Advertisement

13 ಜನ ಗುಣಮುಖ-ಬಿಡುಗಡೆ

06:48 PM Jun 08, 2020 | Naveen |

ಜೇವರ್ಗಿ: ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ 13 ಜನರನ್ನು ಶನಿವಾರ ತಾಲೂಕಾಡಳಿತ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

Advertisement

ತಾಲೂಕಿನ ವಿವಿಧ ಗ್ರಾಮಗಳ 13 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಕಲಬುರಗಿ ನಗರದ ಕೋವಿಡ್‌ ನಿಗದಿತ ಆಸ್ಪತ್ರೆಗೆ ಕಳೆದ 15 ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಶನಿವಾರ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖ ಹೊಂದಿದ್ದರಿಂದ ಅವರನ್ನು ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಹಶೀಲ್ದಾರ್‌ ಸಿದರಾಯ ಭೋಸಗಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ತಾಲೂಕು ಆಡಳಿತದಿಂದ ಗುಣಮುಖರಾದ 13 ಜನರಿಗೆ ಶಾಲು ಹೊದಿಸಿ, ಹಣ್ಣು-ಹಂಪಲು ನೀಡಿ ಸನ್ಮಾನಿಸಿ ಅವರನ್ನು ಬೀಳ್ಕೊಡಲಾಯಿತು. ಮಹಾರಾಷ್ಟ್ರದಿಂದ ಮರಳಿ ಜೇವರ್ಗಿ ತಾಲೂಕಿಗೆ ಬಂದಿರುವ ವಲಸೆ ಕಾರ್ಮಿಕರೆಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ರೇವನೂರ ಗ್ರಾಮದ 8 ಜನ, ಕೂಟನೂರ ಗ್ರಾಮದ 2, ಗುಡೂರ (ಎಸ್‌.ಎ) ಗ್ರಾಮದ 2 ಹಾಗೂ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಒಬ್ಬ ವ್ಯಕ್ತಿ ಕೋವಿಡ್‌ 19 ಸೋಂಕಿನಿಂದ ಹೊರ ಬಂದಿದ್ದಾರೆ. ತಹಶೀಲ್ದಾರ್‌ ಸಿದರಾಯ ಭೋಸಗಿ, ಸಿಪಿಐ ರಮೇಶ ರೊಟ್ಟಿ, ಸಬ್‌ ಇನ್ಸಪೆಕ್ಟರ್‌ ಮಂಜುನಾಥ ಹೂಗಾರ, ಅಪರಾಧ ವಿಭಾಗದ ಸಬ್‌ ಇನ್ಸಪೆಕ್ಟರ್‌ ಸಂಗಮೇಶ ಅಂಗಡಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಶಹನಾಜ್‌, ಡಾ. ರಾಘವೇಂದ್ರ ಕುಲಕರ್ಣಿ, ಡಾ.ಶ್ರೀದೇವಿ, ಡಾ.ಸಂಗೀತಾ, ಡಾ.ವೀರೇಶ, ಡಾ.ಶಿವಲಿಂಗ ಸೇರಿದಂತೆ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next