Advertisement

ವಿಶ್ವಕ್ಕೆ ಸಂದೇಶ ಸಾರಿದ ಜ್ಞಾನಿ ಸರ್ವಜ್ಞ

12:13 PM Feb 21, 2020 | Naveen |

ಜೇವರ್ಗಿ: ತ್ರಿಪದಿಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ವಿಶ್ವ ಸಂದೇಶ ಸಾರಿದ ಸರ್ವಜ್ಞ ಮಹಾ ಜ್ಞಾನಿ ಯಾಗಿದ್ದ ಎಂದು ಹಿಪ್ಪರಗಾ ಎಸ್‌. ಎನ್‌. ಗ್ರಾಮದ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ಶ್ರೀಮಂತ ಕುಂಬಾರ ಬೇಲೂರ ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕನ್ನಡದ ಶ್ರೇಷ್ಠ ಕವಿ ಸರ್ವಜ್ಞರ ವಚನಗಳು ಬಸವಣ್ಣನವರ ವಚನಗಳಷ್ಟೇ ಶ್ರೇಷ್ಠ. ಕವಿ ಸರ್ವಜ್ಞ ತಮ್ಮ ವಚನದಲ್ಲಿ ಸರಳವಾಗಿ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಿದ್ದಾರೆ. ಕೇವಲ ಮೂರು ಸಾಲಿನಲ್ಲಿ ಅರ್ಥಪೂರ್ಣವಾಗಿ ಎಲ್ಲ ವಿಷಯಗಳನ್ನು ತಿಳಿಸಿದ್ದಾರೆ ಎಂದರು.

ಸರ್ವಜ್ಞರ ತತ್ವದಂತೆ ಕುಂಬಾರ ಜನಾಂಗ ಎಲ್ಲರೊಳಗೆ ಒಂದಾಗಿ ಬದುಕಬೇಕು. ಕುಂಬಾರ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಜಾಗತೀಕರಣದಿಂದಾಗಿ ಕುಂಬಾರರ ಕುಲಕಸುಬು ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಪಟ್ಟಣದ ಹಳೆ ತಹಶೀಲ್ದಾರ್‌ ಕಚೇರಿ ಆವರಣದಿಂದ ಸರ್ವಜ್ಞ ಭಾವಚಿತ್ರದ ಮೆರವಣಿಗೆ ಮಿನಿ ವಿಧಾನಸೌಧ ಕಚೇರಿ ವರೆಗೆ ಜರುಗಿತು. ನಂತರ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ್‌ ಸಿದರಾಯ ಭೋಸಗಿ ಉದ್ಘಾಟಿಸಿದರು. ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಶ್ರೀಶೈಲ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾಜದ ಮುಖಂಡ ಸುಭಾಶ್ಚಂದ್ರ ಕುಂಬಾರ, ಗ್ರೇಡ್‌-2 ತಹಶೀಲ್ದಾರ್‌ ರಮೇಶ ಹಾಲು, ತಾ.ಪಂ ಇಒ ವಿಲಾಸರಾಜ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ತಾಲೂಕು ಅಲ್ಪಸಂಖ್ಯಾತ ಇಲಾಖೆ ಅ ಧಿಕಾರಿ ಶಕುಂತಲಾ, ಸಾಯಬಣ್ಣ ಕಲ್ಯಾಣಕರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next