Advertisement

Japan Elections: ಆಡಳಿತ ಪಕ್ಷಕ್ಕೆ 15 ವರ್ಷ ಬಳಿಕ ಸೋಲು

11:33 PM Oct 29, 2024 | Team Udayavani |

ಟೋಕಿಯೋ: ಜಪಾನ್‌ ಸಂಸತ್‌ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶ ಪ್ರಕಟವಾಗಿದೆ. 2009ರಿಂದ ಸತತವಾಗಿ ಗೆದ್ದು ಬರುತ್ತಿದ್ದ ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿ ಸೋಲು ಅನುಭವಿಸಿದೆ.

Advertisement

ಮಿತ್ರ ಪಕ್ಷ ಕೊಮೆಟೊ ಒಳಗೊಂಡ ಎಲ್‌ಡಿಪಿ ಮೈತ್ರಿಕೂಟವು ಕೇವಲ 215 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಅಗತ್ಯವಿದ್ದ 233 ಕ್ಷೇತ್ರಗಳನ್ನು ಗೆಲ್ಲುವಲ್ಲಿ ವಿಫ‌ಲವಾಗಿದೆ. ಚುನಾವಣೆಯಲ್ಲಿ ಹಿನ್ನಡೆಯ ಹೊರತಾಗಿಯೂ ಅಧಿಕಾರದಲ್ಲಿ ಉಳಿಯುವುದಾಗಿ ಪ್ರಧಾನಿ ಶಿಗೆರು ಇಶಿಬಾ ಭರವಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next