Advertisement
ಬಳಿಕ ಮಾತನಾಡಿದ ಅವರು, ಇಲ್ಲಿನ ಸಾರ್ವಜನಿಕರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದ ನಿಧಿಯಿಂದ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ನಡೆದಿದೆ. ಉತ್ತಮ ರೀತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದರು.
ನೇತ್ರಾವತಿ ನದಿ ತೀರದ ಮೂಲಕ ರಾಷ್ಟ್ರೀಯ ಹೆದ್ದಾರಿ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಯೋಜನೆ
ಸಂಬಂಧ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಯೋಜನ ವರದಿ ಸಲ್ಲಿಕೆಗಾಗಿ ಅನುಮೋದನೆಯೂ ದೊರಕಿದೆ. ಅಲ್ಲದೆ ಜಪ್ಪಿನಮೊಗರುವಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು 75 ಲಕ್ಷ ರೂ. ಗಳನ್ನು ಮೀಸಲಿಡಲಾಗಿದೆ ಎಂದರು. ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಸುರೇಂದ್ರ, ಕೆನರಾ ಬ್ಯಾಂಕಿನ ಮಾಜಿ ನಿರ್ದೇಶಕ ಉಮೇಶ್‌ಚಂದ್ರ, ದಿನೇಶ್ ಅಂಚನ್ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಪ್ರಭಾಕರ ಶ್ರೀಯಾನ್, ಅನಿಲ್ ಶೆಟ್ಟಿ, ಕೇಶವ ಅಂಗಡಿಮಾರ್, ಟಿ.ಕೆ. ಸುಧೀರ್, ಶ್ರೀಧರ್ ಶೆಟ್ಟಿ, ನೀರಜ್ ಪಾಲ್, ವರುಣ್ ರಾಜ್ ಅಂಬಟ್, ಭರತೇಶ್ ಅಮೀನ್, ನವೀನ, ಸ್ಟೀವನ್, ಅಬೂಬಕ್ಕರ್, ಹರ್ಬಟ್ ಡಿ’ಸೋಜಾ, ಸುನೀಲ್, ಗುತ್ತಿಗೆದಾರ ಸುಧಾಕರ ಪೂಂಜ ಮತ್ತಿತರರು ಉಪಸ್ಥಿತರಿದ್ದರು. ಜಪ್ಪಿನಮೊಗರು ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಸುಧಾಕರ್ ಜೆ. ನಿರೂಪಿಸಿದರು.