Advertisement

ಆಕ್ರಮಣಕಾರಿ ಚೀನಾ ಬಗ್ಗೆ ಜಪಾನ್‌ ಆತಂಕ

09:09 PM Jul 28, 2023 | Team Udayavani |

ಟೋಕ್ಯೋ: ಜಗತ್ತಿನ ಪ್ರಬಲ ದೇಶವಾಗುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ ಇತ್ತೀಚೆಗೆ ರಷ್ಯಾ ಜೊತೆಗೆ ಆತ್ಮೀಯತೆಯನ್ನು ಹೆಚ್ಚಿಸಿಕೊಂಡಿದೆ. ಹಾಗೆಯೇ ತೈವಾನ್‌ ವಿರುದ್ಧ ವಿಪರೀತ ಆಕ್ರಮಣಕಾರಿಯಾಗುತ್ತಿದೆ. ಇದು ಜಪಾನ್‌ಗೆ ಆತಂಕ ಮೂಡಿಸಿದೆ.

Advertisement

ಜಾಗತಿಕ ಭದ್ರತಾ ಸವಾಲುಗಳ ನಡುವೆಯೇ, ತನ್ನ ಮಿಲಿಟರಿ ರಚನೆಯನ್ನು ಪ್ರಬಲಗೊಳಿಸಲು ಮುಂದಾಗಿರುವ ಜಪಾನ್‌, 2023ರ ರಕ್ಷಣಾ ಶ್ವೇತಪತ್ರವನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಭವಿಷ್ಯದಲ್ಲಿ ಚೀನಾದಿಂದ ಎದುರಾಗಬಹುದಾದ ಭದ್ರತಾ ಸವಾಲುಗಳನ್ನೂ ಪ್ರಸ್ತಾಪಿಸಲಾಗಿದೆ. 2ನೇ ಮಹಾಯುದ್ಧದ ಬಳಿಕ ಈಗ ಮತ್ತೆ ಅತ್ಯಂತ ಕ್ಲಿಷ್ಟ ಭದ್ರತಾ ಸವಾಲುಗಳನ್ನು ಜಪಾನ್‌ ಎದುರಿಸುತ್ತಿದೆ ಎಂಬುದಾಗಿಯೂ ಉಲ್ಲೇಖೀಸಿದೆ. ಚೀನಾದ ನಿಲುವು ಮತ್ತು ಮಿಲಿಟರಿ ಚಟುವಟಿಕೆಗಳು ಜಪಾನ್‌ಗೆ ಮಾತ್ರವಲ್ಲದೇ, ಜಾಗತಿಕ ಭದ್ರತೆ ವಿಚಾರದಲ್ಲೂ ತೀರಾ ಆತಂಕಕಾರಿ ಸಂಗತಿಯಾಗಿದೆ ಎಂದು 510 ಪುಟಗಳ ರಕ್ಷಣಾ ಶ್ವೇತಪತ್ರದಲ್ಲಿ ತಿಳಿಸಿದೆ.

ರಷ್ಯಾ ಮತ್ತು ಚೀನಾ ಸಹ ಕಾರ್ಯತಂತ್ರವನ್ನು ವಿಸ್ತರಿಸಿದ್ದು, 2019ರಿಂದ ಈಚೆಗೆ ಬಾಂಬರ್‌ ಯುದ್ಧವಿಮಾನಗಳ ಖರೀದಿ, ತಾಲಿಮು ನಡೆಸುತ್ತಿವೆ. 2030ರ ವೇಳೆಗೆ ಚೀನಾ ಕನಿಷ್ಠ 1,500 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಲಿದೆ. ಇದು ನೆರೆ ರಾಷ್ಟ್ರಗಳ ಭದ್ರತೆಗೂ ತೊಂದರೆ ಎಂದು ಆತಂಕ ವ್ಯಕ್ತಪಡಿಸಿದೆ. ಏತನ್ಮಧ್ಯೆ, ಚೀನಾದ ಏಕಸ್ವಾಮ್ಯ ಮನಸ್ಥಿತಿ ಬಗ್ಗೆ ಅಮೆರಿಕ ಕೂಡ ಆಕ್ಷೇಪಿಸಿ ಚೀನಾದ ವಿರುದ್ಧ ಧ್ವನಿ ಎತ್ತುವ ರಾಷ್ಟ್ರಗಳಿಗೆ ಬೆಂಬಲ ನೀಡಲಿದ್ದೇವೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next