Advertisement

ಭಾರತ ತಂಡಕ್ಕೆ ಮರಳಿದ ಜಸ್‌ಪ್ರೀತ್‌ ಬುಮ್ರಾ

10:10 AM Dec 25, 2019 | Sriram |

ಹೊಸದಿಲ್ಲಿ: ಫ‌ುಲ್‌ ಫಿಟ್‌ ಆದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಭಾರತ ತಂಡಕ್ಕೆ ವಾಪಸಾಗಿದ್ದಾರೆ. ಮುಂದಿನ ತಿಂಗಳು ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಗಾಗಿ ಸೋಮವಾರ ಪ್ರಕಟಿಸಲಾದ ತಂಡಗಳಲ್ಲಿ ಬುಮ್ರಾ ಹೆಸರು ಗೋಚರಿಸಿದೆ.

Advertisement

ಬುಮ್ರಾ ಆಗಮನದಿಂದಲೋ ಏನೋ, ಮತ್ತೋರ್ವ ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗೆಯೇ ಟಿ20 ಸರಣಿಯಿಂದ ರೋಹಿತ್‌ ಶರ್ಮ ಬ್ರೇಕ್‌ ಪಡೆದಿದ್ದಾರೆ. ವಿಂಡೀಸ್‌ ಸರಣಿಯ ವೇಳೆ ಗಾಯಾಳಾಗಿ ಹೊರಬಿದ್ದ ಆರಂಭಕಾರ ಶಿಖರ್‌ ಧವನ್‌ ಕೂಡ ತಂಡಕ್ಕೆ ಮರಳಿದ್ದಾರೆ. ಟಿ20 ತಂಡದಲ್ಲಿರುವ ಸಂಜು ಸ್ಯಾಮ್ಸನ್‌ ಮೀಸಲು ಆರಂಭಕಾರನಾಗಿರುತ್ತಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ತಿಳಿಸಿದರು.

ಪ್ರತಿಭಾನ್ವಿತ ವೇಗಿ ದೀಪಕ್‌ ಚಹರ್‌ ಗಾಯಾಳಾಗಿದ್ದು, ಐಪಿಎಲ್‌ ಆರಂಭವಾಗುವ ತನಕ ವಿಶ್ರಾಂತಿಯಲ್ಲಿರುವ ಕಾರಣ ಆಯ್ಕೆ ವ್ಯಾಪ್ತಿಯಿಂದ ಹೊರಗುಳಿದರು. ಗಾಯಾಳಾದ ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌ ಕೂಡ ಗಣನೆಗೆ ಬರಲಿಲ್ಲ. ಮಹೇಂದ್ರ ಸಿಂಗ್‌ ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ “ಇದಕ್ಕೆ ಪ್ರತಿಕ್ರಿಯಿಸಲಾರೆ’ ಎಂದು ಪ್ರಸಾದ್‌ ಹೇಳಿದರು.

ಟಿ20ಯಲ್ಲಿ ಮೊಹಮ್ಮದ್‌ ಶಮಿ ಬದಲು ನವದೀಪ್‌ ಸೈನಿ ಸ್ಥಾನ ಪಡೆದರು. ಆದರೆ ತಂಡಗಳಲ್ಲಿ ಯಾವುದೇ ಹೊಸ ಮುಖದ ದರ್ಶನವಾಗಲಿಲ್ಲ.

ಮುಗಿದ ಕಾರ್ಯಾವಧಿ
ಇದು ಪ್ರಸಾದ್‌ ನೇತೃತ್ವದಲ್ಲಿ ಪ್ರಕಟಗೊಂಡ ಕೊನೆಯ ತಂಡವಾಗಿದೆ. ಈ ಸಮಿತಿಯ ಕಾರ್ಯಾವಧಿ ಈಗಾಗಲೇ ಮುಗಿದಿರುವುದರಿಂದ ಹಾಗೂ ನೂತನ ಆಯ್ಕೆ ಸಮಿತಿ ರಚನೆ ಆಗದೇ ಇದ್ದುದರಿಂದ ತಂಡವನ್ನು ಯಾರು ಪ್ರಕಟಿಸಬಹುದೆಂಬ ಗೊಂದಲವಿತ್ತು. ಕ್ರಿಕೆಟ್‌ ಸಲಹಾ ಸಮಿತಿ ನೇಮಕಗೊಂಡ ಕೂಡಲೇ ನೂತನ ಆಯ್ಕೆ ಸಮಿತಿ ರಚನೆಯಾಗಲಿದೆ.

Advertisement

ವನಿತಾ ಟಿ20 ಚಾಲೆಂಜರ್‌ ಟ್ರೋಫಿ
ಜನವರಿ 4ರಿಂದ 11ರ ತನಕ ಕಟಕ್‌ನಲ್ಲಿ ನಡೆಯಲಿರುವ ವನಿತಾ ಟಿ20 ಚಾಲೆಂಜರ್‌ ಸರಣಿಗಾಗಿ 3 ತಂಡಗಳನ್ನು ಪ್ರಕಟಿಸಲಾಗಿದೆ. ಕ್ರಮವಾಗಿ ಹರ್ಮನ್‌ಪ್ರೀತ್‌ ಕೌರ್‌, ಸ್ಮತಿ ಮಂಧನಾ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಎ, ಬಿ, ಸಿ ತಂಡಗಳನ್ನು ಮುನ್ನಡೆಸಲಿದ್ದಾರೆ.

ಇಂಡಿಯಾ ಎ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ತಾನಿಯಾ ಭಾಟಿಯ, ಶಿವಾಲಿ ಶಿಂಧೆ, ಜಾಸಿಯಾ ಅಖ್ತರ್‌, ಪ್ರಿಯಾ ಪುನಿಯಾ, ದೀಪ್ತಿ ಶರ್ಮ, ದೇವಿಕಾ ವೈದ್ಯ, ಸ್ನೇಹಾ ರಾಣಾ, ಮಾನ್ಸಿ ಜೋಶಿ, ಮೇಘನಾ ಸಿಂಗ್‌, ಕೋಮಲ್‌ ಜಂಜಾದ್‌, ಮೀನು ಮಣಿ, ರಾಧಾ ಯಾದವ್‌, ಭಾರತಿ ಫ‌ುಲ್ಮಾಲಿ.

ಇಂಡಿಯಾ ಬಿ
ಸ್ಮತಿ ಮಂಧನಾ (ನಾಯಕಿ), ಸುಷ್ಮಾ ವರ್ಮ, ಆರ್‌. ಕಲ್ಪನಾ, ವಿ.ಆರ್‌. ವನಿತಾ, ಜೆಮಿಮಾ ರೋಡ್ರಿಗಸ್‌, ಅನುಜಾ ಪಾಟೀಲ್‌, ಪೂನಂ ಯಾದವ್‌, ಪೂಜಾ ವಸ್ತ್ರಾಕರ್‌, ಶಿಖಾ ಪಾಂಡೆ, ರೇಣುಕಾ ಸಿಂಗ್‌, ಅಂಜಲಿ ಸರ್ವಾಣಿ, ಸುಶ್ರೀ ದಿಬÂದರ್ಶಿನಿ, ಟಿ.ಪಿ. ಕನ್ವರ್‌, ರಿಚಾ ಘೋಶ್‌.

ಇಂಡಿಯಾ ಸಿ
ವೇದಾ ಕೃಷ್ಣಮೂರ್ತಿ (ನಾಯಕಿ), ನುಜತ್‌ ಪರ್ವೀನ್‌, ಶಫಾಲಿ ವರ್ಮ, ಯಾಸ್ತಿಕಾ ಭಾಟಿಯ, ಡಿ. ಹೇಮಲತಾ, ಹಲೀìನ್‌ ದೇವಲ್‌, ಮನಾಲಿ ದಕ್ಷಿಣಿ, ಜಿನ್ಸಿ ಜಾರ್ಜ್‌, ಅರುಂಧತಿ ರೆಡ್ಡಿ, ಮೋನಿಕಾ ಪಟೇಲ್‌, ವೃಶಾಲಿ ಭಗತ್‌, ರಾಜೇಶ್ವರಿ ಗಾಯಕ್ವಾಡ್‌, ತನುಶ್ರೀ ಸರ್ಕಾರ್‌, ಮಾಧುರಿ ಮೆಹ್ತಾ.

ಟಿ20 ತಂಡ
(ಶ್ರೀಲಂಕಾ ಸರಣಿಗೆ)
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ರವೀಂದ್ರ ಜಡೇಜ, ಶಿವಂ ದುಬೆ, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ನವದೀಪ್‌ ಸೈನಿ, ಶಾದೂìಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌, ಸಂಜು ಸ್ಯಾಮ್ಸನ್‌.

ಏಕದಿನ ತಂಡ
(ಆಸ್ಟ್ರೇಲಿಯ ಸರಣಿಗೆ)
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ನವದೀಪ್‌ ಸೈನಿ, ಶಾದೂìಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ.

Advertisement

Udayavani is now on Telegram. Click here to join our channel and stay updated with the latest news.

Next