ನಾನು ಅಮೆರಿಕಾಕಕ್ಕೆ ಬಂದು ಏಳು ವರ್ಷಗಳಾಗಿವೆ. ಮಕ್ಕಳಿಗೀಗ ಕ್ರಮವಾಗಿ 3 ಹಾಗೂ 5 ವರ್ಷ. ಭಾರತಕ್ಕೆ ಹಿಂದಿರುಗೋಣ ಎಂಬುದು ನನ್ನವಳ ಅಭಿಪ್ರಾಯ. ದೇಶದ ಬಗೆಗೆ ಗೌರವವಿದೆ. ಆದರೆ ಬಿಟ್ಟು ಬರುವ ಕೆಲಸದಲ್ಲಿ ಆತಂಕವಿದೆ. ಏನು ಮಾಡಬಹುದು? ಸಲಹೆ ನೀಡಿ.
Advertisement
ನಿಮ್ಮ ಜಾತಕದ ಪಂಚಮ ಭಾವ ಮತ್ತು ಪಂಚಮಾಧಿಪತಿಗಳ ಸಂಬಂಧ ನೇರವಾಗಿ ಜಲ ತತ್ವಗಳಿಗೆ ಸಂಬಂಧ ಪಡೆದು ಸಿದ್ಧಿ ಯೋಗದಲ್ಲಿ ಗಟ್ಟಿಗೊಂಡಿದ್ದರಿಂದ ನಿಮಗೆ ಮಕ್ಕಳ ವಿಚಾರದಲ್ಲಿ ತೊಂದರೆ ಬರದು. ಉತ್ತಮ ಸಂಸ್ಕಾರಗಳು ಕೌಟುಂಬಿಕ ವಲಯಕ್ಕೆ ಶ್ರೀ ರಕ್ಷೆಯಾಗಲು ಧರ್ಮ ಭಾವವು ಶುಕ್ರನಿಂದ ಬಲಗೊಂಡಿದೆ. ಅಮೇರಿಕಾದಲ್ಲೇ ಇದ್ದರೂ ತೊಂದರೆ ಆಗದು.
ನನಗೆ ದೇವರ ದಯದಿಂದ ಹಣಕಾಸಿನ ತೊಂದರೆ ಇಲ್ಲ. ಸಂಜೆಯ ಹೊತ್ತು ಮಾದಕ ದ್ರವ್ಯ ಸೇವಿಸದೆ ನಿದ್ದೆ ಹತ್ತುವುದಿಲ್ಲ. ಲಿವರ್ ಕೊಂಚ ಘಾಸಿಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಏಕ ನಿಷ್ಠೆಯಿಂದ ಮದ್ಯಪಾನದಿಂದ ದೂರಾಗಲು ದಾರಿ ತಿಳಿಸಿ. ರಾಹು ಗ್ರಹವು ಲಗ್ನಸ್ಥವಾಗಿ ದುಷ್ಟ ಕುಜನ ಪೈಶಾಚಿಕ ಮುಷ್ಟಿಯಲ್ಲಿ ಬಂಧಿತವಾಗಿದೆ. ಚಂದ್ರನ ನಿಮ್ನ ಹಾಗೂ ನೀಚ ಸ್ಥಿತಿ ಮಾನಸಿಕ ದುರ್ಬಲತೆಯನ್ನು ಸೂಚಿಸುತ್ತದೆ.ಅನುಕೂಲ ಮಾಡಿಕೊಂಡು ಪ್ರತಿ ದಿನ ನೆರವೇರಿ ಸುವುದಾದರೆ, ಸಂಜೆಯ ಆರರ ಹೊತ್ತಿಗೆ ಸ್ನಾನ ಪೂರೈಸಿ, ಆಲದ ಅಥವಾ ಅರಳೀ ಮರದ ಎಲೆಯೊಂದರಲ್ಲಿ 5 ಅವರೆಕಾಳನ್ನು ಜೇನು ತುಪ್ಪದಲ್ಲಿ ಬೆರೆಸಿ ಮನೆಯ ನೈಋತ್ಯ ಮೂಲೆಯಲ್ಲಿರಿಸಿ ಏಕಾಗ್ರತೆಯಿಂದ ಏಸುವಿನ ಧ್ಯಾನದಲ್ಲಿ ಒಂದು ತಾಸು ಕಳೆಯಿರಿ. ಈ ಅವರೇ ಕಾಳನ್ನು ನಿಂಬೆ ಹಣ್ಣಿನ ಜೊತೆ ನಂತರು ಶುದ್ಧ ಹಾಲಿನೊಂದಿಗೆ ಸೇವಿಸಿ. ಪರಿಣಾಮ ಉತ್ತಮ.
Related Articles
ಕನಸಲ್ಲಿ ಬಾಧೆಯಾಗುತ್ತಿದೆ. ನಿರ್ಜನ ಪ್ರದೇಶ ಒಂದರಲ್ಲಿ ಹುಲಿ, ಸಿಂಹ, ಕರಡಿಗಳು ಮೈಮೇಲೆ ಎರಗಿ ಬಂದಂತಾಗುತ್ತವೆ. ಕಷ್ಟಪಟ್ಟು ಓಡಿ ಅವುಗಳಿಂದ ತಪ್ಪಿಕೊಂಡಂತೆ ಅನಿಸಿದಾಗ ಎಚ್ಚರವಾಗುತ್ತದೆ. ಎಚ್ಚರವಾದಾಗ ಕೂಗದೇ ಇರಲಾಗದು. ಮನೆಯಲ್ಲಿ ಪತಿ ಹಾಗೂ ಮಕ್ಕಳಿಗೆ ಯಕ್ಷ ಪ್ರಶ್ನೆಯಾಗಿದ್ದೇನೆ. ಈ ಗೊಂದಲದಿಂದ ಹೊರಬರಲು ಏನು ಮಾಡಲಿ?
Advertisement
ಕುಜನು ಅಷ್ಟಮ ಭಾವದಲ್ಲಿ ನೀಚ ಗುರುವಿನೊಂದಿಗೆ ಇದ್ದಿರುವುದು, ಗುರುವಿನ ಕೇಂದ್ರಾಧಿಪತ್ಯ ದೋಷಕ್ಕೆ ಇನ್ನಿಷ್ಟು ದುರ್ಬಲತೆ ತುಂಬಿದೆ. ಎಳ್ಳೆಣ್ಣೆಯಿಂದ ಪಂಚಮುಖೀ ಹನುಮಂತನನ್ನು ಪ್ರತಿ ಶನಿವಾರ ಹಾಗೂ ಮಂಗಳವಾರ ಪೂಜಿಸಿ. ಈ ಎಣ್ಣೆಯ ನಯವನ್ನು ಪ್ರತಿ ದಿನ ತುಸುವೇ ಕಣ್ಣಿಗೆ ಲೇಪಿಸಿಕೊಂಡು ಪ್ರತಿ ದಿನ ನಿದ್ದೆ ಮಾಡಿ. ಪೂಜೆಯ ಸಮಯದಲ್ಲಿ ಮಹಾಕಾಳಿಯ ಸ್ತುತಿ ಮಾಡಿ.
ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:Email: bahumukhi@manipalmedia.com