Advertisement

India ಬಹುತೇಕ ಕಡೆಗಳಲ್ಲಿ “ಜಾವೆಲಿನ್‌ ಡೇ” ಆಚರಣೆ

12:04 AM Aug 08, 2023 | Team Udayavani |

ಹೊಸದಿಲ್ಲಿ: ಸೋಮವಾರ ದೇಶದ ಬಹುತೇಕ ಕಡೆಗಳಲ್ಲಿ “ಜಾವೆಲಿನ್‌ ದಿನ’ವನ್ನು ಆಚರಿಸಲಾಯಿತು. ಟೋಕಿಯೊ ಒಲಿಂಪಿಕ್ಸ್‌ ಜಾವೆಲಿನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರ ಮಹೋನ್ನತ ಸಾಧನೆಗೆ ಈ ದಿನವನ್ನು ಮೀಸಲಿಡಲಾಯಿತು.

Advertisement

2021ರ ಆಗಸ್ಟ್‌ 7ರಂದು ನೀರಜ್‌ ಚೋಪ್ರಾ 87.58 ಮೀ. ದೂರದ ಸಾಧನೆಯೊಂದಿಗೆ ಬಂಗಾರ ಗೆದ್ದು ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ಹಿರಿಮೆ ಚೋಪ್ರಾ ಅವರದಾಗಿತ್ತು.

ಇದರ ಸವಿನೆನಪಿನಲ್ಲಿ ಗುಜರಾತ್‌, ಅಸ್ಸಾಮ್‌, ಹರ್ಯಾಣ, ಹೊಸದಿಲ್ಲಿ ಮೊದಲಾದ ಕಡೆಗಳಲ್ಲಿ ಜಾವೆಲಿನ್‌ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next