Advertisement

ಭೀಕರ ಚಂಡಮಾರುತಕ್ಕೆ ತತ್ತರಿಸಿದ ಜಪಾನ್: ಸಾವಿನ ಸಂಖ್ಯೆ 74ಕ್ಕೆ ಏರಿಕೆ

10:10 AM Oct 17, 2019 | Mithun PG |

ಟೋಕಿಯೋ: 60 ವರ್ಷಗಳಲ್ಲೇ ಬೀಸಿದ ಪ್ರಬಲ ಚಂಡಮಾರುತ ಜಪಾನನ್ನು ಅಕ್ಷರಶಃ ನರಕಸದೃಶವಾಗಿಸಿದ್ದು ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. 300 ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಕಾಣೆಯಾದವರಿಗೆ ಹುಡುಕಾಟ ತೀವ್ರಗೊಂಡಿದೆ.

Advertisement

ಕಳೆದ ವಾರ ಜಪಾನ್ ದ್ವೀಪ ಸಮೂಹದಲ್ಲಿ ಪ್ರಬಲ ಹಗಿಬೀಸ್ ಚಂಡಮಾರುತ  ಕಾಣಿಸಿಕೊಂಡಿದ್ದು ಭಾರೀ ಮಳೆಯಿಂದ ಆರು ಮಿಲಿಯನ್ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲಾಗಿತ್ತು. 52 ನದಿಗಳು ಪ್ರವಾಹಕ್ಕೆ ಸಿಲುಕಿದ್ದವು . ಪುಕುಶಿಮಾ ಪ್ರಾಂತ್ಯದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದ್ದು  ಜಪಾನ್ ಪ್ರಧಾನಿ ಶಿಂಜೊ ಅಬೆ 710 ಮಿಲಿಯನ್ ಯೆನ್ ಪರಿಹಾರ ಘೋಷಿಸಿದ್ದಾರೆ.

ಹಗಿಬೀಸ್‌ ಎಂದರೆ ಫಿಲಿಪಿನೋ ಭಾಷೆಯಲ್ಲಿ “ವೇಗ’ ಎಂದು ಅರ್ಥ. ಇದು ಉತ್ತರ-ವಾಯವ್ಯದತ್ತ ಮುನ್ನುಗ್ಗಿ, ಗಂಟೆಗೆ 162 ಕಿಲೋಮೀಟರ್‌ ವೇಗದಲ್ಲಿ ಅಪ್ಪಳಿಸಿದೆ.60 ವರ್ಷಗಳ ಹಿಂದೆ ಅಂದರೆ 1958ರಲ್ಲಿ ಟೋಕಿಯೋಗೆ ಅಪ್ಪಳಿಸಿದ್ದ ಚಂಡಮಾರುತವು 1,200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿತ್ತು. ಈ ದುರಂತದಲ್ಲಿ 5 ಲಕ್ಷದಷ್ಟು ಮನೆಗಳು ಜಲಾವೃತವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next