Advertisement

ಶುರುವಾಗಲಿದೆ ಜಾವಾ ಹವಾ..!

06:00 AM Nov 26, 2018 | |

ಒಂದು ಕಾಲದಲ್ಲಿ ಮನೆಗಳಲ್ಲಿ ಜಾವಾ, ರಾಯಲ್‌ ಎನ್‌ಫೀಲ್ಡ್‌, ರಾಜದೂತ್‌ ಬೈಕ್‌ಗಳಿದ್ದರೆ ಅಂಥ ಬೈಕ್‌ಗಳನ್ನು ಹೊಂದಿರುವವರೇ ಶ್ರೀಮಂತರು ಅನ್ನುತ್ತಿದ್ದರು.  ಸವಾರ ಡುರುÅರ್‌ರ್‌ರ್‌.. ಎಂದು ಶಬ್ದ ಮಾಡುತ್ತ ಬೈಕ್‌ನಲ್ಲಿ ಸಾಗುತ್ತಿದ್ದರೆ,  ರಸ್ತೆ ಪಕ್ಕದವರೆಲ್ಲ ಕಣ್ಣರಳಿಸಿ ನೋಡುತ್ತಿದ್ದರು. 

Advertisement

ಆ ಬೈಕ್‌ಗಳ ಗತ್ತು ಗೈರತ್ತು ಹಾಗಿತ್ತು. ಕಾಲಾಂತರದಲ್ಲಿ ಈ ಬೈಕ್‌ ಕಂಪನಿಗಳಿಗೆ ಸಡ್ಡು ಹೊಡೆವಂತೆ ಹೊಸ ತಲೆಮಾರಿನ ಬೈಕ್‌ಗಳು ಬಂದಿದ್ದರಿಂದ ಹಳೆಯ, ಬೈಕ್‌ಗಳಿಗೆ ಬೇಡಿಕೆ ಕುಂದಿತ್ತು. ಆದರೂ ರಾಯಲ್‌ ಎನ್‌ಫೀಲ್ಡ್‌ ಮತ್ತೆ ತಲೆಎತ್ತಿದ್ದು ಒಂದು ವರ್ಗದ ಗ್ರಾಹಕರಿಗೆ ಅಚ್ಚುಮೆಚ್ಚಾಗಿದೆ. ಇದೀಗ, ಜಾವಾ ಕೂಡ ಮಾರುಕಟ್ಟೆಗೆ ಪ್ರವೇಶಸಿಲು ಸಜ್ಜಾಗಿ ನಿಂತಿದೆ. 

ಮಹೀಂದ್ರಾ ಮೂಲಕ ಪುನರ್ಜನ್ಮ 
1973ರವರೆಗೆ ಜಾವಾ ಬೈಕ್‌ಗಳು ಬಿಸಿ ಕೇಕ್‌ನಂತೆ ಮಾರಾಟವಾಗುತ್ತಿದ್ದವು. ಆ ಕಾಲದಲ್ಲಿ ಅವುಗಳ ತಯಾರಿಕೆಯ ಒಡೆತನವನ್ನು  ಪ್ರಸಿದ್ಧ ಬ್ರಿಟನ್‌ನ ಬಿಎಸ್‌ಎ ಕಂಪನಿ ಹೊಂದಿತ್ತು. 90ರ ದಶಕದಲ್ಲಿ ಜಾಗತೀಕರಣ ಪರಿಣಾಮದ ಸುಳಿಗೆ ಸಿಕ್ಕು ಕಂಪನಿ ಮುಚ್ಚಿತ್ತು. ಆದರೆ 2016ರಲ್ಲಿ ಭಾರತದ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಗೆ ಜಾವಾವನ್ನು ಮಾರಾಟ ಮಾಡಲಾಗಿತ್ತು. ಅದಾಗಲೇ ಮಹೀಂದ್ರಾ ಜಾವಾವನ್ನು ಮತ್ತೆ ಮಾರುಕಟ್ಟೆಗೆ ಬಿಡಲು ಯೋಜಿಸಿದ್ದು ಸಿದ್ಧತೆ ಮಾಡಿತ್ತು. ಅದರಂತೆ ಹಳೆಯ ಜಾವಾದ ಸ್ಟೈಲ್‌ ಅನ್ನೇ ಉಳಿಸಿಕೊಂಡು, ಅತ್ಯಾಧುನಿಕ ಎಂಜಿನ್‌ ಕೂರಿಸಿ ಹೊಸ ತಲೆಮಾರಿನ ಜಾವಾ ಬಿಡಲು ಪ್ಲಾನ್‌ ರೂಪಿಸಲಾಗಿತ್ತು. 

300 ಸಿಸಿ ಮಾದರಿಗೆ ಮತ್ತೂಂದು ಎಂಟ್ರಿ
ಈಗಾಗಲೇ ಭಾರತದಲ್ಲಿ 300 ಸಿಸಿ ಸಾಮರ್ಥ್ಯದ ಬೈಕ್‌ಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದೆ. ಅದನ್ನು ಗಮನಿಸಿಯೇ ಜಾವಾ 300 ಮತ್ತು ಜಾವಾ ಫೋರ್ಟಿ ಟು ಎಂಬ ಮಾದರಿಯ ಬೈಕ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇವು 293 ಸಿಸಿಯ ಎಂಜಿನ್‌ಗಳನ್ನು ಹೊಂದಿದ್ದು,   28 ಅಶ್ವಶಕ್ತಿ ಮತ್ತು 28 ಎಂ.ಎನ್‌. ಟಾಕ್‌ಗಳನ್ನು ಇವುಗಳು ಹೊಂದಿವೆ. ಎರಡೂ ಮಾದರಿ ಬೈಕ್‌ಗಳ ಎಂಜಿನ್‌ ತಾಂತ್ರಿಕತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಫೀಚರ್ಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. 

ಕ್ಲಾಸಿಕ್‌ ಲುಕ್‌ 
ಪಕ್ಕಾ ಕ್ಲಾಸಿಕ್‌ ಲುಕ್‌ ಅನ್ನು ಹೊಸ ಜಾವಾ ಬೈಕ್‌ ಹೊಂದಿದೆ. ಮುಂಭಾಗದಲ್ಲಿ ಡಿಸ್ಕ್ ಮತ್ತು ಸಿಂಗಲ್‌ ಚಾನೆಲ್‌ ಎಬಿಎಸ್‌ ವ್ಯವಸ್ಥೆ ಇದೆ. ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ ಹೊಂದಿದೆ. ಜತೆಗೆ ಫ್ರಂಟ್‌ ಟೆಲಿಸ್ಕೋಪಿಕ್‌, ಹಿಂಭಾಗ ಗ್ಯಾಸ್‌ಫಿಟ್ಟೆಡ್‌ ಶಾಕ್‌ಅಬಾÕರ್ಬರ್‌ಗಳನ್ನು ಹೊಂದಿದೆ. ಕ್ಲಾಸಿಕ್‌ ಮೀಟರ್‌ ಹೊಂದಿದ್ದು, ದೀರ್ಘ‌ ಚಾಲನೆಗೆ ಅನುಕೂಲವಾಗುವಂತೆ ಸೀಟು ಮತ್ತು ಟ್ಯಾಂಕ್‌ ವಿನ್ಯಾಸವಿದೆ. ಡ್ಯುಎಲ್‌ ಸೈಲೆನ್ಸರ್‌ ಹೊಂದಿದ್ದು, ಆಕರ್ಷಕವಾಗಿದೆ. 

Advertisement

ತಾಂತ್ರಿಕತೆ 
ಜಾವಾ, ಸಿಂಗಲ್‌ ಸಿಲಿಂಡರ್‌ನ ಎಂಜಿನ್‌ ಹೊಂದಿದ್ದು  ಇದಕ್ಕೆ ಫ‌ುÂಯೆಲ್‌ ಇಂಜೆಕ್ಷನ್‌ ಸಿಸ್ಟಂ ಇದೆ. ಜತೆಗೆ ಲಿಕ್ವಿಡ್‌ ಕೂಲ್ಡ್‌ ವ್ಯವಸ್ಥೆಯನ್ನು ಹೊಂದಿದೆ. 6 ಸ್ಪೀಡ್‌ ಗಿಯರ್‌ ಬಾಕ್ಸ್‌ ಹೊಂದಿದ್ದು, ಸೆಲ್ಫ್ ಸ್ಟಾರ್ಟ್‌ ಹೊಂದಿದೆ. ಹಿಂಭಾಗ ಮತ್ತು ಮುಂಭಾಗ ದಪ್ಪದ ಟಯರ್‌ (90/90-18 ಮತ್ತು 120/18-17 ಟ್ಯೂಬ್‌ಲೆಸ್‌) ಹೊಂದಿದೆ. ಒಟ್ಟು 2122 ಎಂ.ಎಂ. ಉದ್ದ ಹೊಂದಿದ್ದು, 170 ಕೆ.ಜಿ. ಭಾರವಿದೆ. ಸುಮಾರು 35-45 ಕಿ.ಮೀ. ಮೈಲೇಜ್‌ ನಿರೀಕ್ಷೆ ಇದೆ. 

ರೇಟ್‌ ಎಷ್ಟು? 
ದೆಹಲಿಯಲ್ಲಿ ಜಾವಾ ಫೋರ್ಟಿ ಟು ಬೆಲೆ 1.55 ಲಕ್ಷ ಇದ್ದರೆ, ಜಾವಾ 300 ಬೆಲೆ 1.64 ಲಕ್ಷ ರೂ. ಇದೆ. ಎರಡೂ ಎಕ್ಸ್‌ಷೋರೂಂ ಬೆಲೆ ಹೊಂದಿವೆ. 2019ರ  ಆರಂಭದಲ್ಲಿ ಬೈಕ್‌ಗಳು ಖರೀದಿಗೆ ಲಭ್ಯವಾಗುವ ನಿರೀಕ್ಷೆ ಇದೆ. 

– ಈಶ 

Advertisement

Udayavani is now on Telegram. Click here to join our channel and stay updated with the latest news.

Next