Advertisement
ಸರಕಾರಿ ನಿಯೋಜಿತ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಟೋಕಿಯೊ ಅಲ್ಲದೆ ಪಕ್ಕದ ಕನಗಾವ, ಚಿಬ ಮತ್ತು ಸೈತಮ ರಾಜ್ಯಗಳಲ್ಲಿ ಹಾಗೂ ಉತ್ತರದ ಹೊಕೈಡೊ ರಾಜ್ಯದಲ್ಲಿ ವಿಧಿಸಲಾಗಿದ್ದ ಕೋವಿಡ್ ತುರ್ತು ಸ್ಥಿತಿಯನ್ನು ಸೋಮವಾರ ಹಿಂದೆಗೆದುಕೊಳ್ಳಲಾಯಿತು.
ಜಪಾನ್‌ನಲ್ಲಿ 16,600 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಸುಮಾರು 850 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಸಂಭವಿಸಿರುವಂತೆ ಸೋಂಕು ತೀವ್ರ ಸ್ವರೂಪ ಪಡೆಯುವುದನ್ನು ತಡೆಯುವಲ್ಲಿ ಜಪಾನ್ ಈತನಕ ಯಶಸ್ವಿಯಾಗಿದೆ.
Related Articles
ಇದೇ ಸಮಯ ಜಗತ್ತಿನ ಮೂರನೆ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಜಪಾನ್‌ನಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿದೆ. ಅಬೆ ಅವರು ಕೋವಿಡ್‌ನ ನಿಭಾಯಿಸಿದ ರೀತಿಯ ಬಗ್ಗೆ ಸಾರ್ವಜನಿಕ ಅಸಮಾಧಾನವಿದ್ದು ಅವರಿಗೆ ಜನಬೆಂಬಲ ತೀವ್ರ ಕುಸಿದಿದೆ.
Advertisement
ಅವರ ಸಂಪುಟಕ್ಕೆ ಸಾರ್ವಜನಿಕ ಬೆಂಬಲ ಶೇ. 30ಕ್ಕಿಂತ ಕೆಳಗೆ ಕುಸಿದಿರುವುದು ಈಚಿನ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿದೆ. ಇದು ಅವರು 2012ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಮರಳಿದ ಬಳಿಕ ಅವರಿಗೆ ವ್ಯಕ್ತವಾಗಿರುವ ಅತಿಕನಿಷ್ಠ ಜನಬೆಂಬಲವಾಗಿದೆ.
ಅಬೆ ಅವರು ಎ. 7ರಂದು ಟೋಕಿಯೊ ಸಹಿತ ಜಪಾನಿನ ಹಲವು ಭಾಗಗಳಲ್ಲಿ ತುರ್ತು ಸ್ಥಿತಿ ಘೋಷಿಸಿದ್ದರು.ಅನಂತರ ಮಾಸಾಂತ್ಯ ಅದನ್ನು ಇಡೀ ದೇಶಕ್ಕೆ ವಿಸ್ತರಿಸಿದ್ದರು. ಬಳಿಕ ಮೇ ಅಂತ್ಯದವರೆಗೆ ವಿಸ್ತರಣೆ ಮಾಡಿದ್ದರು.