Advertisement
ಸೆಹ್ವಾಗ್ ಬಗ್ಗೆ ತಾನು ತಪ್ಪು ತಿಳಿದಿದ್ದೆ. ಆದ್ದರಿಂದ ತಾನು ಹೇಳಿಕೆ ಹಿಂಪಡೆಯುವುದಾಗಿ ಟ್ವೀಟರ್ನಲ್ಲಿ ಸ್ಪಷ್ಟೀಕರಿಸಿದ್ದಾರೆ.ಇತ್ತೀಚೆಗೆ ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಎಡ-ಬಲ ವಿದ್ಯಾರ್ಥಿಗಳ ನಡುವಿನ ಸಂಘರ್ಷ ಇಡೀ ಭಾರತದಲ್ಲಿ ಚರ್ಚೆಯಾಗಿತ್ತು. ಈ ಸಂದರ್ಭದಲ್ಲಿ ಮೃತ ಸೇನಾನಿ ಮಂದೀಪ್ ಸಿಂಗ್ ಪುತ್ರಿ ಗುರ್ಮೆಹರ್ ಕೌರ್ ಬಹಳ ಸಮಯದ ಹಿಂದೆ ನೀಡಿದ್ದ ಹೇಳಿಕೆ ದೊಡ್ಡ ಸುದ್ದಿಯಾಗಿತ್ತು. ತನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ ಎಂದು ವಿದ್ಯಾರ್ಥಿನಿ ಹೇಳಿದ್ದರು. ಅದನ್ನು ಹಾಸ್ಯಮಾಡಿದ್ದ ಸೆಹ್ವಾಗ್, 2 ತ್ರಿಶತಕ ಹೊಡೆದಿದ್ದು ತಾನಲ್ಲ, ತನ್ನ ಬ್ಯಾಟ್ ಎಂದಿದ್ದರು. ಇದರಿಂದ ಆಕ್ರೋಶಗೊಂಡು ಜಾವೇದ್ ಸೆಹ್ವಾಗ್ರನ್ನು ಅಶಿಕ್ಷಿತ ಎಂಬರ್ಥದಲ್ಲಿ ವರ್ಣಿಸಿದ್ದರು.ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸೆಹ್ವಾಗ್, ತಾನು ಕೇವಲ ಹಾಸ್ಯಕ್ಕಾಗಿ ಮಾತ್ರ ಮೇಲಿನಂತೆ ಹೇಳಿದ್ದಾಗಿ ನುಡಿದಿದ್ದರು.