Advertisement

ಚೀನ ತೊರೆಯುವ ಕಂಪೆನಿಗಳಿಗೆ ಜಪಾನ್‌ ಪರಿಹಾರ

11:12 AM Jul 20, 2020 | mahesh |

ಟೋಕಿಯೊ: ಚೀನದಲ್ಲಿ ಕೋವಿಡ್ ಸ್ಫೋಟವಾದ ನಂತರ ಅದು ನಡೆದುಕೊಂಡ ರೀತಿಗೆ ವಿಶ್ವಾದ್ಯಂತ ಟೀಕೆಗಳು ವ್ಯಕ್ತವಾಗಿವೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೇ ವಿಶ್ವಕ್ಕೆ ಸರಿಯಾಗಿ ಮಾಹಿತಿ ನೀಡದೇ ವಂಚಿಸಿದ ಅದರ ವಿರುದ್ಧ ಬಹುತೇಕ ದೇಶಗಳು ಸಿಟ್ಟಾಗಿವೆ! ಇತ್ತೀಚೆಗಷ್ಟೇ ಭಾರತ, ಚೀನದ 59 ಆ್ಯಪ್‌ಗ ಳನ್ನು ನಿಷೇಧಿಸಿತ್ತು. ಅಮೆರಿಕವೂ ಇದೇ ದಾರಿ ಹಿಡಿಯಲು ಚಿಂತಿಸುತ್ತಿದೆ. ಇದರ ಬೆನ್ನಲ್ಲೇ ಜಪಾನ್‌, ಚೀನದಿಂದ ಹೊರಬರುವ ತನ್ನ ಕಂಪೆನಿಗಳಿಗೆ ಪರಿಹಾರ ನೀಡಲು ಚಿಂತಿಸಿದೆ ಎಂದು ಬ್ಲೂಮ್‌ಬರ್ಗ್‌ನಲ್ಲಿ ವರದಿಯಾಗಿದೆ.

Advertisement

ಯಾವ ಕಂಪೆನಿಗಳು ಚೀನದಿಂದ ಮರಳಿ ದೇಶಕ್ಕೆ ಬಂದು ಸಾಮ್ರಾಜ್ಯ ವಿಸ್ತರಿಸುತ್ತವೆಯೋ ಅಥವಾ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಳ್ಳುತ್ತ­ವೆಯೋ ಅವಕ್ಕೆ ಆರ್ಥಿಕ ನೆರವು ನೀಡಲು ಅದು ನಿರ್ಧರಿಸಿದೆ! ಚೀನದ ಉತ್ಪನ್ನಗಳ ಮೇಲೆ ಅವಲಂಬನೆ ತಪ್ಪಿಸಲು ಜಪಾನ್‌ ಈ ಹೆಜ್ಜೆಯಿಟ್ಟಿದೆ. ಇನ್ನೊಂದು ರೀತಿಯಲ್ಲಿ ತನ್ನ ನೆಲೆಗಳನ್ನು ಆಕ್ರಮಿಸಿಕೊಳ್ಳಲು ಹೊಂಚು ಹಾಕುತ್ತಿರುವ ಚೀನಕ್ಕೆ ಸಡ್ಡು ಹೊಡೆಯುವ ಪ್ರಯತ್ನವೂ ಹೌದು. ಚೀನದ ಉತ್ಪನ್ನಗಳ ಮೇಲಿನ ಅವಲಂಬನೆ ತಪ್ಪಿಸಲು ಜಪಾನ್‌ 243.5 ಬಿಲಿಯನ್‌ ಯೆನ್‌ ಎತ್ತಿಟ್ಟಿದೆ. 70 ಬಿಲಿಯನ್‌ ಯೆನ್‌ ಚೀನದಿಂದ ಹೊರಬರುವ ಕಂಪೆನಿಗಳಿಗಾಗಿ ವಿನಿಯೋಗಿಸುತ್ತಿದೆ. ಈಗಾಗಲೇ 57 ಕಂಪೆನಿಗಳಿಗೆ 57.4 ಬಿಲಿಯನ್‌ ನೀಡಲು ನಿರ್ಧರಿಸಲಾಗಿದೆ. ವಿಯೆಟ್ನಾಮ್‌, ಮ್ಯಾನ್ಮಾರ್‌, ಥಾಯ್ಲೆಂಡ್‌ನ‌ಂತಹ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನೆಲೆಯೂರಲು ಬಯಸುವ 30ಕ್ಕೂ ಹೆಚ್ಚು ಕಂಪೆನಿಗಳಿಗೂ ನೆರವು ಸಿಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next