Advertisement

ಹರಾಮಿ ರೊಕ್ಕ ಖಾಲಿ ಮಾಡಲು ಸ್ಪರ್ಧೆ

11:33 PM Dec 05, 2019 | mahesh |

ಬೆಳಗಾವಿ: ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಜಾರಕಿ ಹೊಳಿ ಕುಟುಂಬದ ಮೂವರು ಸಹೋದರರು ಮತದಾನದ ದಿನವೂ ಪರಸ್ಪರ ವಾಗ್ಧಾಳಿ ನಡೆಸಿದ್ದಾರೆ. ಮತ ಚಲಾಯಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಮೇಶ ಜಾರಕಿಹೊಳಿ, ಇನ್ನು ಮುಂದೆ ಲಖನ್‌ನನ್ನು ತಮ್ಮ ಸಮೀಪಕ್ಕೂ ಸುಳಿಯಲು ಬಿಡುವುದಿಲ್ಲ. ಅವನ ನೆರಳು ಕೂಡ ನನಗೆ ಬೇಡ. ಎಲ್ಲಿಯೋ ಗಳಿಸಿದ ಹರಾಮಿ ರೊಕ್ಕ ಖಾಲಿ ಮಾಡಲು ಚುನಾವಣೆಗೆ ನಿಂತಿದ್ದಾನೆ. ಅದು ಜನರಿಗೆ ತಲುಪಲಿ ಎಂದರು. ಸತೀಶ ಕಾರಣದಿಂದಲೇ ನಾನು ಮನೆಯಿಂದ ಹೊರ ಹಾಕಲ್ಪಟ್ಟಿದ್ದೆ. ಈ ಹಿಂದೆ ಸತೀಶ ಕುಮ್ಮಕ್ಕಿನಿಂದಲೇ ನನ್ನನ್ನು ಮನೆಯಿಂದ ಹೊರ ಹಾಕಲಾಗಿತ್ತು. ಶಾಲಾ ದಿನಗಳಿಂದಲೂ ಸತೀಶ ನನ್ನನ್ನು ಕಾಡುತ್ತಾ ಬಂದಿದ್ದಾನೆ. ಆದರೆ ನಾನು ಸತೀಶಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವನಿಂದಲೇ
ನಾನು ಇಷ್ಟು ಬೆಳೆದಿದ್ದೇನೆ. ಅವನು ತುಳಿಯಲು ಪ್ರಯತ್ನಿಸಿದಷ್ಟು ನಾನು ಬೆಳೆದಿದ್ದೇನೆ ಎಂದರು.

Advertisement

ಹೆಬ್ಟಾಳಕರ ಮಾತು ಬೇಡ: ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಬಸ್‌
ನಿಲ್ದಾಣದಲ್ಲಿ ಹೂವು, ಎಸ್‌ಟಿಡಿ ಬೂತ್‌ನಲ್ಲಿ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡುವುದಿಲ್ಲ.
ಅವಳನ್ನು ಬೂತ್‌ನಿಂದ ಕರೆದುಕೊಂಡು ಬಂದು ಈ ಮಟ್ಟಕ್ಕೆ ಬೆಳೆಸಿದ್ದೇನೆ. ಈಗ ಅವಳ ಬಗ್ಗೆ ಮಾತು
ಬೇಡ ಎಂದರು.

ರಮೇಶ ಬಗ್ಗೆ ಮಾತಾಡಲ್ಲ: ಸತೀಶ
ಸಹೋದರರ ಆರೋಪ-ಪ್ರತ್ಯಾರೋಪ ಜೋರಾದ ಬೆನ್ನಲ್ಲೇ ಗೋಕಾಕದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸತೀಶ ಜಾರಕಿಹೊಳಿ, ರಮೇಶ ಟೀಕೆಗೆ ಪ್ರತಿಕ್ರಿಯೆ ನೀಡಲ್ಲ. ಗೋಕಾಕ ಕ್ಷೇತ್ರದ ಚುನಾವಣೆ ಹಾಗೂ ಇಲ್ಲಿನ ಜನರ ತೀರ್ಪು ಇಡೀ ರಾಜ್ಯದ ಗಮನ ಸೆಳೆಯಲಿದೆ. ಇಲ್ಲಿನ ಫಲಿತಾಂಶ ಮುಂದೆ ಮಹತ್ತರ ಬದಲಾವಣೆ ತರಲಿದೆ. ಅರಭಾವಿಯವರು ಇಲ್ಲಿ ಬಂದು ಬಹಳ ತೊಂದರೆ
ಮಾಡುತ್ತಿದ್ದರು. ರಾತ್ರಿ ಅವರನ್ನು ಹೊರ ಹಾಕುವ ಕೆಲಸ ಮಾಡಿದ್ದೇವೆ ಎಂದು ಪರೋಕ್ಷವಾಗಿ ಬಾಲಚಂದ್ರ ಜಾರಕಿಹೊಳಿಗೆ ತಿರುಗೇಟು ನೀಡಿದರು. ಡಿ.9ರ ನಂತರ ಎಲ್ಲವೂ ಹೊರ ಬರಲಿದೆ. ಆಗ ಉತ್ತರ ನೀಡುತ್ತೇನೆ ಎಂದರು.

ರಮೇಶಗೆ ನೆಲೆಯೇ ಇಲ್ಲ: ಲಖನ್‌
ಗೋಕಾಕದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಲಖನ್‌ ಜಾರಕಿ ಹೊಳಿ, ರಮೇಶ ತಾನು ಭ್ರಷ್ಟಾಚಾರ ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾನೆ. ಅವನ ಅಳಿಯಂದಿರು ಮಹಾರಾಷ್ಟ್ರದಲ್ಲಿ ಎರಡು ಚುನಾವಣೆ ಮಾಡಿ ದರು. ಅದಕ್ಕೆ ದುಡ್ಡು ಎಲ್ಲಿಂದ ಬಂತು? ಅವರ ದೇನು ಬಿಜಿನೆಸ್‌ ಇದೆಯೇ? ಕೈಗಾರಿಕೆ ಇದೆಯೇ? ಇವರಿಂದ ನಮ್ಮ ಕ್ಷೇತ್ರದ ಜನರನ್ನು ಉಳಿಸಲು ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಸತೀಶ ಮತ್ತು ಲಖನ್‌ ವಿರುದಟಛಿ ಅಳಿಯ ಅಂಬಿರಾವ್‌ ಪಾಟೀಲ ನಿಲ್ಲಿಸಿ ಗೆಲ್ಲಿಸುತ್ತೇನೆ ಎನ್ನುವ ರಮೇಶ ಮೊದಲು ತಾನು ಗೆಲ್ಲಲಿ. ಈಗ ಅವನಿಗೇ ನೆಲೆ ಇಲ್ಲ. ಡಿ.9ರಂದು ಎಲ್ಲವೂ
ಗೊತ್ತಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next