ಮುಂಬಯಿ: ಈ ಬಾರಿಯ ಮುಂಬೈ ಹಿನ್ನಡೆಯಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಅವರ ವೈಫಲ್ಯವೂ ಒಂದು.
ಆರಂಭದ ಕೆಲವು ಪಂದ್ಯಗಳಲ್ಲಿ ಬುಮ್ರಾ ಮ್ಯಾಜಿಕ್ ನಡೆಯಲೇ ಇಲ್ಲ. ಹೀಗಾಗಿ ಮುಂಬೈ ಸತತ ಸೋಲುಗಳನ್ನು ಅನುಭವಿಸ ಬೇಕಾಯಿತು.
ಕೆಕೆಆರ್ ಎದುರಿನ ಮುಖಾಮುಖಿಯಲ್ಲಿ 5 ವಿಕೆಟ್ ಉರುಳಿಸುವ ಮೂಲಕ ಬುಮ್ರಾ ಮತ್ತೆ ಲಯ ಕಂಡುಕೊಂಡರು.
ಡೆಲ್ಲಿ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 25ಕ್ಕೆ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು. ಒಟ್ಟಾರೆಯಾಗಿ 14 ಪಂದ್ಯಗಳಿಂದ 25.53ರ ಸರಾಸರಿಯಲ್ಲಿ 15 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಇದರೊಂದಿಗೆ ಬುಮ್ರಾ ನೂತನ ಮೈಲುಗಲ್ಲೊಂದನ್ನು ನೆಟ್ಟಂತಾಯಿತು. ಸತತ 7 ಐಪಿಎಲ್ ಋತುಗಳಲ್ಲಿ 15 ಪ್ಲಸ್ ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಒಟ್ಟಾರೆಯಾಗಿ ಈ ಸಾಧನೆಗೈದ ದ್ವಿತೀಯ ಬೌಲರ್. ಮೊದಲ ಸಾಧಕ ಮುಂಬೈ ಇಂಡಿಯನ್ಸ್‌ನ ವರೇ ಆದ ಲಸಿತ ಮಾಲಿಂಗ.