Advertisement

ಜಂತಕಲ್ ಮೈನಿಂಗ್ ಕೇಸ್; HDKಗೆ ಬಂಧನ ಭೀತಿ, ಜಾಮೀನು ಅರ್ಜಿ ವಜಾ

01:18 PM Jun 13, 2017 | Team Udayavani |

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ವಿಶೇಷ ಎಸ್ ಐಟಿ ಕೋರ್ಟ್ ಮಂಗಳವಾರ ತಿರಸ್ಕರಿಸಿದ್ದು, ಕುಮಾರಸ್ವಾಮಿ ಬಂಧನ ಭೀತಿ ಎದುರಿಸುವಂತಾಗಿದೆ.

Advertisement

ಅಕ್ರಮ ಗಣಿಕಾರಿಕೆ ಪ್ರಕರಣ ಸಂಬಂಧ ಎಚ್ ಡಿ ಕುಮಾರ ಸ್ವಾಮಿ ಅವರು ಜಂತಕಲ್‌ ಮೈನಿಂಗ್‌ ಕಂಪನಿಯಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಲೋಕಾಯುಕ್ತ ಕೋರ್ಟ್ ಕೂಡಾ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

      (ಇದನ್ನೂ ಓದಿ:ಮುಂಬಯಿ :ಫ್ಲ್ಯಾಟ್‌ನಲ್ಲಿ ನಟಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ)

ಸಿಡಿಯೊಂದಿಗೆ ಎಸ್ಐಟಿ ಮುಂದೆ ಹಾಜರಾದ ಜನಾರ್ದನ ರೆಡ್ಡಿ:

Advertisement

ಜಂತಕಲ್ ಮೈನಿಂಗ್ ಗುತ್ತಿಗೆ ನೀಡಿದ ಪ್ರಕರಣದಲ್ಲಿ ಮಾಜಿ ಸಿಎಂ 150 ಕೋಟಿ ರೂಪಾಯಿ ಕಪ್ಪ ಸ್ವೀಕರಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇಂದು ಸಿಡಿ ಹಾಗೂ ದಾಖಲೆಯೊಂದಿಗೆ ಎಸ್ಐಟಿ ಮುಂದೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೆಡ್ಡಿ, 150 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆಂಬ ಆರೋಪದ ಬಗ್ಗೆ ಸಾಕ್ಷ್ಯಾಧಾರ ಇದ್ದು ಅದನ್ನು ಕೋರ್ಟ್ ಗೆ ಸಲ್ಲಿಸುವುದಾಗಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next