Advertisement

Japan Earthquake ಮೃತರ ಸಂಖ್ಯೆ 100ಕ್ಕೇರಿಕೆ, 200ಕ್ಕೂ ಹೆಚ್ಚು ಮಂದಿ ನಾಪತ್ತೆ

07:00 PM Jan 06, 2024 | Team Udayavani |

ವಾಜಿಮಾ, ಜಪಾನ್: ಹೊಸ ವರ್ಷದ ಮೊದಲ ದಿನ (ಸೋಮವಾರ) ಜಪಾನ್‌ನ ಪಶ್ಚಿಮ ಭಾಗದ ಕರಾವಳಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 100 ಕ್ಕೆ ಏರಿಕೆಯಾಗಿದ್ದು,200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭೂಕಂಪದ ತೀವ್ರತೆ ರಿಕ್ಟರ್‌ ಮಾಪನದಲ್ಲಿ 7.6ರಷ್ಟು ದಾಖಲಾಗಿದೆ. ಅವಘಡದಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ. ಇದು ಸುಮಾರು ಎಂಟು ವರ್ಷಗಳಲ್ಲಿ ದೇಶದ ಅತ್ಯಂತ ಭೀಕರ ಭೂಕಂಪವಾಗಿದೆ.

ಭೂಕಂಪದ ತೀವ್ರತೆಗೆ ಹಲವಾರು ಮನೆಗಳು, ಕಟ್ಟಡಗಳು, ಮರಗಳು ಧರಾಶಾಯಿಯಾಗಿದ್ದವು. 23,000ಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿದೆ.

ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರ ಹುಡುಕಾಟವು ಆರನೇ ದಿನವೂ ಮುಂದುವರಿದ್ದು , ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next