Advertisement

ಶ್ರೀ ರಾಮಚಂದ್ರಾಪುರಕ್ಕೆ ನರೇಂದ್ರ‌ ಮೋದಿ ಪತ್ನಿ ಜಶೋದಾ ಬೆನ್ ಭೇಟಿ

09:04 AM Mar 05, 2020 | keerthan |

ಶಿವಮೊಗ್ಗ: ಇಲ್ಲಿನ ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಾಪುರ ಮಠಕ್ಕೆ ಪ್ರಧಾನಿ ನರೇಂದ್ರ‌ ಮೋದಿ ಪತ್ನಿ ಜಶೋದಾ ಬೆನ್ ಭೇಟಿ ನೀಡಿದರು.

Advertisement

ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿಯವರನ್ನು ಭೇಟಿಯಾದ ಜಶೋದಾ ಬೆನ್ ಅವರು ಭೇಟಿಯಾಗಿ ಆಶೀರ್ವಾದ ಪಡೆದರು.

ರಾಮಚಂದ್ರಾಪುರ ಮಠದ ಆವರಣದಲ್ಲಿ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಕೃಷ್ಣಾರ್ಪಣ ಕಾರ್ಯಕ್ರಮದಲ್ಲಿ ಜಶೋದಾ ಬೆನ್ ಭಾಗಿಯಾದರು. ನಂತರ ಮಾತನಾಡಿದ ಅವರು, ಶ್ರೀರಾಘವೇಶ್ವರ ಸ್ವಾಮೀಜಿಯಲ್ಲಿ ನಾನು ಆದಿ ಶಂಕರಾಚಾರ್ಯರನ್ನು ಕಂಡೆ ಎಂದ‌ರು

ಶಂಕರಾಚಾರ್ಯರ ಕಾಲಿಗೆ ಮೊಸಳೆ ಕಚ್ಚಿದ ಕಥೆ ನೆನಪಿಸಿಕೊಂಡ ಅವರು ಸಾಧುಸಂತರ ಬಗ್ಗೆ ಅಪಾರ ಗೌರವವಿರುವುದರಿಂದ ದೇಶದ ಉದ್ದಲಕ್ಕೆ ತೆರಳಿ ಸಾಧುಸಂತರ ಭೇಟಿ ಮಾಡುತ್ತಿದ್ದೇನೆ ಎಂದರು.

ಮೊದಲು ಮಠಕ್ಕೆ ಆಗಮಿಸಿದ ಕೂಡಲೇ ನೇರವಾಗಿ ಗೋವರ್ಧನಗಿರಿಗೆ ತೆರಳಿ ಗೋಪಾಲಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next