ಮುಂಬೈ: ಆಸ್ಟ್ರೇಲಿಯ ವಿರುದ್ಧದ ಬಾರ್ಡರ್- ಗಾವಸ್ಕರ್ ಟ್ರೋಫಿಯ ಎರಡನೇ ದಿನದಾಟ ನಡೆಯುತ್ತಿದೆ. ಇದೀಗ ತಂಡದ ಪಾಲಿಗೆ ಕೆಟ್ಟ ಸುದ್ದಿಯೊಂದು ಬಂದಿದ್ದು, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರು ಈಗ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ವೇಗಿ ಬುಮ್ರಾ ಅವರ ಫಿಟ್ನೆಸ್ ಕುರಿತಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಬಯಸದ ಕಾರಣ ಅವರು ತಂಡಕ್ಕೆ ಪುನಾರಗಮನ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಕಳೆದ ವರ್ಷ ಏಷ್ಯಾ ಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬುಮ್ರಾ ಆಡಿಲ್ಲ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ಸರಣಿ ತಂಡದಲ್ಲಿ ಪ್ರಮುಖ ವಹಿಸವ ಕಾರಣ ಅವರ ವಿಚಾರದಲ್ಲಿ ಯಾವುದೇ ಅವಸರ ಮಾಡುತ್ತಿಲ್ಲ. ‘ದಿ ಟೆಲಿಗ್ರಾಫ್’ ಪತ್ರಿಕೆಯ ಪ್ರಕಾರ, ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಬುಮ್ರಾ ತಂಡವನ್ನು ಸೇರುವುದಿಲ್ಲ. ಬೆನ್ನುನೋವಿನ ಕಾರಣದಿಂದ ಅವರು ಪ್ರಸ್ತುತ ಬೆಂಗಳೂರಿನ ಎನ್ ಸಿಎಯಲ್ಲಿದ್ದಾರೆ.
ಇದನ್ನೂ ಓದಿ:ಕೆಂಗಲ್ ಹನುಮಂತಯ್ಯ ಕುರಿತ ಗ್ರಂಥ ಇದೇ ವರ್ಷ ಬಿಡುಗಡೆ: ಸಿಎಂ ಬೊಮ್ಮಾಯಿ
28ರ ಹರೆಯದ ಅವರು ಸತತ ಬೆನ್ನುನೋವಿನಿಂದ ಕಳೆದ 6 ತಿಂಗಳಿಂದ ಆಟದಿಂದ ಹೊರಗುಳಿದಿದ್ದಾರೆ. ಅವರು ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಗೆ ಆಯ್ಕೆಯಾಗಿದ್ದರು. ಆದರೆ ಪೂರ್ಣ ಗುಣಮುಖರಾಗದ ಕಾರಣ ಮತ್ತೆ ತಂಡ ಸೇರಿರಲಿಲ್ಲ.
ಈಗ ಎನ್‌ಸಿಎಯಲ್ಲಿ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಬಾರ್ಡರ್ – ಗಾವಸ್ಕರ್ ಟ್ರೋಫಿಯ ವಿಶ್ರಾಂತಿಯು ಅವರಿಗೆ ಪುನರ್ವಸತಿಗೆ ಹೆಚ್ಚಿನ ಸಮಯವನ್ನು ನೀಡುತ್ತದೆ.