Advertisement
16ರಂದು ಬೆಳಗ್ಗೆ ಧ್ವಜಾರೋಹಣ ನಡೆದು ಸಂಜೆ ವಸಂತ ಪೂಜೆ, ಕಾರ್ಕಳ ಶ್ರೀ ಭಾರ್ಗವ ಮಹಿಳಾ ಭಜನ ಮಂಡಳಿ ಯಿಂದ ಭಜನ ಸತ್ಸಂಗ, 17ರಂದು ಬೆಳಗ್ಗೆ ಉತ್ಸವ, ಸಂಜೆ ವಸಂತ ಪೂಜೆ, ರಾತ್ರಿ ಭಿಡೆತೋಟ ಮಕ್ಕಳಿಂದ ನೃತ್ಯ ವೈವಿಧ್ಯ, ಮಾಳದ ಚಿತ್ಪಾವನ ಬ್ರಾಹ್ಮಣ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇವರ ದರ್ಶನ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ ನೆರವೇರಿತು. 18ರಂದು ಬೆಳಿಗ್ಗೆ ಸ್ತಂಭ ಮಹಾಗಣಪತಿಗೆ ಅಥರ್ವ ಶೀರ್ಷ ಸಹಸ್ರಾವರ್ತನ ಅಭಿಷೇಕ, ಸಂಜೆ ವಸಂತ ಪೂಜೆ ಬಳಿಕ ದೇವರ ಉತ್ಸವ ನೆರವೇರಿತು. ಎ. 19ರಂದು ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಯಕ್ಷಭಾರತಿ ಕನ್ಯಾಡಿ ಸದಸ್ಯರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ, ಮನೋಹರ ಪಟವರ್ಧನ್ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನ, ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ತುಳಪುಳೆ ಅವರಿಗೆ ಸಮ್ಮಾನ, ಮಡಂತ್ಯಾರು ನಿಯತಿ ನೃತ್ಯನಿಕೇತನ ಕಲಾ ಶಾಲೆಯವರಿಂದ ನೃತ್ಯಾರ್ಪಣ, ರಾತ್ರಿ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ದೇವರ ಉತ್ಸವ, ಕೊಡಮಣಿತ್ತಾಯ ದೈವದ ನೇಮ, ಮಹಾ ರಥೋತ್ಸವ, ದೈವ-ದೇವರ ಭೇಟಿಯ ಬಳಿಕ ಜಾತ್ರೆ ಸಂಪನ್ನಗೊಂಡಿತು.
Advertisement
ಬರಯ ಕ್ಷೇತ್ರ: ವಾರ್ಷಿಕ ಜಾತ್ರೆ ಸಂಪನ್ನ
09:15 PM Apr 23, 2019 | mahesh |
Advertisement
Udayavani is now on Telegram. Click here to join our channel and stay updated with the latest news.