Advertisement

ಜರ್ಪಾಲ್ ಕ್ವೀನ್‌ ಸಂಚಾರ!

11:09 AM Sep 10, 2019 | Team Udayavani |

ಲೇಹ್‌: 48 ವರ್ಷಗಳ ಹಿಂದೆ ಪಾಕ್‌ ಜೊತೆಗೆ ನಡೆದ ಯುದ್ಧದಲ್ಲಿ ಭಾರತಕ್ಕೆ ಸಿಕ್ಕ ಜರ್ಪಾಲ್ ಕ್ವೀನ್‌ ಸೌಂದರ್ಯ ಈಗಲೂ ಒಂದಿಂಚೂ ಕುಂದಿಲ್ಲ. ಈಗಲೂ ಅದೇ ಗತ್ತಿ ನಿಂದ ಇಡೀ ದೇಶ ತಿರುಗುವ ಸಾಮರ್ಥ್ಯ ಹೊಂದಿದೆ. ತೆಳ್ಳನೆಯ ಹಾಗೂ ಹೊಳಪಿನ ಮೈಯುಳ್ಳ ಈ ವಿಲ್ಲಿಸ್‌ ಜೀಪ್‌ ಅನ್ನು ಪಾಕಿಸ್ಥಾನದ ಜರ್ಪಾಲ್ನಲ್ಲಿ ವಶಪಡಿಸಿಕೊಳ್ಳ ಲಾಗಿತ್ತು. ಹೀಗಾಗಿ ಇದಕ್ಕೆ ಜರ್ಪಾಲ್ ಕ್ವೀನ್‌ ಎಂದು ನಾಮಕರಣ ಮಾಡಲಾಯಿತು. ಇದನ್ನು ವಾರ್‌ ಟ್ರೋಫಿ ಎಂದು ರೆಜಿಮೆಂಟ್ ಪರಿಗಣಿಸಲಾಗಿದೆ.

Advertisement

1971ರಲ್ಲಿ ನಡೆದ ಯುದ್ಧದಲ್ಲಿ ಸಿಕ್ಕ ಈ ಜೀಪ್‌ ಸದ್ಯ ಲೇಹ್‌ನಲ್ಲಿದೆ. ಇಲ್ಲಿ 3 ಗ್ರೆನೆಡಿಯರ್‌ ರೆಜಿಮೆಂಟ್‌ನ ಕ್ಯಾಂಪ್‌ನ ಭಾಗ ವಾಗಿರುವ ಇದು, ಈ ರೆಜಿಮೆಂಟ್ ಅನ್ನು ದೇಶದ ಯಾವ ಮೂಲೆಗೆ ನಿಯೋಜಿಸಿದರೂ ಈ ಜೀಪ್‌ ಕೂಡ ರೆಜಿಮೆಂಟ್ ಜೊತೆಗೆ ಸಾಗು ತ್ತದೆ. 50 ವರ್ಷ ಹಳೆಯದಾದರೂ ಹೊಸ ವಾಹನದಂತೆಯೇ ಸಾಗುತ್ತದೆ. ವಿಐಪಿ ಅತಿಥಿಗಳು ಈ ರೆಜಿಮೆಂಟ್ ವ್ಯಾಪ್ತಿಗೆ ಆಗಮಿಸಿದಾಗ ಅವರಿಗೆ ಈ ಜೀಪ್‌ ಅನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಹಿರಿಯ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಲೂ ಬಳಸಲಾಗುತ್ತದೆ. ಈಗಲೂ ಇದು ಉತ್ತಮ ಸ್ಥಿತಿಯಲ್ಲಿದೆ ಎಂದು ನಿವೃತ್ತ ಕರ್ನಲ್ ಜೆ.ಎಸ್‌. ಧಿಲ್ಲೋನ್‌ ಹೇಳಿದ್ದಾರೆ.

ಯಾವ ರಾಜ್ಯಕ್ಕೆ ರೆಜಿಮೆಂಟ್ ಹೋದರೂ ಆ ರಾಜ್ಯದ ಸಾರಿಗೆ ಇಲಾಖೆಯಿಂದ ಅನು ಮತಿ ಪಡೆದು ಅಲ್ಲಿನ ರಸ್ತೆಗಳಲ್ಲೂ ಇದನ್ನು ಚಲಾವಣೆ ಮಾಡಲಾ ಗುತ್ತದೆ. ಈವರೆಗೆ ಜೈಪುರ, ಕುಪ್ವಾರಾ, ಶಿಮ್ಲಾ, ಪೂಂಚ್, ಮೀರತ್‌, ಫಿರೋಜ್‌ಪುರ ಸಹಿತ ಹಲವು ಪ್ರದೇಶಗಳಿಗೆ ಈ ಜೀಪ್‌ ಪ್ರಯಾಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next