Advertisement

ಜೆಎನ್‌ಯು ಸಂಶೋಧನ ವಿದ್ಯಾರ್ಥಿ ಆತ್ಮಹತ್ಯೆ: ಡೆತ್‌ ನೋಟ್‌ ಇಲ್ಲ

12:06 PM Mar 14, 2017 | udayavani editorial |

ಹೊಸದಿಲ್ಲಿ : ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) 25ರ ಹರೆಯದ ಕೃಷ್‌ ರಜನಿ ಎಂಬ ಸಂಶೋದನ ವಿದ್ಯಾರ್ಥಿ ನಿನ್ನೆ ಸೋಮವಾರ ಸಂಜೆ ಮುನ್ರಿಕಾ ವಿಹಾರದಲ್ಲಿನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. 

Advertisement

ಎಂಫಿಲ್‌ ಮತ್ತು ಪಿಎಚ್‌ಡಿ ಪ್ರವೇಶದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಆತ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್‌ ಅನ್ನು ಆತನ ಸ್ನೇಹಿತರು ಶೇರ್‌ ಮಾಡಿಕೊಂಡಿದ್ದಾರೆ. ಕೃಷ್‌ ಈಗ ಕೆಲ ಸಮಯದಿಂದ ಖನ್ನತೆಯಿಂದ ನರಳುತ್ತಿದ್ದ ಎನ್ನಲಾಗಿದೆ.

ಕೃಷ್‌ ರಜನಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಾಸಗಿ ವಿಷಯಕ್ಕೆ ಸಂಬಂಧಿಸಿಯೇ ಅಥವಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಷಯದಿಂದಲೇ ಎಂಬುದಕ್ಕೆ ಈ ತನಕ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೇಲಾಗಿ ಈತನು ತನ್ನ ಆತ್ಮಹತ್ಯೆಗೆ ಸಂಬಂಧಿಸಿ ಯಾವುದೇ ಡೆತ್‌ ನೋಟ್‌ ಬರೆದಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ನಿನ್ನೆ ಸೋಮವಾರ ಕೃಷ್‌ ತನ್ನ ಸ್ನೇಹಿತರ ಮನೆಗೆ ಹೋಗಿ ಅಲ್ಲಿ ಊಟಮಾಡಿದ್ದ. ಬಳಿಕ ತನಗೆ ನಿದ್ದೆ ಬರುತ್ತಿದೆ ಎಂದು ಹೇಳಿ ಅಲ್ಲಿಂದ ತನ್ನ ಕೋಣೆಗೆ ವಾಪಸಾಗಿದ್ದ. ಸಂಜೆ ಕೋಣೆಗೆ ಬಂದವನೇ ಒಳಗಿಂದ ಲಾಕ್‌ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next