ಮಹಾನಗರ: ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ದೂರಿಯ ಚಾಲನೆ ನೀಡಲಾಯಿತು. ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ 7ನೇ ವರ್ಷಗಳಿಂದ ಹೊನಲು ಬೆಳಕಿನ ಈ ಕಂಬಳ್ಳೋತ್ಸವ ನಡೆಯುತ್ತಿದೆ. ಕನೆಹಲಗೆ, ಅಡ್ಡ ಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ ಸಹಿತ ಒಟ್ಟು 7 ವಿಭಾಗದಲ್ಲಿ 110 ಜತೆ ಕೋಣಗಳ ಸ್ಪರ್ಧೆ ನಡೆಯಿತು.
ಬೆಳಗ್ಗೆ 7.30ಕ್ಕೆ ಧಾರ್ಮಿಕ ವಿಧಾನಗಳು ಆರಂಭಗೊಂಡು ದೇರೆಬೈಲು ಬ್ರಹ್ಮಶ್ರೀ ವಿಟuಲದಾಸ್ ತಂತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ, ಬಂಟರ ಯಾನೆ ನಾಡವರ ಮಾತೃಸಂಘದ ಮಾಜಿ ಕಾರ್ಯದರ್ಶಿ ಸುಂದರ ಶೆಟ್ಟಿ, ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಆಡಳಿತ ಮೊಕ್ತೇಸರ ಚಿತ್ತರಂಜನ್ ಗರೋಡಿ, ನೀಲಕಂಠ ಉಮಾಮಹೇಶ್ವರ ದೇಗುಲದ ಆಡಳಿತ ಮೊಕ್ತೇಸರ ಮಂಜು ನಾಥ ಭಂಡಾರಿ, ಉದ್ಯಮಿ ಗಣೇಶ್ ಶೆಟ್ಟಿ, ಹರಿಯಪ್ಪ ಶೆಟ್ಟಿ, ಭುಜಂಗ ಶೆಟ್ಟಿ, ಕಾರ್ಪೊರೇಟರ್‌ಗಳಾದ ಪ್ರವೀಣ್‌ಚಂದ್ರ ಆಳ್ವ, ಸುರೇಂದ್ರ ಜೆ., ರಾಮಕೃಷ್ಣ ಶೆಟ್ಟಿ ಕಡೆಕಾರ್, ಉದಯಚಂದ್ರ ರೈ, ಮೋಹನ್‌ದಾಸ್ ಕಿಲ್ಲೆ, ಎನ್. ರವಿರಾಜ್ ಶೆಟ್ಟಿ, ಕಿರಣ್ ರೈ ಬಜಾಲ್, ಗಣೇಶ್ ಶೆಟ್ಟಿ ಕಂರ್ಬುಕೆರೆ, ಜಯಂತ್ ಜೆ. ಕೋಟ್ಯಾನ್, ಜೆ. ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಕೆ. ಅನಿಲ್ ಶೆಟ್ಟಿ ಮನ್ಕುತೋಟ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಚಾರ ಸಮಿತಿ ಸಂಚಾಲಕ ಜೆ. ಸೀತಾ ರಾಮ ಶೆಟ್ಟಿ ಸ್ವಾಗತಿಸಿದರು. ಉಮೇಶ್ ಅತಿಕಾರಿ ವಂದಿಸಿದರು. ಜೆ. ಶ್ರೀಧರ್‌ರಾಜ್ ಶೆಟ್ಟಿ, ಕರುಣಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುಭಾಷ್ ವಿ. ಅಡಪ ಕಾರ್ಯಕ್ರಮ ನಿರೂಪಿಸಿದರು.