Advertisement

ಜಪಾನ್ ಕಂಪನಿ ತೆಕ್ಕೆಗೆ ಉಡುಪಿಯ ‘ರೋಬೋಸಾಫ್ಟ್‌’ : 805 ಕೋಟಿ ರೂ.ಗೆ ಮಾರಾಟ

07:17 PM Aug 10, 2021 | |

ಉಡುಪಿ: ಜಪಾನ್‌ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್‌ ಕಂಪನಿ ಕರ್ನಾಟಕದ ಉಡುಪಿ ಮೂಲದ ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ಸೊಲ್ಯೂಷನ್ಸ್ ಸಂಸ್ಥೆ ರೋಬೋಸಾಫ್ಟ್ ನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದು, 805 ಕೋಟಿ ರೂ. ನೀಡಿ ಖರೀದಿಸಿದೆ. ಇಂದು ( ಆ.10) ರೋಬೋಸಾಫ್ಟ್ ಕಂಪನಿಯ ಮಾರಾಟ ಪತ್ರಗಳಿಗೆ ಸಹಿ ಕೂಡ ಮಾಡಲಾಗಿದೆ.

Advertisement

ರೋಬೋಸಾಫ್ಟ್ ಬೆಳೆದು ಬಂದ ಬಗೆ :

ರೋಹಿತ್ ಭಟ್  ಎಂಬುವರು 1996 ರಲ್ಲಿ ಉಡುಪಿಯಲ್ಲಿ ರೋಬೋಸಾಫ್ಟ್ ಸ್ಥಾಪಿಸಿದರು. ಈ ಕಂಪನಿಯು ಭಾರತವನ್ನು ಹೊರತುಪಡಿಸಿ ಜಪಾನ್ ಮತ್ತು ಅಮೆರಿಕಾದಲ್ಲಿ ವಿತರಣಾ ಕೇಂದ್ರಗಳನ್ನು ಹೊಂದಿದೆ. ಪ್ರಸಕ್ತ 1,000ಕ್ಕೂ ಅಧಿಕ ಉದ್ಯೋಗಿಗಳು ಈ ಕಂಪನಿಯಲ್ಲಿದ್ದಾರೆ.

ಈ ಕಂಪನಿಯು ಪ್ರಾಜೆಕ್ಟ್‌ಗಳನ್ನು ತೆಗೆದುಕೊಂಡು ಬಳಕೆದಾರರ ವಿನ್ಯಾಸ, ಎಂಜಿನಿಯರಿಂಗ್ ಮತ್ತು ವಿಶ್ಲೇಷಣೆಯಂತಹ ಡಿಜಿಟಲ್ ರೂಪಾಂತರದಲ್ಲಿ ಪರಿಹಾರಗಳನ್ನು ನೀಡುತ್ತದೆ. ಇವರ ಮೊದಲ ಗ್ರಾಹಕ ಆಪಲ್ ಅನ್ನೋದು ವಿಶೇಷ.

ಆದಾಯ ದುಪ್ಪಟ್ಟು :

Advertisement

ಹಣಕಾಸು ವರ್ಷ 2020-21ರಲ್ಲಿ ಕಂಪನಿಯ ನಿವ್ವಳ ಮಾರಾಟವು 184 ಕೋಟಿ ರೂಪಾಯಿಗಳಷ್ಟಿದ್ದು, ಹಿಂದಿನ ವರ್ಷ 97.4 ಕೋಟಿ ರೂಪಾಯಿಗೆ ಹೋಲಿಸಿದರೆ ಶೇಕಡಾ 89ರಷ್ಟು ಹೆಚ್ಚಾಗಿದೆ. ಇನ್ನು ಕಂಪನಿಯ ನಿವ್ವಳ ಆದಾಯವು ಪ್ರಸಕ್ತ ಹಣಕಾಸು ವರ್ಷ 49.4 ಕೋಟಿಯಷ್ಟಿದ್ದು, ಮಾರ್ಚ್ 2020 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ 18.2 ಕೋಟಿ ರೂಪಾಯಿಗಳಿಂದ ಶೇಕಡಾ 170ರಷ್ಟು ಹೆಚ್ಚಾಗಿದೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ರೋಬೋಸಾಫ್ಟ್ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಅಸೆಂಟ್ ಕ್ಯಾಪಿಟಲ್ ಮತ್ತು ಕಲಾರಿ ಕ್ಯಾಪಿಟಲ್ ಜೊತೆಗಿನ ಪಾಲುದಾರಿಕೆಯು ನಮಗೆ ಬಲವಾದ ಬೆಳವಣಿಗೆ ಕಂಡಿದ್ದೇವೆ. ಇದೀಗ ಟೆಕ್ನೋಪ್ರೋನಂತಹ ಜಾಗತಿಕ ದೈತ್ಯನಿಗೆ ನಮ್ಮ ಕಂಪನಿ ಹಸ್ತಾಂತರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು ರೋಬೋಸಾಫ್ಟ್ ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಹೇಳಿದ್ದಾರೆ.

ಕಂಪನಿಯು ಕ್ರಮವಾಗಿ 2011 ಮತ್ತು 2008 ರಲ್ಲಿ ಕಲಾರಿ ಮತ್ತು ಅಸೆಂಟ್ ಕ್ಯಾಪಿಟಲ್‌ನಿಂದ ಹಣವನ್ನು ಸಂಗ್ರಹಿಸಿತ್ತು. ಇನ್ನು ರೋಬೋಸಾಫ್ಟ್ ಕಂಪನಿಯು ಪ್ರಸ್ತುತ ಇರುವಂತಹ ನಿರ್ವಹಣಾ ತಂಡವೇ ಮುನ್ನಡೆಸುತ್ತದೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರವಿತೇಜ ಬೊಮ್ಮಿರೆಡ್ಡಿಪಲ್ಲಿ ನೇತೃತ್ವದಲ್ಲಿ ಮುನ್ನೆಡೆಯಲಿದೆ. ಇತ್ತೀಚೆಗೆ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಉನ್ನತೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next