Advertisement

ಮೇರಿ ವಿರುದ್ಧ ನೆಲಕಚ್ಚಿದ ಜರೀನ್‌

09:52 AM Dec 29, 2019 | sudhir |

ಹೊಸದಿಲ್ಲಿ: ಆರು ಬಾರಿಯ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ “ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ ಅರ್ಹತಾ ಟ್ರಯಲ್ಸ್‌ ಫೈನಲ್‌’ನಲ್ಲಿ ನಿಖತ್‌ ಜರೀನ್‌ ಅವರನ್ನು ಭರ್ಜರಿ ಯಾಗಿ ಮಣಿಸಿದ್ದಾರೆ. ಇದರೊಂದಿಗೆ ಭಾರತ ತಂಡ ಚೀನದಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕೆ ಅರ್ಹತೆ ಪಡೆದಿದೆ.

Advertisement

ಶನಿವಾರ ಇಲ್ಲಿನ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ 51 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಮೇರಿ ತಮ್ಮ ಎದುರಾಳಿ ನಿಖತ್‌ ವಿರುದ್ಧ 9-1 ಅಂತರದ ಅಧಿಕಾರಯುತ ಜಯ ಸಾಧಿಸಿದರು.

ಈ ಕೂಟಕ್ಕೂ ಮೊದಲು ಒಲಿಂಪಿಕ್ಸ್‌ ಅರ್ಹತಾ ಕೂಟದ 51 ಕೆಜಿ ವಿಭಾಗದಲ್ಲಿ ಮೇರಿ ಕೋಮ್‌ ಅವರನ್ನು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ನೇರ ಆಯ್ಕೆ ಮಾಡಿದ್ದಕ್ಕೆ ನಿಖತ್‌ ಜರೀನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಮುಂದುವರಿದ ಕಿತ್ತಾಟ
ಆದರೆ ಫೈನಲ್‌ ಪಂದ್ಯ ಮುಗಿ ದರೂ ಮೇರಿ-ಜರೀನ್‌ ನಡುವೆ ಕಿತ್ತಾಟವೇನೂ ಕೊನೆಗೊಂಡಿಲ್ಲ. “ಫೈನಲ್‌ ಪಂದ್ಯದಲ್ಲಿ ನನಗೆ ತುಂಬಾ ನೋವಾಗಿದೆ. ಮೇರಿ ಬಾಕ್ಸಿಂಗ್‌ ರಿಂಗ್‌ನಲ್ಲಿ ಕೆಟ್ಟ ಪದಗಳಿಂದ ನನ್ನನ್ನು ಹೀಯಾಳಿಸಿದ್ದಾರೆ. ಇದು ಓರ್ವ ಪ್ರತಿಷ್ಠಿತ ಬಾಕ್ಸರ್‌ಗೆ ಶೋಭೆ ತರುವುದಿಲ್ಲ’ ಎಂದು ನಿಖತ್‌ ಜರೀನ್‌ ಹೇಳಿದ್ದಾರೆ.

“ಫ‌ಲಿತಾಂಶ ಪ್ರಕಟಗೊಂಡ ಬಳಿಕ ನಾನು ಕೈ ಕುಲುಕಲು ಬಂದರೂ ಮೇರಿ ಕೋಮ್‌ ಇದಕ್ಕೆ ಸ್ಪಂದಿಸಲಿಲ್ಲ. ರಿಂಗ್‌ ಒಳಗೂ ಅವರು ಅಸಭ್ಯ ಪದಗಳನ್ನು ಬಳಸಿದರು. ಅವರ ಈ ವರ್ತನೆಯಿಂದ ನನಗೆ ನೋವಾಗಿದೆ’ ಎಂದರು.

Advertisement

“ಈ ಕುರಿತು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಯಾವುದೇ
ಅಪವಾದವನ್ನು ಹೊರಲು ನಾನು ಸಿದ್ಧಳಿಲ್ಲ. ರಿಂಗ್‌ನಲ್ಲಿ ಏನು ಸಂಭವಿ ಸಿದೆ ಎಂಬುದನ್ನು ಎಲ್ಲರೂ ನೋಡಿ ದ್ದಾರೆ. ಇದುವರೆಗಿನ ನನ್ನ ಬಾಕ್ಸಿಂಗ್‌ ಪಯಣದಲ್ಲಿ ಒಂದೂ ಕಪ್ಪು ಚುಕ್ಕಿ ಅಂಟಿಕೊಂಡಿಲ್ಲ. ಹೀಗೆಯೇ ಮುಂದುವರಿಯುವುದು ನನ್ನ ಗುರಿ’ ಎಂಬುದು ಮೇರಿ ಹೇಳಿಕೆ.

ಸಾಕ್ಷಿ, ಕೌರ್‌, ಲವಿÉನಾ ಜಯ
57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್‌ ಅವರನ್ನು ಸಾಕ್ಷಿ ಚೌಧರಿ ಪರಾಭವಗೊಳಿಸಿದರು. 60 ಕೆಜಿ ಸ್ಪರ್ಧೆಯಲ್ಲಿ ಎಲ್‌. ಸರಿತಾದೇವಿ ಅವರಿಗೆ ಸಿಮ್ರನ್‌ಜಿತ್‌ ಕೌರ್‌ ಆಘಾತವಿಕ್ಕಿದರು.

Advertisement

Udayavani is now on Telegram. Click here to join our channel and stay updated with the latest news.

Next