Advertisement
ಟ್ವೀಟರ್ ನಲ್ಲಿ ಪರಿಚಯವಾದ ಯುವ ಸಂತ್ರಸ್ತರನ್ನು ಹತ್ಯೆಗೈದಿರುವುದಾಗಿ ಟಕಹಿರೋ ಶಿರೈಷಿ (30ವರ್ಷ)ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಗಂಭೀರ ಅಪರಾಧಕ್ಕಾಗಿ ಟೋಕಿಯೊ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
Related Articles
Advertisement
ಇದನ್ನೂ ಓದಿ:2022ರಲ್ಲಿ ಸ್ಪರ್ಧೆ- ಉತ್ತರಪ್ರದೇಶದಲ್ಲಿ ಈ ಬಾರಿ ನಮಗೊಂದು ಅವಕಾಶ ಕೊಡಿ: ಕೇಜ್ರಿವಾಲ್
ಟ್ವೀಟರ್ ಮಾಧ್ಯಮವನ್ನೇ ಬಳಸಿಕೊಂಡು ಶಂಕಿತ ಹಂತಕನನ್ನು ಪೊಲೀಸರು ಬಂಧಿಸಿದ್ದರು. ಫೆಬ್ರುವರಿಯಲ್ಲಿ ಶಂಕಿತ ಹಂತಕನನ್ನು ಸಂಘಟಿತ ಅಪರಾಧದ ಆರೋಪದಡಿ ಬಂಧಿಸಿದ್ದರು, ಆದರೆ ಜೈಲುವಾಸವನ್ನು ಅಮಾನತ್ತಿನಲ್ಲಿಟ್ಟಿರುವುದಾಗಿ ವರದಿ ತಿಳಿಸಿದೆ.
2009 ರಿಂದ 2011ರ ಜುಲೈವರೆಗೆ ಈತ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಬಳಿಕ ಕೆಲವನ್ನು ಬಿಟ್ಟಿದ್ದ. ತದನಂತರ ಕೆಲಸಕ್ಕಾಗಿ ತುಂಬಾ ಪ್ರಯತ್ನಪಟ್ಟಿದ್ದರೂ ಯಾವ ಕೆಲಸವೂ ಸಿಕ್ಕಿರಲಿಲ್ಲವಾಗಿತ್ತು.
ಮಾನಸಿಕವಾಗಿ ಕುಗ್ಗಿಹೋಗಿದ್ದ ಶಿರೈಷಿ ಆಯ್ದುಕೊಂಡಿದ್ದು ಟ್ವೀಟರ್ ಅನ್ನು, ಈ ಸೀರಿಯಲ್ ಹತ್ಯೆಯ ಘಟನೆಗೆ ಜಪಾನಿಗರು ಬೆಚ್ಚಿಬಿದ್ದಿದ್ದರು. ಯಾಕೆಂದರೆ ಜಪಾನ್ ನಲ್ಲಿ ಅಪರಾಧಗಳ ಸಂಖ್ಯೆ ತುಂಬಾ ಕಡಿಮೆ.
ಇದನ್ನೂ ಓದಿ:ಮೇಲ್ಮನೆಯಲ್ಲಿ ಹೊಯ್ ಕೈ, ಎಳೆದಾಟ.. ಪರಿಷತ್ ಪೀಠದ ಮೇಲೆ ಜಂಗೀಕುಸ್ತಿ: ಕಲಾಪ ಮುಂದೂಡಿಕೆ
ನಾನು ಟ್ಟೀಟರ್ ಮೂಲಕ ಸಂತ್ರಸ್ತೆರನ್ನು ಸಂಪರ್ಕಿಸಿ ನಂತರ ಅವರನ್ನು ನನ್ನ ಸಂಪರ್ಕಿಸಲು ಬಂದಾಗ ಕೊಲೆಗೈಯುತ್ತಿದ್ದೆ ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಟೋಕಿಯೋದ ನೈಋತ್ಯ ಪ್ರದೇಶದ ಝಾಮಾ ಎಂಬಲ್ಲಿ ಫ್ಲ್ಯಾಟ್ ಹೊಂದಿದ್ದ, ಆಗಸ್ಟ್ 22ರಂದು ಟ್ವೀಟ್ ಮೂಲಕ ಸಂತ್ರಸ್ತೆಯೊಬ್ಬಳನ್ನು ಸಂಪರ್ಕಿಸಿ ಆತ್ಮಹತ್ಯೆ ಯೋಚನೆಗೆ ನೆರವು ನೀಡುವುದಾಗಿ ಹೇಳಿದ್ದ ಎಂದು ಶಿಂಬನ್ ಡೈಲಿ ವರದಿ ಮಾಡಿದೆ. ಇದರ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಹಂತಕ ಸಿಕ್ಕಿಬಿದ್ದಿದ್ದ!