Advertisement

ನಿಮ್ಮ ಪ್ರಾರಬ್ಧಗಳ ನಿವಾರಣೆ ಮತ್ತು ನಷ್ಟದ ಮನೆ ಯಾವುದು ಗೊತ್ತಾ?

03:55 AM Mar 25, 2017 | |

ಜನ್ಮ ಕುಂಡಲಿಯಲ್ಲಿನ ಕೊನೆಯ ಮನೆಯೇ ನಷ್ಟದ ಮನೆ. ಒಬ್ಬ ವ್ಯಕ್ತಿಯ ಲಗ್ನಭಾವದ ಹಿಂದಿನ ಮನೆಯೇ ನಷ್ಟದ ಮನೆ ಎಂದು ಕರೆಯುತ್ತಾರೆ. ಈ ಮನೆಯ ವಿಚಾರಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ವಿಚಾರದಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದು ಸಾಮಾನ್ಯವಾಗಿ ನಮ್ಮ ಮಾತುಗಳಲ್ಲಿ ಗಾದೆ  ಮಾತಿನ ರೂಪದಲ್ಲಿಯೂ ಚಾಲ್ತಿಯಲ್ಲಿದೆ. ನಷ್ಟದ ಮನೆಯ ವಿಚಾರದಲ್ಲೂ ಹೀಗೆ. ಇದು ಸಾಮಾನ್ಯವಾಗಿ ಒಳಿತುಗಳಿಗಾಗಿನ ದಾರಿಯನ್ನು ರೂಪಿಸಿಕೊಡುವ ಮನೆಯಲ್ಲಿ  ನಷ್ಟಗಳನ್ನೇ ಕಟ್ಟಿಕೊಡಬೇಕು. ಆದರೆ ಇದರ ಸಮಸಪ್ತಕ ಭಾವದಲ್ಲಿ ( ಸರಿಯಾಗಿ ಎದುರಿಗೆ) ಋಣ, ಅರಿಷ್ಠ, ನೋವು, ಬಾಧೆ, ವ್ಯಾಜ್ಯ ಅಪಘಾತ, ಕೊಲೆ, ಸುಲಿಗೆ ಹೇಯ ಕೃತ್ಯಗಳು ಸೆರೆಮನೆಯನ್ನು ಸೇರುವ ಪೊಲೀಸರಿಂದ ನಿಯಂತ್ರಣಕ್ಕೊಳಪಡುವ ದುರವಸ್ಥೆಗಳು ಕೂಡಿ ಬರುವ ಛಿದ್ರಸ್ಥಾನರುತ್ತದೆ. ಇದಕ್ಕೆ ವೈರಿಭಾವ ಎಂಬುದಾಗಿಯೂ ಕರೆಯುತ್ತಾರೆ. ಉತ್ತಮರಾದ ಎರಡು ಶುಭ ಗ್ರಹಗಳು ಈ ಮನೆಗಳಲ್ಲಿ ಎದುರುಬದುರಾಗಿ ಕುಳಿತು ಪರಸ್ಪರರನ್ನು ದೃಷ್ಟಿಸುವ ಮೂಲಕ ಈ ಎರಡೂ ಮನೆಗಳ ನಕಾರಾತ್ಮಕ ಶಕ್ತಿ ನೀಗಬಹುದು. ಆದರೆ ಲಗ್ನಾಧಿಪತಿಯ ತೇಜಸ್ಸು ಶಕ್ತಿ ಅದ್ಭುತವಾಗಿರಬೇಕು. ಜೀವನದ ಸಂಬಂಧಧ ಅರಿಷx$Ìರ್ಗಗಳನ್ನು ನಿಯಂತ್ರಿಸುವ ಶಕ್ತಿ ಇರಬೇಕು. ರಾಜಯೋಗಗಳು ವೇಶ್ಯೆಗೂ ಇರುತ್ತದೆ. ಆದರೆ ತನ್ನ ವೃತ್ತಿಯನ್ನು ತಾನು ಯಾಕೆ ಪರಿಗ್ರಹಿಸಿದ್ದೇನೆ ಎಂಬ ತರ್ಕ ಎಚ್ಚರಿಕೆ ಎರಡೂ ಇರಬೇಕು. ರಾಜಯೋಗ ರಾಜನಿಗೂ ಇರುತ್ತದೆ. ಆದರೆ ಜನ ತನ್ನನ್ನು ರಾಜಾ ಪ್ರತ್ಯಕ್ಷ ದೇವತಾ ಎಂದು ಯಾಕೆ ತಿಳಿದಿದ್ದಾರೆ ಎಂಬ ಬೌದ್ಧಿಕ ಬಲ ಸಮತೋಲನ ಹೊಂದಿರಬೇಕು. ಎಷ್ಟು  ಭೂಪಾಲಕರು ಇದನ್ನು ತಾರ್ಕಿಕವಾಗಿ ಯೋಚಿಸುತ್ತಾರೆ? ತನ್ನ ಕರ್ತವ್ಯಗಳನ್ನು ಮರೆತಿದ್ದ  ವ್ಯಕ್ತಿಯ ಬಗ್ಗೆ ತಿಳುವಳಿಕೆಯನ್ನು ನಷ್ಟಭಾವ ಒದಗಿಸುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಜೀವನದ ಮುಖ್ಯ ಧ್ಯೇಯೋದ್ದೇಶಗಳಿಗೆ ಜಾತಕದ ನಷ್ಟಭಾವದಲ್ಲಿ ಸರಿಯಾದ ಹಳಿಗಳ ಮೇಲೆಯೇ ಜೀವನ ಬಿಡಿಸಲು ಬೇಕಾದ ಮುಖ್ಯ ನಿಯಂತ್ರಣ ಘಟಕ ಕಾರ್ಯೋನ್ಮುಖವಾಗುತ್ತದೆ. 

Advertisement

ವ್ಯಕ್ತಿತ್ವದ ಶ್ರೇಷ್ಠತೆಗೆ ನಷ್ಟಸ್ಥಾನದ ಪಾತ್ರವೇನು?
ನಷ್ಟಸ್ಥಾನ ನಮ್ಮನ್ನು ಜೀವನದಲ್ಲಿ ಅತಿಯಾಸೆಯ ದುರಾಸೆಯ ಕೂಪಕ್ಕೆ ತಳ್ಳಬಹುದು. ಪರಮಾತ್ಮನ ದಿವ್ಯತಮ ಆಳ ಅಗಲಗಳೇನು ಎಂದು ತಿಳಿಯುವ ಚಿಂತನೆಗೆ ನಯ ಸೌಹಾರ್ದಗಳಿಗೆ ಕಾಲಿಡಲು ಸಂವೇದನೆ ಕೊಡಬಹುದು. ಒಳ್ಳೆಯ ಜಾnನವನ್ನು ಚಿಮ್ಮಿಸಬಹುದು. ದುಷ್ಟತನವನ್ನೇ ಅಂಗುಲ ಅಂಗುಲದಲ್ಲೂ ಬೇರೂರಿಸಬಹುದು. ಆದಿ ಶಂಕರಾಚಾರ್ಯರನ್ನು ಸನ್ಯಾಸಕ್ಕೆ ಸಂಸ್ಥಾಪಿಸಿದ ಚಂದ್ರ ಶನೈಶ್ಚರರು ಈ ಗ್ರಹಗಳ ಹೊಂದಾಣಿಕೆ ತುಸು ವ್ಯತ್ಯಾಸವಾಗಿದ್ದರೂ ಗಂಡಾಂತರಗಳಿಗೆ ಅವರನ್ನು ದೂಡುವ ಸಾಧ್ಯತೆ ಹೆಚ್ಚಾಗುತ್ತಿತ್ತು.  ಜೀಸಸ್‌ ಕ್ರಿಸ್ತನ ಪಾಲಿಗೂ ರವಿಯನ್ನು ಶನೈಶ್ಚರ ನಿರ್ಬಂಧಿಸಿ ಧರ್ಮ ಪ್ರವರ್ತಕನನ್ನಾಗಿಸಿದ. ಸುಖ ಮತ್ತು ಭಾಗ್ಯಗಳನ್ನು ಧರ್ಮದ ದಾರಿಯನ್ನು ಬಿಟ್ಟು ಬಯಸಲು ಮುಂದಾಗದೆ ಸಂತನಾದ ಜಾnನಿಯಾದ ಬಲಿದಾನಕ್ಕೆ ತುತ್ತಾದ. ಚಂದ್ರ ಮತ್ತು ಗುರುವನ್ನು ಶನೈಶ್ಚರ ಕಲಕಿರದೆ ಹೋದರೆ ಯುಗ ಪ್ರವರ್ತಕನಾಗುತ್ತಿರಲಿಲ್ಲ. ಕ್ರಿಸ್ತ ಮಹಾವೀರ ಗೌತಮ ಬುದ್ಧರ ಜೀವನದಲ್ಲೂ ಶನೈಶ್ಚರನ ಪಾತ್ರ ಹಿರಿದಾಗಿಯೇ ಇದೆ. ಒಟ್ಟಿನಲ್ಲಿ ಶರಣನೋ ಸಂತನೋ ಮಹರ್ಷಿಯೋ ಎಲ್ಲಾ ವ್ಯಾಮೋಹಗಳನ್ನೂ ತೊರೆಯುವ ಯೋಗಿಯಾಗಲು ನಷ್ಟದ ಸ್ಥಾನ ಪ್ರಭಾವ ಬೀರುತ್ತದೆ. ಈ ಪ್ರಭಾವದ ಹಂತದಲ್ಲಿ ಶನೈಶ್ಚರನೋ ಕೇತುವೋ, ರಾಹುವೋ, ಕುಜನೋ ಸೂರ್ಯನೋ ಇತ್ಯಾದಿ ಅಶುಭ ಗ್ರಹಗಳ ಪಾತ್ರ ಇದ್ದೇ ಇರುತ್ತದೆ. ವ್ಯಾಮೋಹ ಎನ್ನುವ ಮುಳ್ಳನ್ನು ಅಶುಭ ಗ್ರಹಗಳು ಎನ್ನುವ ಈ ಸೂಜಿಗಳೇ ನಿವಾರಣೆ ಮಾಡಲು ಸಫ‌ಲವಾಗುತ್ತದೆ. ಹಿಟ್ಲರ್‌ ಬುದ್ಧಿವಂತನಾದರೂ ನಷ್ಟಸ್ಥಾನದ ಅಧಿಪತಿಯ ಸಂಯೋಜನೆ ಸಪ್ತಮದಲ್ಲಿ ಅಗಾಧವಾಗಿದ್ದರೂ ಕುಜನ ಸಂಯೋಜನೆ ಬಲ್ಲ ಶುಕ್ರನು ಮಂಗಳ ಹಾಗೂ ಸೂರ್ಯರೊಂದಿಗೆ ಇರುವ ಕಾರಣ ಮಹಾಯುದ್ಧವೊಂದನ್ನು ಹುಟ್ಟು ಹಾಕಿಯೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ರೂಪಿಸಿಕೊಂಡರೂ ಆದರ್ಶದ ಚೌಕಟ್ಟಿರದ ಪ್ರಾರಬ್ಧಕ್ಕೆ ಕಟ್ಟು ಬೀಳುವ ವರ್ತಮಾನವನ್ನು ಸೃಷ್ಟಿಸಿತು. ಮನಸ್ಸು ಕೃತಿಯನ್ನೇ ಸೃಷ್ಟಿಸಬೇಕಾದ ಅನಿವಾರ್ಯ  ಸ್ಥಿತಿಗತಿ ಒದಗಿತು. ಝುಲ್ಫಿಕರ್‌ ಆಲಿ ಭುಟ್ಟೋ ಬುದ್ಧಿವಂತರಾದರೂ ಅಧಿಕಾರದ ಆಸೆಗೆ ಯಾವ ಪ್ರಮಾದಗಳನ್ನೆಲ್ಲಾ ಸೃಷ್ಟಿಸಿದರೋ ಅದೇ ಪ್ರಮಾದಗಳು ರಚಿಸಿದ ಕಂದಕದಲ್ಲಿ ಅಂದಿನ ಅಧ್ಯಕ್ಷರಾದ ಜಿಯಾ ಉಲ್‌ ಹಕ್‌ ಹುರಿಗೊಳಿಸಿದ ನೇಣಿಗೆ ಕೊರಳು ಕೊಟ್ಟರು. ರಾಹು ಚಂದ್ರರು ನಷ್ಟದಲ್ಲಿ ಒಬ್ಬರಿಗೊಬ್ಬರು ಸಂಘರ್ಷದಲ್ಲಿರುವ ಕುಜ ಶನಿ ಕೇತು ಶುಕ್ರರ ಪ್ರಭಾವದಿಂದಾಗಿ ದುರಂತ ತಪ್ಪಿಸಿಕೊಳ್ಳಲು ಆಗಲಿಲ್ಲ.

ದುರಂತಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ?
ವ್ಯಕ್ತಿತ್ವವನ್ನು ತಿದ್ದಿ ಕೊಳ್ಳುವುದೊಂದೇ ಮಾರ್ಗ. ಜಾnನಿಗೆ ತನಗಿರದ ಜಾnನವನ್ನು ಅನ್ಯರ ಮೂಲಕ ನದೊಂದಿಗೆ ತಿಳಿಯಲೆತ್ನಿಸುವ ಸದ್ಗುಣವಿದ್ದರೆ ತನ್ನ ಜಾnನದ ಬಗೆಗಿನ ಅಹಂಕಾರ ಬಾಧಿಸುವುದಿಲ್ಲ. ಯಾರನ್ನಾದರೂ ಏಕೆ ಕೇಳಬೇಕು ಎನ್ನುವ ಮಿತಿ ಅಪಾಯವನ್ನು ಗಂಟು ಹಾಕಬಹುದು. ನಮ್ಮ ದೇಶದ ದೊಡ್ಡ ರಾಜಕಾರಣಿ ಬುದ್ಧಿವಂತರು ಕೆಲವು ದೋಷಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಶಕ್ತಿಶಾಲಿಗಳಾಗಿದ್ದೂ, ನಿಸ್ವಾರ್ಥಿಗಳಾಗಿದ್ದೂ ನಷ್ಟ ಸ್ಥಾನದಲ್ಲಿನ ರಾಹುದೋಷ ಅನೇಕ ಕಷ್ಟಗಳನ್ನು ಹುಟ್ಟು ಹಾಕಿತು. ಇಷ್ಟೇ ಸಾಕು ದೀರ್ಘ‌ವಾಗಿ ಬರೆಯುವುದು  ಒಬ್ಬರ ಜೀವನದ ತೀರಾ ಒಳಹೊಕ್ಕು ವಿಶ್ಲೇಷಣೆ ಸಧ್ಯಕ್ಕೆ ಅಪ್ರಸ್ತುತ. ಆದರೆ ಹಲವು ರೀತಿಯ ದೋಷಗಳು ತಲೆಮಾರು ತಲೆಮಾರುಗಳಿಂದ ಅಂಟಿಕೊಳ್ಳುತ್ತಲೇ ಹೋಗುತ್ತಿದೆ. ವಿಷಯ ಲಾಲಸೆ ಕೆಲವು ದೌರ್ಬಲ್ಯಗಳನ್ನು ನಿಯಂತ್ರಿಸಬಹುದಿತ್ತು. ಇನ್ನೊಬ್ಬ ಪ್ರಮುಖ ರಾಜಕಾರಣಿ ಇವರಿಗೆ ಸ್ವಕೀಯರನ್ನು ಮೇಲೆತ್ತುವುದೇ ಒಂದು ಹೆಣಗಾಟ.  ಇದರಿಂದಾಗಿ ವ್ಯಕ್ತಿತ್ವದಲ್ಲಿನ ಬಿರುಕು ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಷ್ಟಸ್ಥಾನದ ಅಧಿಪತಿಯ ಕೋಲಾಹಲಕರ ಸ್ಥಿತಿ ಗತಿ ಕುಟುಂಬದಲ್ಲೇ ಬಿರುಕು ಮೂಡಿರುವ ಸ್ಥಿತಿಗೆ ತಲುಪಿದೆ. ಎಂಥದೇ ಚಾಣಾಕ್ಷತೆಯೂ ನೆರವಿಗೆ ಬರುತ್ತಿಲ್ಲ. ಸ್ವಜನ ಪಕ್ಷಪಾತ ಮೋಹ ತಪ್ಪಿಕೊಂಡಿದ್ದರೆ ಅದ್ಭುತವನ್ನೇ ಸೃಷ್ಟಿಸಬಹುದಿತ್ತು.

ಕುಸಿದು ಬಿದ್ದ ಮೇರು ಪ್ರತಿಭಾವಂತನ ಆಸ್ತಿಪಾಸ್ತಿ
ಈ ಪ್ರತಿಭಾವಂತ ಭಾರತ ಕಂಡ ಪ್ರಮುಖ ಶಕ್ತಿ. ಯಾವ ಕ್ಷೇತ್ರದಲ್ಲಿ ಎಂಬುದು ಬೇಡ. ಆದರೆ ಹತ್ತಿರ ಬಂದ ಹುಡುಗಿಯರೆಲ್ಲಾ ತನ್ನನ್ನು ಪ್ರೇಮಿಸಬೇಕು ಎಂದು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದ. ವ್ಯಕ್ತಿತ್ವವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಂಗಸುಖ ಬೇಕೇ ಬೇಕು. ತನ್ನ ಕುಟುಂಬದ ಹುಡುಗಿಯರು ಆದರ್ಶ ಭಾರತೀಯ ನಾರಿಯರಾಗಿರಬೇಕು ಎಂಬ ಆಕಾಂಕ್ಷೆ. ಗಂಟು ಬೀಳುವ ಅಂಗಸುಖದ ಪರಿಣಾಮವಾಗಿ ದೇಹ ಸಂಬಂಧ ವ್ಯತಿರಿಕ್ತ ಪರಿಣಾಮಗಳನ್ನು ಕೊಡುತ್ತದೆ. ಈತನಿಗೆ ಗಂಟು ಬಿದ್ದ ಮಹಿಳೆಯರ್ಯಾರೂ ವೈಯುಕ್ತಿಕ ಜೀವನದಲ್ಲಿ ಸುಖ ಕಂಡವರಲ್ಲ. ಈತನೂ ತನ್ನ ಸಾಲಕ್ಕಾಗಿ ಸಮಾಜ ವಿರೋಧಿಗಳನ್ನು ಶರಣು ಹೋಗಿದ್ದುಂಟು. ಸಮಾಜದ ಒಳಿತುಗಳ ನೆಪದಲ್ಲಿ ಕನಸುಗಳನ್ನು ಮಾರಾಟಕ್ಕಿಟ್ಟಿದ್ದು ಈ  ಪ್ರತಿಭಾವಂತನ ದೊಡ್ಡ ಶಕ್ತಿ. ನಷ್ಟದ ಅಧಿಪತಿಯೂ ಛಿದ್ರಸ್ಥಾನದ ಅಧಿಪತಿಯೂ ದುಷ್ಟಸ್ಥಾನದಲ್ಲಿ ಒಗ್ಗೂಡಿದ್ದರಿಂದ ಶನೈಶ್ಚರನು ವ್ಯಕ್ತಿತ್ವಕ್ಕೆ ಬಿರುಕು ತಂದಿದ್ದರಿಂದ ಬಹುದೊಡ್ಡ ಖ್ಯಾತ ಹಿನ್ನೆಲೆಯ ಕುಟುಂಬ ಸಾಲದ ಹೊರೆ ವ್ಯಾಧಿಗಳ ಹೊರೆಯಲ್ಲಿ ಹೊರಳಾಡಿದ್ದು ಈಗ ಕತೆ. 

ಒಟ್ಟಿನಲ್ಲಿ ಪ್ರಾರಬ್ಧಗಳನ್ನು ಇಚ್ಛಾಶಕ್ತಿಯಿಂದಲೇ ದೂರ ಮಾಡಿಕೊಳ್ಳಬೇಕು. ಹೆಣ್ಣು ಹೊನ್ನು ಮಣ್ಣು ಒಂದೊಂದು ರೀತಿಯಲ್ಲಿ ಧರ್ಮಾರ್ಥಕಾಮ ಮೋಕ್ಷಗಳನ್ನು ತಿಪ್ಪೆಯ ಗುಂಡಿಯನ್ನಾಗಿಸುತ್ತದೆ. ಅನ್ಯರನ್ನು ಹುಳಗಳು ಎಂದು ಮೂದಲಿಸುವ ಮುನ್ನ ತಾನು ಏನಾಗಿದ್ದೇನೆ ಎಂಬುದನ್ನು ತಿಳಿದಿರಬೇಕು. 

Advertisement

ಅರಿಷಡ್ವರ್ಗಗಳನ್ನು ತೊರೆಯುವುದು ಕಷ್ಟ. ಆದರೆ ತೊರೆಯದೇ ಶಾಂತಿ ಸಿಗುವುದಿಲ್ಲ. ಎಲ್ಲರೂ ಹರಿಶ್ಚಂದ್ರರಲ್ಲ. ಆದರೆ ಪ್ರಯತ್ನವಾದರೂ ಪಡಬೇಕು. 

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next