Advertisement

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

03:37 PM Oct 19, 2024 | Team Udayavani |

ಟೋಕಿಯೊ : ಅಕ್ಟೋಬರ್ 27 ರಂದು ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ನಡೆದ ಮಹತ್ವದ ಬೆಳವಣಿಗೆಯಲ್ಲಿ, ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP) ಪ್ರಧಾನ ಕಚೇರಿಗೆ ಹಲವಾರು ಫೈರ್‌ಬಾಂಬ್‌ಗಳನ್ನು ಎಸೆದ ಆರೋಪದ ಮೇಲೆ ಟೋಕಿಯೊ ಪೊಲೀಸರು ಶನಿವಾರ (ಅಕ್ಟೋಬರ್ 19) 49 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. .

Advertisement

ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಘಟನೆ ಬೆಳಗ್ಗೆ 6 ಗಂಟೆಗೆ ಸಂಭವಿಸಿದ್ದು, ಶಂಕಿತ ವ್ಯಕ್ತಿಯು ಎಲ್‌ಡಿಪಿ ಪ್ರಧಾನ ಕಚೇರಿಯ ಮುಂದೆ ವ್ಯಾನ್ ಓಡಿಸಿ ಐದು ಅಥವಾ ಆರು ಫೈರ್‌ಬಾಂಬ್‌ಗಳನ್ನು ಎಸೆದಿದ್ದಾನೆ. ತತ್ ಕ್ಷಣ ಬೆಂಕಿ ನಂದಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿ ವಾಹನವನ್ನು ಪ್ರಧಾನ ಮಂತ್ರಿ ಕಚೇರಿಯ ಆವರಣಕ್ಕೆ (ಘಟನಾ ಸ್ಥಳದಿಂದ ಸುಮಾರು 15 ನಿಮಿಷಗಳ ದೂರದಲ್ಲಿ) ನುಗ್ಗಿಸಲು ಪ್ರಯತ್ನಿಸಿದ್ದಾನೆ. ಆದರೆ ತಡೆ ಬೇಲಿಯಿಂದಾಗಿ ಆತನಿಗೆ ನುಗ್ಗಿಸಲು ಸಾಧ್ಯವಾಗಲಿಲ್ಲ.

ಹೊಗೆ ಬಾಂಬ್ ಅನ್ನು ನೆಲದ ಮೇಲೆ ಎಸೆಯಲು ಪ್ರಯತ್ನಿಸಿದ ಆದರೆ ಅಧಿಕಾರಿಗಳು ಆತನನ್ನು ಕೂಡಲೇ ವಶಕ್ಕೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ವಿವರಗಳ ಪ್ರಕಾರ, ಶಂಕಿತನನ್ನು ಬಂಧಿಸುತ್ತಿದ್ದಂತೆ, ಪೊಲೀಸರು ಸುಮಾರು 10 ಪಾಲಿ ಟ್ಯಾಂಕ್‌ಗಳನ್ನು ಮತ್ತು ಅವನು ಚಲಾಯಿಸುತ್ತಿದ್ದ ವ್ಯಾನ್‌ನಿಂದ ಬಳಕೆಯಾಗದ ಫೈರ್‌ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next