Advertisement

“ಜಾಂವಯ್‌ ನಂಬರ್‌ ವನ್‌’ಚಿತ್ರದ ಟ್ರೇಲರ್‌ ಬಿಡುಗಡೆ

03:37 PM Jan 11, 2018 | |

ಮುಂಬಯಿ: ಚಿತ್ರ ನಿರ್ಮಾಣ ದೊಡ್ಡ ಸಾಹಸವೇ ಸರಿ. ನಾನು ಇದನ್ನು ಸ್ವತಃ ಅನುಭವಿಸಿದ್ದೇನೆ. ಸಿನೆಮಾಗಳು ಸಂಸ್ಕೃತಿಗಳ ಉಳಿವಿಗೆ ಪೂರಕವಾದಾಗ ಭಾಷಾ ಮನ್ನಣೆಗೆ ಪಾತ್ರವಾಗಬಲ್ಲದು. ಅವಾಗಲೇ ಇಂತಹ ಚಿತ್ರಗಳು ಇತಿಹಾಸದ ಪುಟಗಳಲ್ಲಿ ಸೇರುವುದು. ಈ ಚಿತ್ರದ ಆಡಿಯೋ ಚೆನ್ನಾಗಿ ಮೂಡಿ ಬಂದಿದೆ. ಆಡಿಯೋನೇ ಇಷ್ಟು ಸುಂದರವಾಗಿದ್ದರೆ ಚಲನಚಿತ್ರ ಎಷ್ಟು ಒಳ್ಳೆಯದಿರಬಹುದು ಎನ್ನುವುದನ್ನು ನೀವೇ ಊಹಿಸಿ. ತುಳು, ಕೊಂಕಣಿ, ಕನ್ನಡಿಗರು ನಾವೆಲ್ಲಾ  ಒಂದೇ ಮಾತೆಯ ಮಕ್ಕಳಂತೆ. ಮಾತೃಭಾಷೆಯನ್ನು ಸರ್ವಸ್ವವಾಗಿಸಿ ಬಾಳುವವರು. ಈ ಸಿನೆಮ ಸಾಂಗತಿ ಕ್ರಿಯೇಶನ್ಸ್‌ ಬಳಗಕ್ಕೆ ಯಶಸ್ಸು ತಂದು ಕೊಡಲಿ.  ತುಳು ಕೊಂಕಣಿ, ಯಾವುದೇ ಸಿನೆಮಾ ರಂಗ ವಿಶ್ವಾಸದಾಯಕವಾಗಿ ಬೆಳೆಯಲಿ ಎಂದು ತುಳು ಚಿತ್ರರಂಗದ ಸೂಪರ್‌ಸ್ಟಾರ್‌ ಪ್ರಸಿದ್ಧಿಯ ಅಂಬರ್‌ ಕ್ಯಾಟರರ್ಸ್‌ ತುಳು ಸಿನೆಮಾದ ನಾಯಕ ನಟ ಸೌರಭ್‌ ಸುರೇಶ್‌ ಭಂಡಾರಿ ತಿಳಿಸಿದರು.

Advertisement

ಅಂಧೇರಿ ಪೂರ್ವದ ಮರೋಲ್‌ನ ವಿಜಯನಗರದಲ್ಲಿರು ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ ಸಭಾಗೃಹದಲ್ಲಿ ಸಾಂಗತಿ ಕ್ರಿಯೇಶನ್ಸ್‌ ಮುಂಬಯಿ ಪ್ರಸ್ತುತಿಯ ಪ್ರಪ್ರಥಮ ಚಲನಚಿತ್ರ “ಜಾಂವಯ್‌ ನಂಬರ್‌ ವನ್‌’ (ಅಳಿಯ ನಂಬರ್‌ ವನ್‌) ಸಾಮಾ ಜಿಕ ಮತ್ತು ಹಾಸ್ಯಪ್ರಧಾನ ಕೊಂಕಣಿ ಚಲನಚಿತ್ರದ ಧ್ವನಿ ಸುರುಳಿ ಮತ್ತು ಚಿತ್ರದ ತುಣುಕು ಪ್ರದರ್ಶನ (ಟ್ರೇಲರ್‌) ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ  ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಹಿಂದಿ-ಮರಾಠಿ ಚಿತ್ರನಟ ಅನಂತ್‌ ಜೋಗ್‌, ಕೆ.ಕೆ ಗೋಸ್ವಾಮಿ, ಕನ್ನಡಿಗರ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕ್ರಿಶ್ಚನ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಅಧ್ಯಕ್ಷ ಜೋನ್‌ ಡಿ’ಸಿಲ್ವಾ, ಮಾಜಿ ಅಧ್ಯಕ್ಷ ಪಿ.ಎನ್‌ ಶ್ಯಾನ್‌ಭಾಗ್‌, ಉದ್ಯಮಿ ರೋನಿ ಗೋವಿಯಸ್‌,ಗೌರವ್ವಾನಿತ ಅತಿಥಿಗಳಾಗಿ ಹಾಗೂ ಬಾಲಿವುಡ್‌ ಮತ್ತು “ಜಾಂವಯ್‌ ನಂಬರ್‌ ವನ್‌’ ಚಿತ್ರದ ನಟಿ ವರ್ಷಾ ಉಸ್ಗಾಂವ್ಕರ್‌ , ಚಿತ್ರ ಸಂಪಾದಕ ಅಭಿಷೇಕ್‌ ಮ್ಹಾಸ್ಕರ್‌, ಸಾಹಸ ನಟ ಸುನೀಲ್‌ ರೋಡ್ರಿಗಸ್‌, ಚಲನಚಿತ್ರದ ರಚನೆಕಾರ, ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್‌ ಬಾಕೂìರು, ಚಿತ್ರನಿರ್ಮಾಪಕ ಸಂಸ್ಥೆ ಸಾಂಗತಿ ಕ್ರಿಯೇಶನ್ಸ್‌ ಮುಂಬಯಿ ಇದರ ಮುಖ್ಯಸ್ಥರುಗಳಾದ ವಾಲ್ಟರ್‌ ಡಿ’ಸೋಜಾ ಕಲ್ಮಾಡಿ, ಸಿರಿಲ್‌ ಕಾಸ್ತೆಲಿನೋ ಹಾಗೂ ಲಿಯೋ ಫೆರ್ನಾಂಡಿಸ್‌ ಜೆರಿಮೆರಿ  ಉಪಸ್ಥಿತರಿದ್ದು, ನೂತನ ಚಲನಚಿತ್ರದ ಧ್ವನಿಸುರುಳಿ ಮತ್ತು ಟ್ರೇಲರ್‌ ಬಿಡುಗಡೆ ಗೊಳಿಸಿದರು.

ಮಾತೃ ಭಾಷಾ ಸಿನೆಮಾಗಳಲ್ಲಿ ತನ್ನಲ್ಲಿನ ಸಂಸ್ಕೃತಿ ಕಂಡುಬರಬೇಕು. ಆವಾಗ ಮಾತ್ರ ಕೊಂಕಣಿ ಚಿತ್ರ ಮೌಲ್ಯ ಯುತವಾಗುವುದು. “ಜಾಂವಯ್‌ ನಂಬರ್‌ ವನ್‌’ನಲ್ಲಿ ಸಂಸ್ಕೃತಿ ಜೊತೆ ಸಂತಸವೂ ಕಾಣುತ್ತಿದೆ. ಈ ಸಿನೆಮಾ ಅತ್ಯುತ್ತಮ ಕೊಂಕಣಿ ಸಿನೆಮಾವಾಗಲಿ ಎಂದು ಪಾಲೆತ್ತಾಡಿ ನುಡಿದರು.

ಹ್ಯಾರಿ ಫೆರ್ನಾಂಡಿಸ್‌ ಓರ್ವ ನುರಿತ ಚಿತ್ರನಿರ್ದೇಶ‌ಕರಾಗಿದ್ದಾರೆ ಅಲ್ಲದೆ ಅವರೋರ್ವ ಸವೊìàತ್ತಮ ಚುರುಕುತನವುಳ್ಳ ಮಾರ್ಗ ದರ್ಶಕ. ಯಾವುದೇ ಸೂಚನೆ ಕೊಟ್ಟರೆ ಅದನ್ನು ಮನಃ ಪೂರ್ವಕವಾಗಿ ಸ್ವೀಕರಿ ಕಾರ್ಯರೂಪಕ್ಕೆ ತರುವ ಸಾಧಕ ಆದೇ ಅವರ ಒಳ್ಳೆಯ ಗುಣ ಎಂದು ಅನಂತ್‌ ಜೋಗ್‌ ನುಡಿದರು.

Advertisement

ಹ್ಯಾರಿ ಫೆರ್ನಾಂಡಿಸ್‌ ಮಾತನಾಡಿ, ಚಲನಚಿತ್ರ ನಿರ್ಮಾಣಕ್ಕೆ ಹಣವೇ ಮುಖ್ಯ. ಆದರೆ ನಿರ್ಮಾಪಕರು ಹೂಡಿದ ಹಣ ವಾಪಸು ಬರುತ್ತದೆಯೋ ಇಲ್ಲವೋ ಎಂಬ ಭರವಸೆ ಇರುವುದಿಲ್ಲ, ಆದರೆ ಸಾಂಗಾತಿ ಮೀಡಿಯಾ  ಮಾತೃ ಭಾಷೆಯ ಅಭಿಮಾನದಿಂದ ಈ ಚಿತ್ರಕ್ಕೆ ಹಣ ಹೂಡಿದೆ ಎನ್ನುವುದೇ ಅಭಿಮಾನ. ಅವರಿಗೆ ನನ್ನ ಧನ್ಯವಾದಗಳು ಎಂದರು. 

ಕೊಂಕಣಿ ಭಾಷೆ ಬೆಳವಣಿಗೆ ಇಂತಹ ಸಿನೆಮಾಗಳ ಅಗತ್ಯವಿದೆ. ಮಾತೃಭಾಷೆಯಲ್ಲಿ ಅನೇಕ ಸಿನೆಮಾಗಳು ಮೂಡಿ ಬರಲಿ. ಅವಾಗ ನವ ನಟ ನಟಿಯರಿಗೆ ತಮ್ಮ ಪ್ರತಿಭೆ ಪ್ರಕಾಶಮಾನವಾಗಿಸಲು ಅವಕಾಶ ದೊರೆಯಲಿದೆ ಎಂದು ಜಾನ್‌ ಡಿಸಿಲ್ವಾ  ಹೇಳಿದರು.

ಕೆ.ಕೆ ಗೋಸ್ವಾಮಿ ಮಾತನಾಡಿ ಭಾಷೆ ಎನ್ನುವ ತಾರತಮ್ಯ ಬೇಡ. ನಿಷ್ಠೆ ಮತ್ತು ಪ್ರೋತ್ಸಾಹ ನೀಡಿ ಚಿತ್ರರಂಗವನ್ನು ಪ್ರೀತಿಸೋಣ ಎಂದರು.

ಮಾತೃಭಾಷೆಯಿಂದ ನಾಲ್ಕೂರುಗಳು ಸಮೀಪಿಸುತ್ತವೆ ಎಂದು ಅರಿತ ನನ್ನಲ್ಲೂ ಮಾತೃಭಾಷೆಯಲ್ಲಿ ಸಿನೆಮಾ ಮಾಡುವ ಇಚ್ಛೆ ಮೊದಲಿನಿಂದಲೂ ಇತ್ತು. ಆದರೆ ಅದಕ್ಕೆ ಈಗ ಸಮಯ ಕೂಡಿ ಬಂತು. ಈ ಚಿತ್ರದಲ್ಲಿ ನನಗೆ ಸರಿಯಾದ ಸಮಯಕ್ಕೆ ಪಾತ್ರ ದೊರೆಯಿತು. ಕಲಾವಿದರಿಗೆ ಪ್ರೋತ್ಸಾಹ ದೊರೆತಾಗ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಚಿತ್ರ ನಿರ್ಮಾಣ ನಮ್ಮ ಕೈಯಲ್ಲಿದೆ.ಆದರೆ, ಅದನ್ನು ಸೂಪರ್‌ ಹಿಟ್‌ ಮಾಡುವುದು ಪ್ರೇಕ್ಷಕರ ಜವಾಬ್ದಾರಿ. ಇಲ್ಲಿನ ನಿರ್ಮಾಪಕರು ಈ ಚಿತ್ರಕ್ಕೆ ಮನಃಪೂರ್ವಕವಾಗಿ ಖರ್ಚು ಮಾಡಿದ್ದಾರೆ. ಇಂತಹ ಭಾಷಾಭಿಮಾನಿಗಳಿಂದ ಇನ್ನೂ ಕೊಂಕಣಿ ಭಾಷಾ ಸಿನೆಮಾಗಳು ಸೃಷ್ಟಿಯಾಗಲಿ.  ಎಲ್ಲರು ಸಿನೆಮಾ  ವೀಕ್ಷಿಸಿ ಪ್ರೋತ್ಸಾಹಿಸಬೇಕು. ಈ ತಂಡದಿಂದ ಇನ್ನೂ ನೂರಾರು ಸಿನೆಮಾಗಳು ನಿರ್ಮಾಣವಾಗಲಿ ಎಂದು ಆ್ಯಂಟನಿ ಹಾರೈಸಿದರು.

ಕೊಂಕಣಿ ಸಂಗೀತ ಬಳಗ ಜೆರಿಮೆರಿ ತಂಡವು ಸ್ವಾಗತ ಗೀತೆ ಹಾಡಿದರು. ಸಿರಿಲ್‌ ಕಾಸ್ತೆಲಿನೋ ಅತಿಥಿಗಳನ್ನು ಪರಿಚಯಿಸಿದರು. ಜೋಸೆಫ್‌ ಪತ್ರಾವೊ, ಆಶ್ವಿ‌ನಿ ವಾಲ್ಟರ್‌ ಡಿ’ಸೋಜಾ, ಲಿಲ್ಲಿ ಲಿಯೋ ಫೆರ್ನಾಂಡಿಸ್‌, ಡೆ„ನ ಸಿರಿಲ್‌ ಕಾಸ್ತೆಲಿನೋ, ರೋಕ್‌ ಡಿ’ಕುನ್ಹಾ, ಬ್ಲ್ಯಾನಿ ಡಿ’ಕೋಸ್ತಾ, ಲ್ಯಾನ್ಸಿ ಡಿ’ಸೋಜಾ, ಜೆರೋಮ್‌ ಲೋಬೊ, ಹೆಲೆನ್‌ ನೊರೋನ್ಹಾ, ಟೋನಿ ಮಾರ್ಟಿಸ್‌, ಪೀಟರ್‌ ರೆಬೆರೋ, ಜೋರ್ಜ್‌ ಡಿ’ಸೋಜಾ ಭಯಂದರ್‌, ಫ್ರಾನ್ಸಿಸ್‌ ಒಲಿವೆರಾ, ಲೆ”ನ್‌ ಲಿಯೋ ಫೆರ್ನಾಂಡಿಸ್‌, ಗ್ರೆಗೋರಿ ನಿಡ್ಡೋಡಿ ಅತಿಥಿಗಳಿಗೆ ಪುಷ್ಪ ಗುತ್ಛ ನೀಡಿ ಗೌರವಿಸಿದರು. ಸ್ಟೀವನ್‌ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಲಿಯೋ ಫೆರ್ನಾಂಡಿಸ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ವಂದನಾರ್ಪಣೆಗೈದರು.

ಚಿತ್ರ,ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next