Advertisement
ಪ್ರಧಾನ ಮಂತ್ರಿ ಯೋಶಿಹೈಡ್ ಸುಗಾ ಅವರು ಈ ತಿಂಗಳ ಆರಂಭದಲ್ಲಿ ತಮ್ಮ ಸಂಪುಟಕ್ಕೆ ಲೋನ್ಲಿನೆಸ್ (ಒಂಟಿತನದ) ಮಿನಿಸ್ಟರ್ ಹುದ್ದೆಯನ್ನು ಸೇರಿಸಿಕೊಂಡಿದ್ದಾರೆ, ಯುಕೆ ಉದಾಹರಣೆಯನ್ನು ಅನುಸರಿಸಿ, ಇದನ್ನು ಸುಗಾ ಸೇರಿಸಿಕೊಂಡಿದ್ದಾರೆ. 2018 ರಲ್ಲಿ ಇದೇ ರೀತಿಯ ಪಾತ್ರವನ್ನು ರಚಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಕೆ ಪಾತ್ರವಾಗಿತ್ತು ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ.
Related Articles
Advertisement
“ಸಂಬಂಧಿತ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ಸಮಗ್ರ ಕಾರ್ಯತಂತ್ರವನ್ನು ಮುಂದಿಡಲು ಸುಗಾ ನನಗೆ ಸೂಚನೆ ನೀಡಿದ್ದರು. ಸಾಮಾಜಿಕ ಒಂಟಿತನ ಮತ್ತು ಪ್ರತ್ಯೇಕತೆಯನ್ನು ತಡೆಗಟ್ಟಲು ಮತ್ತು ಜನರ ನಡುವಿನ ಸಂಬಂಧವನ್ನು ರಕ್ಷಿಸಲು ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ನಾನು ಭಾವಿಸುತ್ತೇನೆ” ಎಂದು ಸಕಮೊಟೊ ಹೇಳಿದ್ದಾರೆ.
ಓದಿ : ಪುದುಚೆರಿ ಚುನಾವಣೆಯು ಬಿಜೆಪಿಯ ಅಂತ್ಯಕ್ಕೆ ನಾಂದಿ ಹಾಡುತ್ತದೆ : ಮೊಯ್ಲಿ
ಸಾಂಕ್ರಾಮಿಕ ಸಮಯದಲ್ಲಿ ಏರಿಕೆಯಾಗಿರುವ ಆತ್ಮಹತ್ಯೆ ಮತ್ತು ಮಕ್ಕಳ ಬಡತನದಂತಹ ವಿಷಯಗಳಿಗಾಗಿ ಜಪಾನ್ ಸರ್ಕಾರವು ಫೆಬ್ರವರಿ 19 ರಂದು ಸಂಪುಟಕ್ಕೆ “ಪ್ರತ್ಯೇಕತೆ/ಒಂಟಿತನ ಪ್ರತಿರೋಧಕ ಕಚೇರಿ”ಯನ್ನು ರಚಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಜಪಾನ್ ನಲ್ಲಿ 426,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಮತ್ತು 7,577 ಸಾವುಗಳು ದಾಖಲಾಗಿವೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳು ತಿಳಸಿದೆ.
ಓದಿ : ‘ಆತ ಕಾಲ್ ಮಾಡಿ ಮಾತಾಡಬೇಕಿತ್ತು’…ದರ್ಶನ್ ಮೌನಕ್ಕೆ ಜಗ್ಗೇಶ್ ಅಸಮಾಧಾನ