Advertisement

Japan ಐತಿಹಾಸಿಕ ಅರೆಬೆತ್ತಲೆ ಹಬ್ಬ ಬಂದ್‌: ಏನಿದು ಉತ್ಸವ?

12:32 AM Feb 19, 2024 | Team Udayavani |

ಟೋಕಿಯೊ: ಕಡಿಮೆ ಜನನ ಪ್ರಮಾಣ ಹಾಗೂ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿ ರುವ ಜಪಾನ್‌ನಲ್ಲಿ ಈಗಾಗಲೇ ಆರ್ಥಿಕ ಸಮಸ್ಯೆಗಳು ತಲೆದೋರಿದೆ. ಜನಸಂಖ್ಯಾ ಅಸಮತೋಲನವು ಅಲ್ಲಿನ ಸಾಂಸ್ಕೃತಿಕ ಪರಂಪರೆ ಮೇಲೂ ಪ್ರಭಾವ ಬೀರಿದೆ. ಪುರಾತನಕಾಲದಿಂದಲೂ ಜಪಾನ್‌ನಲ್ಲಿ ಆಚರಿಸಲಾಗುತ್ತಿದ್ದ ಸೋಮಿನ್‌ ಹಬ್ಬವು (ಪುರುಷರ ಅರೆಬೆತ್ತಲೆ ಹಬ್ಬ) ಈ ವರ್ಷ ಶಾಶ್ವತವಾಗಿ ಕೊನೆಗೊಂಡಿದೆ.
ಜಪಾ ನ್‌ನಲ್ಲಿ ಆಚರಿಸುವ ಈ ವಿಚಿ ತ್ರ ಹಬ್ಬವನ್ನು ಲೂನಾರ್‌ ಹೊಸ ವರ್ಷದ 7ನೇ ದಿನದಂದು ಕೊಕುಸೇಕೆ ಜಿ ಎಂಬ ದೇಗುಲದಲ್ಲಿ ಪ್ರತೀ ವರ್ಷ ಆಚರಿಸಲಾ ಗುತ್ತದೆ. ಇತ್ತೀಚಿನ ದಶಕಗಳಲ್ಲಿ ಸ್ಥಳೀಯ ವೃದ್ಧರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಪ್ರವಾಸಿಗರನು, ಹಬ್ಬದಲ್ಲಿ ಭಾಗಿಯಾಗು ವವರನ್ನು ನಿಭಾ ಯಿಸಲು ಸಾಧ್ಯವಾಗದ ಕ್ಕೆ ಹಬ್ಬ ನಿಲ್ಲಿಸಲು ನಿರ್ಧರಿಸಲಾಗಿದೆ.

Advertisement

ಏನಿದು ಉತ್ಸವ ?
ಪುರುಷರು ಅರೆಬೆತ್ತಲಾಗಿ ಚಳಿಗಾಲದಲ್ಲಿ ತಣ್ಣೀರನ್ನೇ ಸುರಿದುಕೊಂಡು ಆಚರಿಸುವ ಹಬ್ಬ
ಕೈಯಲ್ಲಿ ಅದೃಷ್ಟದ ದಂಡದ ಪಂಜು ಹಿಡಿದು ಇಡೀ ರಾತ್ರಿ ದೇಗುಲದಲ್ಲೇ ಇರುತ್ತಾರೆ.
ಸಮೃದ್ಧಿಗಾಗಿ ಈ ಆಚರಣೆ

Advertisement

Udayavani is now on Telegram. Click here to join our channel and stay updated with the latest news.

Next