Advertisement
ಹೌದು, ನೇರಳೆ ಸವಿಯುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಇಷ್ಟಪಡುವಂತ ಹಣ್ಣು ಇದು. ಅಪರೂಪಕ್ಕೊಮ್ಮೆ ತಿಂದರೂ ಸಾಕಷ್ಟು ಲಾಭವಿದೆ. ಆದರೆ, ಈ ಹಣ್ಣು ಎಲ್ಲ ಸಮಯದಲ್ಲಿ ಸಿಗುವುದಿಲ್ಲ. ಸಿಕ್ಕಾಗ ಸೇವಿಸಿದರೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
Related Articles
Advertisement
ಔಷಧೀಯ ಗುಣ ಹೊಂದಿರುವ ನೇರಳೆ :
ನೇರಳೆ ಮರದ ಎಲೆ,ಕಾಯಿ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಒಳಗೊಂಡಿದೆ. ನೇರಳೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆನ್ಸ್ ಗುಣ, ಕಬ್ಬಿಣಾಂಶ ಹೇರಳವಾಗಿದ್ದು ಮಧುಮೇಹಿ ಗಳಿಗೆ ಉಪಯುಕ್ತವಾಗಿದೆ. ಇದು ರಕ್ತ ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ. ಸೌಂದರ್ಯಕ್ಕೂ ಉಪಯುಕ್ತವಾಗಿದ್ದು, ಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೊಡವೆಗಳು ನಿವಾರಣೆಯಾಗುತ್ತದೆ. ಆದರೆ,ಕೆಳಗೆ ಬಿದ್ದ ಹಣ್ಣು ತಿನ್ನಬಾರದು. ಅದರಿಂದ ಆರೋಗ್ಯ ಆದಗೆಟ್ಟು ವಾಂತಿ, ಭೇದಿಯಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜ್ಯೂಸ್ ಮಾಡಿ ಸವಿಯಬಹುದು :
ನೇರಳೆ ಹಣ್ಣುಗಳನ್ನು ಹತ್ತು ನಿಮಿಷಗಳಕಾಲ ಬಿಸಿನೀರಿನಲ್ಲಿ ಕುದಿಸಬೇಕು. ಬಳಿಕ, ತಣ್ಣಗಾದ ಮೇಲೆ ಬೀಜ ಮತ್ತು ಪಲ್ಪ್ ಬೇರ್ಪಡಿಸಿ, ಮಿಕ್ಸಿಗೆ ಹಾಕಬೇಕು. ಸ್ವಲ್ಪ ಉಪ್ಪು, ಮೆಣಸು, ಸಕ್ಕರೆ, ಚಾಟ್ ಮಸಾಲ ಹಾಕಿ ಮಿಕ್ಸಿಯಲ್ಲಿ ತಿರುವಿ ಸೋಸಿಕೊಂಡರೆ ಜಂಬೂ ನೇರಳೆ ಜ್ಯೂಸ್ ಸಿದ್ಧವಾಗುತ್ತದೆ. ಕ್ಯಾನ್ಸರ್ ರೋಗ ತಡೆಗೆ ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ನೇರಳೆ ಹಣ್ಣಿನಲ್ಲಿಕ್ಯಾಲ್ಸಿಯಂ ಪೊಟಾಷಿಯಂ ಐರನ್ ಹಾಗೂ ಕೋವಿಡ್ ಸೋಂಕಿತರಿಗೆಕೊಡುವ ವಿಟಮಿನ್ ಸಿ ಹೆಚ್ಚಿರುತ್ತದೆ. ದೇಹದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ಆದರೆ, ಚೆನ್ನಾಗಿ ತೊಳೆದು ಸೇವಿಸಬೇಕು.–ಡಾ.ಟಿ.ಎ.ವೀರಭದ್ರಯ್ಯ, ಆರೋಗ್ಯ ಇಲಾಖೆ ಉಪನಿರ್ದೇಶಕ
ವಿಕಾಸ್ ಆರ್. ಪಿಟ್ಲಾಲಿ