Advertisement
ಆಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ವಿಂಡೀಸ್ ಹತ್ತು ವಿಕೆಟ್ ಗಳಿಂದ ವಿಜಯಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಓವರ್ ರೇಟ್ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕೆ ನಾಯಕ ಹೋಲ್ಡರ್ ಗೆ ನಿಷೇಧ ಶಿಕ್ಷೆ ವಿಧಿಸಿಲಾಗಿದೆ.
ಹೋಲ್ಡರ್ ನಿಧಾನ ಗತಿಯ ಬೌಲಿಂಗ್ ಧಾರಣೆಗಾಗಿ ನಿಷೇಧ ಶಿಕ್ಷೆ ಅನುಭವಿಸುತ್ತಿರುವುದು ಇದೇ ಮೊದಲೇನಲ್ಲ.
ಇದಕ್ಕೂ ಮೊದಲು 2017ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೂಡಾ ಇದೇ ಕಾರಣಕ್ಕೆ ಶಿಕ್ಷೆ ಅನುಭವಿಸದ್ದರು.
ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಈಗಾಗಲೇ ಗೆದ್ದಿರುವ ವೆಸ್ಟ್ ಇಂಡೀಸ್ ಅಂತಿಮ ಪಂದ್ಯವನ್ನು ಫೆಭ್ರವರಿ 9 ರಂದು ಸೈಂಟ್ ಲೂಸಿಕಾದಲ್ಲಿ ನಡೆಯಲಿದೆ.