Advertisement

ಮಲ್ಲಿಗೆ ದರ ಗರಿಷ್ಠ ಕುಸಿತ; ಅಟ್ಟೆಗೆ 90 ರೂ.!

01:39 AM Jun 19, 2019 | sudhir |

ಶಿರ್ವ: ಶಂಕರಪುರ ಮಲ್ಲಿಗೆಯ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಮಂಗಳವಾರ ಅಟ್ಟೆಗೆ ಕಟ್ಟೆಯಲ್ಲಿ 90 ರೂ.ಗೆ ತಲುಪಿದೆ. ಜೂ. 15ರಂದು ಅಟ್ಟೆಗೆ 260 ರೂ. ಇದ್ದ ದರ ರವಿವಾರ ಮತ್ತು ಸೋಮವಾರ ಇಳಿಕೆ ಕಂಡು 110 ರೂ.ಗೆ ತಲುಪಿತ್ತು, ಮಂಗಳವಾರ ಈ ವರ್ಷದ ಕನಿಷ್ಠ ದರ 90 ರೂ.ಗೆ ಕುಸಿದಿದೆ. ಜೂ.4ರಂದು ಅದು ತಿಂಗಳ ಅತ್ಯಧಿಕ ದರ 360 ರೂ. ದಾಖಲಿಸಿತ್ತು.
ಜಾತ್ರೆ, ಉತ್ಸವ, ಶುಭ ಸಮಾರಂಭಗಳು ಕಡಿಮೆಯಾಗಿದ್ದು ಬಿಸಿಲಿನೊಂದಿಗೆ ಮಳೆ ಬಂದರೆ ಹೂವಿಗೆ ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕಡಿಮೆಯಾಗಿ ದರ ಕುಸಿತ ಉಂಟಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next