Advertisement

ಡೈನೊಸರ್‌ ಪಳೆಯುಳಿಕೆ ಪತ್ತೆ; 14.5 ಕೋಟಿ ವರ್ಷಗಳ ಹಿಂದೆ ಜೀವಂತವಾಗಿದ್ದ ದೈತ್ಯಜೀವಿಗಳು

09:41 AM Jun 13, 2022 | Team Udayavani |

ನವದೆಹಲಿ: ಜುರಾಸಿಕ್‌ ಪಾರ್ಕ್‌ನಂಥ ಸಿನಿಮಾ ಹಾಗೂ ಮುಂತಾದ ಬರಹಗಳನ್ನು ಓದಿ, ಡೈನೊಸರ್‌ಗಳ ಬಗ್ಗೆ ನಾವು ಕಲ್ಪಿಸಿಕೊಂಡಿರುವುದಕ್ಕಿಂತ ದೈತ್ಯವಾದ, ಅತಿ ಭಯಂಕರವಾದ ಡೈನೊಸಾರ್‌ಗಳು ಈ ಭೂಮಿಯಲ್ಲಿ ವಾಸವಾಗಿದ್ದವೆಂಬ ಕುತೂಹಲಕಾರಿ ವಿಚಾರವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

Advertisement

ಸುಮಾರು 14.5 ಕೋಟಿ ವರ್ಷಗಳ ಹಿಂದೆ, ದ್ವಿಪಾದಿಯಾಗಿ ಸಂಚರಿಸುತ್ತಿದ್ದ, ಕೈಗಳಲ್ಲಿ- ಕಾಲುಗಳಲ್ಲಿ ಅತಿ ಉದ್ದವಾಗಿರುವ, ಚಾಕುವಿನಷ್ಟು ಹರಿತವಾಗಿರುವಂಥ ಪಂಜಗಳನ್ನು ಇವು ಹೊಂದಿದ್ದವು ಎಂದು ಲೈವ್‌ ಸೈನ್ಸ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.

ಜಪಾನ್‌ನ ಉತ್ತರ ಭಾಗದಲ್ಲಿರುವ ದ್ವೀಪವೊಂದರಲ್ಲಿರುವ ಹಕ್ಕಾಯ್‌ಡೊ ಎಂಬಲ್ಲಿನ ಸಮುದ್ರದ ದಂಡೆಯಲ್ಲಿರುವ ಕೆಸರಿನ ಆಳದಲ್ಲಿ ಈ ಜಾತಿಯ ಡೈನೊಸಾರ್‌ಗಳ ಪಳೆಯುಳಿಕೆಗಳು ಪತ್ತೆಯಾಗಿದ್ದು, ಅವುಗಳನ್ನು ಅಮೆರಿಕ ಹಾಗೂ ಜಪಾನ್‌ನ ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆಗೊಳಪಡಿಸಿದ್ದರು. ಆ ಸಂಶೋಧನೆಗಳಿಂದ ಈ ದೈತ್ಯ ಜೀವಿಗಳ ಬಗೆಗಿನ ವಿಚಾರಗಳು ಪತ್ತೆಯಾಗಿವೆ.

ಇವು ಸಸ್ಯಾಹಾರಿ ಪ್ರಾಣಿಗಳು
ಈ ಮಾದರಿಯ ಡೈನೊಸಾರ್‌ಗಳಿಗೆ “ಪರಾಲಿಥೆರಿಸೈನೋಸಾರಸ್‌ ಝೆಪಾನಿಕಸ್‌’ ಎಂದು ಹೆಸರಿಡಲಾಗಿದೆ. ಈ ಮಾದರಿಯ ಡೈನೊಸರ್‌ಗಳು ಥೆರಿಸೈನೋಸರಸ್‌ ಜಾತಿಗೆ ಸೇರಿದವು. ಈ ಮಾದರಿಯ ಡೈನೊಸಾರ್‌ಗಳು ಎರಡು ಕಾಲುಗಳಲ್ಲಿ ನಡೆಯುಂಥವು (ದ್ವಿಪಾದಿಗಳು), ಸಸ್ಯಾಹಾರ ಸೇವಿಸುವಂಥವು ಹಾಗೂ ಕಾಲುಗಳಲ್ಲಿ ಕೇವಲ ಮೂರು ಬೆರಳುಗಳನ್ನು ಹೊಂದಿರುವಂಥವಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next