Advertisement

ಜಂತರ್‌ ಮಂತರ್‌ ಡಬ್ಬಿಂಗ್‌ ಮುಕ್ತಾಯ

10:24 AM Sep 18, 2017 | |

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ (ಜಿಜಿ) ಚೊಚ್ಚಲ ನಿರ್ದೇಶನದ “ಜಂತರ್‌ ಮಂತರ್‌’ ಚಿತ್ರಕ್ಕೆ ಡಬ್ಬಿಂಗ್‌ ಕೆಲಸ ಪೂರ್ಣಗೊಂಡಿದೆ. ಹುಲಿಯಮ್ಮ ಮೂವಿ ಮೇಕರ್ ಬ್ಯಾನರ್‌ನಲ್ಲಿ ಶಿವಸುಂದರ್‌, ಬಿ.ನಾಗರಾಜ್‌, ಡಿ.ಸಾಲುಂಡಿ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟರೇ ನಟಿಸಿರುವುದು ಇನ್ನೊಂದು ವಿಶೇಷ.

Advertisement

ಇದೊಂದು ಹಾಸ್ಯಮಯ ಚಿತ್ರವಾಗಿದ್ದು, ಆರಂಭದಿಂದ ಅಂತ್ಯದವರೆಗೆ ನಗಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುವುದು ಇದರ ಉದ್ದೇಶ. ಇತ್ತೀಚೆಗೆ “ಜಂತರ್‌ ಮಂತರ್‌’ ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸ್ಟುಡಿಯೋದಲ್ಲಿ  ಡಬ್ಬಿಂಗ್‌ ಕಾರ್ಯ ಪೂರ್ಣಗೊಂಡಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕ ಗೋವಿಂದೇಗೌಡ ಅವರೇ ನಿರ್ದೇಶನ ಮಾಡಿದ್ದಾರೆ. ಸುರೇಶ್‌ ಬಾಬು ಕ್ಯಾಮೆರಾ ಹಿಡಿದಿದ್ದಾರೆ.

ರಾಕಿಸೋನು ಅವರು ಸಂಗೀತ ನೀಡಿದ್ದಾರೆ. ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ  ಶಿವರಾಜ್‌ ಕೆ.ಆರ್‌.ಪೇಟೆ, ನಯನಾ, ಸಂಭ್ರಮ, ಗೋವಿಂದೇಗೌಡ, ಹಿತೇಶ್‌, ಜೊತೆಗೆ ದಿವ್ಯಶ್ರೀ, ಸಂಜು ಬಸಯ್ಯ, ಶೋಭರಾಜ್‌, ಬಿರಾದರ್‌, ವಿ.ಮನೋಹರ್‌ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next