾರಿ ತೋಟಗಾರಿಕಾ ಫಾರ್ಮ್ನಲ್ಲಿ ಇದೇ ಮೊದಲ ಬಾರಿಗೆ ಇಸ್ರೇಲ್‌ ಕೃಷಿ ಆಧಾರಿತವಾಗಿ ಚರಿ ಟೊಮ್ಯಾಟೋ ಬೆಳೆ ಪ್ರಯೋಗ ಫಲಶ್ರುತಿ ನೀಡಿದೆ.

Advertisement

ಮೂಲ ಜವಾರಿ ಟೊಮ್ಯಾಟೋವನ್ನು ಸಂಸ್ಕರಿಸಿ, ಅಭಿವೃದ್ಧಿ ಪಡಿಸಿದ ಈ ಟೊಮ್ಯಾಟೋಗೆ ಚರಿ ಟೊಮ್ಯಾಟೋ ಎಂದು ಹೆಸರಿಸಲಾಗಿದೆ. ಮೂಲ ಜವಾರಿ ಟೊಮ್ಯಾಟೋ ತೀರ ಹುಳಿಯಾಗಿದ್ದು, ಹೆಚ್ಚು ಬೀಜಗಳಿಂದ ಕೂಡಿರುತ್ತದೆ. ಆದರೆ ಚರಿ ಟೊಮ್ಯಾಟೋ ಸಿಹಿಯಾಗಿದ್ದು, ಬೀಜ ಕಡಿಮೆ ಇರುತ್ತದೆ. ತರಕಾರಿ ಹಾಗೂ ಹಣ್ಣಿನಂತೆಯೂ ಬಳಸಬಹುದಾಗಿದೆ. ತೋಟಗಾರಿಕಾ ಫಾರ್ಮ್ನಲ್ಲಿ ಕಳೆದ ತಿಂಗಳಿಂದೀಚೆಗೆ ತಲಾ 10 ಗುಂಟೆಯ ಪ್ರತ್ಯೇಕ ಎರಡು ಪಾಲಿಹೌಸ್‌ನಲ್ಲಿ ಪ್ರಯೋಗಾರ್ಥ ಚರಿ ಟೊಮ್ಯಾಟೋ ಬೆಳೆಯಲಾಗಿದೆ. ಪ್ರತಿ ಪಾಲಿಹೌಸ್‌ನಲ್ಲಿ 2,500 ಗಿಡಗಳಿದ್ದು, ಪ್ರಯೋಗಾರ್ಥವಾಗಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ಬಂದಿದೆ. ಚರಿ ಟೊಮ್ಯಾಟೋ ಬೆಂಗಳೂರಿನ ಹುಳಿಮಾವು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪ್ರಯೋಗಾರ್ಥವಾಗಿ ಬೆಳೆಯಲಾಗಿತ್ತು. ನಂತರ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾರ್ಗದರ್ಶನದಲ್ಲಿ ಕುಷ್ಟಗಿಯ ನಿಡಶೇಸಿ ತೋಟಗಾರಿಕಾ ಫಾರ್ಮ್ನಲ್ಲಿ ಬೆಳೆಯಲಾಗಿದ್ದು, ನಿರೀಕ್ಷಿಸಿದಂತೆ ಇಳುವರಿ ಬಂದಿದೆ.

ಕೆಂಪು ಹಾಗೂ ಹಳದಿ ಬಣ್ಣದ ಚರಿ ಟೊಮ್ಯಾಟೋ ಹಣ್ಣನ್ನು ನೇರವಾಗಿ ಚಟ್ನಿ, ಸಾಸ್‌ ತಯಾರಿಕೆಗೆ ಹಾಗೂ ದೊಡ್ಡ ಹೋಟೆಲ್‌ಗ‌ಲ್ಲಿ ಸ್ನಾ ಕ್ಸ್‌ ಆಗಿ ಬಳಸಲಾಗುತ್ತಿದೆ. ಐರಿ ಟೊಮ್ಯಾಟೋ ಸದ್ಯದ ಬೆಲೆ ಕೆ.ಜಿ.ಗೆ 80 ರೂ. ಇದೆ. 2,500 ಗಿಡಗಳಿಂದ ಪ್ರತಿದಿನ 80ರಿಂದ 100 ಕೆ.ಜಿ ಇಳುವರಿ ಬರುತ್ತಿದ್ದು, ಮುಂದಿನ 7-8 ತಿಂಗಳಿನಲ್ಲಿ 30 ಟನ್‌ ನಿರೀಕ್ಷೆಯಲ್ಲಿದ್ದು, 6ರಿಂದ 7 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ ಎಂದು ಸಹಾಯಕ ತೋಟಗಾರಿಕಾ ಅಧಿಕಾರಿ ಆಂಜನೇಯ ದಾಸರ್‌ ವಿವರಿಸಿದರು. ಈ ಬೆಳೆ 8 ತಿಂಗಳವರೆಗೆ ನಿರಂತರ ಇಳುವರಿ ನೀಡುತ್ತಿದ್ದು, ಹಣ್ಣಾದ ಚರಿ ಟೊಮ್ಯಾಟೋಗಳನ್ನು ನೇರವಾಗಿ ಮಾರುಕಟ್ಟೆಗೆ ಕಳಿಸಬಹುದು. ಹಣ್ಣಿನ ತೊಗಟೆ ದಪ್ಪವಾಗಿದ್ದು, 15 ದಿನ ಇಟ್ಟರೂ ಅದೇ ತಾಜಾತನ ಉಳಿಸಿಕೊಂಡಿರುತ್ತದೆ. ಹೀಗಾಗಿ ಬೇರೆಡೆ ಸಾಗಾಣಿಕೆಗೆ ಈ ಹಣ್ಣು ಉಪಯುಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next