Advertisement

ಆಂತರಿಕ ಭಯೋತ್ಪಾದಕರನ್ನು ಶಿಕ್ಷಿಸಿ

12:45 PM Feb 27, 2020 | Naveen |

ಜೇವರ್ಗಿ: ದೇಶದ ಗಾಳಿ, ನೀರು, ಅನ್ನ ತಿಂದು ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದ ಬಗ್ಗೆ ಹೊಗಳುವ ಆಂತರಿಕ ಭಯೋತ್ಪಾಕರನ್ನು ಶಿಕ್ಷಿಸುವ ಕೆಲಸವಾಗಬೇಕು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಗುಡುಗಿದರು.

Advertisement

ತಾಲೂಕಿನ ಹರವಾಳ ಗ್ರಾಮದ ಆರಾಧ್ಯ ದೈವ ಮೂಕಸಿದ್ಧೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಕಳಸಾರೋಹಣ, 25 ಜೋಡಿಗಳ ಸಾಮೂಹಿಕ ಮದುವೆ ಸಮಾರಂಭ ನಿಮಿತ್ಯ ಆಯೋಜಿಸಲಾಗಿರುವ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೇಶಕ್ಕೆ ಬಂದಿದ್ದು, ಪ್ರಧಾನಿ ಮೋದಿ, ಅಮಿತ್‌ ಶಾ ಅವರನ್ನು ಹೊಗಳಲಿಕ್ಕೆ ಅಲ್ಲ. ಈ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ದೇಶದಲ್ಲಿರುವ ಅತ್ಯದ್ಭುತವಾದ ಶಕ್ತಿ ನೋಡಿ ಎನ್ನುವುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.

ಕಳೆದ ವರ್ಷ ನಡೆದ ಘಟನೆಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯಲ್ಲಿ ಕಾಶ್ಮೀರದ ಯುವಕರು ನೆರೆಯ ಪಾಕಿಸ್ತಾನ ಪರ ಜಯಘೋಷ ಹಾಕಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಕಾವಿ, ಖಾದಿ, ಖಾಕಿ ಒಂದಾಗಬೇಕು, ಮಠಾಧೀಶರು ಧರ್ಮ ಒಡೆಯುವ ಕೆಲಸ ಮಾಡದೆ ದೇಶ, ಧರ್ಮದ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Advertisement

ಸೊನ್ನ ಸಿದ್ಧಲಿಂಗೇಶ್ವರ ವಿರಕ್ತ ಮಠದ ಪೀಠಾಧಿ ಪತಿ ಡಾ| ಶಿವಾನಂದ ಸ್ವಾಮೀಜಿ, ಪ್ರವಚನಕಾರ ಹರಿದ್ವಾರದ ನಿರಂಜನ ಸ್ವಾಮೀಜಿ, ಬಸವಪಟ್ಟಣದ ಮರೆಪ್ಪ ಮುತ್ಯಾ, ಜಿ.ಪಂ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ರಮೇಶಬಾಬು ವಕೀಲ, ಮಲ್ಲಿನಾಥಗೌಡ ಯಲಗೋಡ, ಉದ್ಯಮಿಗಳಾದ ದಯಾನಂದ ದೇವರಮನಿ, ಬಸವರಾಜ ಮದರಿ, ಉಮಾಕಾಂತ ಗೋಲಗೇರಿ, ಸೋಮಶೇಖರ ಗುಡೂರ, ವಿಶ್ವನಾಥ ಸಾಹು ಸಜ್ಜನಶೆಟ್ಟಿ, ನೆಲೋಗಿ ಪಿಎಸ್‌ಐ ಮಲ್ಲಣ್ಣ ಯಲಗೋಡ, ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಎಂ.ಬಿ. ಪಾಟೀಲ, ತಾ.ಪಂ ಸದಸ್ಯ ಪ್ರಭಾಕರ ರಬಶೆಟ್ಟಿ, ಹರನೂರ ಗ್ರಾ.ಪಂ ಅಧ್ಯಕ್ಷ ರಮೇಶ ರಾಠೊಡ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next